ವೀಡಿಯೊ…| ಹೋಂ ವರ್ಕ್‌ ಮಾಡದ್ದಕ್ಕೆ ಶಾಲೆಯಲ್ಲಿ 7 ವರ್ಷದ ಬಾಲಕನ ತಲೆ ಕೆಳಗಾಗಿ ನೇತುಹಾಕಿ ಥಳಿತ…!

ಹರಿಯಾಣದ ಪಾಣಿಪತ್‌ನ (Panipat) ಶ್ರೀಜನ್ ಪಬ್ಲಿಕ್ ಶಾಲೆಯಲ್ಲಿ ಹೋಮ್ ವರ್ಕ್ (Home Work) ಮಾಡದ ಕಾರಣಕ್ಕೆ ಶಿಕ್ಷಕಿಯೊಬ್ಬಳು ಎರಡನೇ ತರಗತಿಯ ವಿದ್ಯಾರ್ಥಿಯನ್ನು ಕೈಕಾಲು ಕಟ್ಟಿ, ತಲೆಕೆಳಗಾಗಿ ನೇತುಹಾಕಿ ಥಳಿಸಿದ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಕೃತ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಗಸ್ಟ್ 13 ರಂದು … Continued

ಕಳ್ಳರೆಂದು ಭಾವಿಸಿ ಗೂಗಲ್ ಮ್ಯಾಪ್‌ ತಂಡದವರನ್ನು ಥಳಿಸಿದ ಗ್ರಾಮಸ್ಥರು….!

ಕಾನ್ಪುರ : ಶಂಕಿತ ಕಳ್ಳರೆಂದು ತಪ್ಪಾಗಿ ಭಾವಿಸಿ ಗ್ರಾಮಸ್ಥರು ಗೂಗಲ್ ನಕ್ಷೆಗಳ ಸಮೀಕ್ಷಾ ತಂಡವನ್ನು ಸುತ್ತುವರೆದು ಹಲ್ಲೆ ನಡೆಸಿದ ಘಟನೆ ಗುರುವಾರ ಗುರುವಾರ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ರಾತ್ರಿ ವೇಳೆ ಕ್ಯಾಮೆರಾ ಅಳವಡಿಸಿದ ವಾಹನವನ್ನು ಬಳಸಿಕೊಂಡು ಸ್ಥಳೀಯ ಬೀದಿಗಳನ್ನು ನಕ್ಷೆ ಮಾಡುತ್ತಿದ್ದಾಗ ಈ ಘಟನೆ ಕಾನ್ಪುರ ಸಮೀಪದ ಘಟಂಪುರದ ಮಹೋಲಿಯಾ ಗ್ರಾಮದಲ್ಲಿ … Continued

ಅಧಿಕಾರಿಯನ್ನು ಕಚೇರಿಯಿಂದ ಹೊರಗೆಳೆದು ಥಳಿತ, ಮುಖಕ್ಕೆ ಒದ್ದು ಹಲ್ಲೆ : ಮೂವರ ಬಂಧನ-ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭುವನೇಶ್ವರ: ಭುವನೇಶ್ವರ ಮಹಾನಗರ ಪಾಲಿಕೆ (ಬಿಎಂಸಿ) ಕಚೇರಿಯಲ್ಲಿ ಹಿರಿಯ ಅಧಿಕಾರಿಯ ಮೇಲೆ ಗುಂಪೊಂದು ಸೋಮವಾರ ಹಲ್ಲೆ ನಡೆಸಿದ ನಂತರ ಭಾರೀ ನಾಟಕೀಯ ವಾತಾವರಣ ನಿರ್ಮಾಣವಾಯಿತು. ಆಘಾತಕಾರಿ ವಿಡಿಯೋದಲ್ಲಿ, ಬಿಎಂಸಿಯ ಹೆಚ್ಚುವರಿ ಆಯುಕ್ತ ರತ್ನಾಕರ್ ಸಾಹೂ ಅವರನ್ನು ಆ ವ್ಯಕ್ತಿಗಳು ತಮ್ಮ ಕಚೇರಿಯಿಂದ ಹೊರಗೆ ಎಳೆದುಕೊಂಡು ಹೋಗಿ, ಪದೇ ಪದೇ ಹೊಡೆದು, ಮುಖಕ್ಕೆ ಒದೆಯುತ್ತಿರುವುದು ಕಂಡುಬಂದಿದೆ. ಕುಂದುಕೊರತೆ … Continued

ಬಾಂಗ್ಲಾದೇಶದಲ್ಲಿ ಹಿಂದೂ ನಾಯಕನ ಅಪಹರಣ ಮಾಡಿ ಬಡಿದು ಕೊಂದರು…!

ಢಾಕಾ: ಬಾಂಗ್ಲಾದೇಶದ ದಿನಾಜಪುರ ಜಿಲ್ಲೆಯಲ್ಲಿ ಹಿಂದೂ ಸಮುದಾಯದ ಪ್ರಮುಖ ನಾಯಕನೊಬ್ಬನನ್ನು ಅವರ ಮನೆಯಿಂದ ಅಪಹರಿಸಿ ಥಳಿಸಿ ಹತ್ಯೆ ಮಾಡಲಾಗಿದೆ ಎಂದು ಶುಕ್ರವಾರ ಮಾಧ್ಯಮ ವರದಿಯೊಂದು ತಿಳಿಸಿದೆ. ಢಾಕಾದಿಂದ ವಾಯುವ್ಯಕ್ಕೆ ಸುಮಾರು 330 ಕಿಲೋಮೀಟರ್ ದೂರದಲ್ಲಿರುವ ದಿನಾಜಪುರದ ಬಸುದೇಬಪುರ ಗ್ರಾಮದ ನಿವಾಸಿ ಭಬೇಶಚಂದ್ರ ರಾಯ್ (58) ಅವರ ಶವ ಗುರುವಾರ ರಾತ್ರಿ ಪತ್ತೆಯಾಗಿದೆ ಎಂದು ಪೊಲೀಸರು ಮತ್ತು … Continued

ಬೈಕ್ ಕಳ್ಳತನದ ಶಂಕೆ : ವ್ಯಕ್ತಿಯನ್ನು ತಲೆಕೆಳಗಾಗಿ ನೇತುಹಾಕಿ ಥಳಿಸಿದ ಗುಂಪು

ಬಾರ್ಮರ್ : ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಬೈಕ್ ಕಳ್ಳತನದ ಶಂಕೆಯ ಮೇಲೆ ಜನರ ಗುಂಪೊಂದು ವ್ಯಕ್ತಿಯೊಬ್ಬನನ್ನು ಮರಕ್ಕೆ ತಲೆಕೆಳಗಾಗಿ ನೇತುಹಾಕಿ ಕ್ರೂರವಾಗಿ ಥಳಿಸಿದ ಘಟನೆ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ಗುಢಾ ಮಲಾನಿ ಪ್ರದೇಶದ ಭಖರ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶ್ರವಣಕುಮಾರ ಎಂಬಾತ ಪ್ರತ್ಯೇಕ ಕಳ್ಳತನ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. … Continued

ವೀಡಿಯೊ…| ಬಾಂಗ್ಲಾದೇಶದ ಬಂಧಿತ ಹಿಂದೂ ಧಾರ್ಮಿಕ ಸಂತನ ಬೆಂಬಲಿಗರನ್ನು ನ್ಯಾಯಾಲಯದ ಹೊರಗೆ ಥಳಿಸಿದ ಪೊಲೀಸರು…

ಚಟ್ಟೋಗ್ರಾಮ (ಬಾಂಗ್ಲಾದೇಶ) : ಮಂಗಳವಾರ ಬಾಂಗ್ಲಾದೇಶದ ಚಟ್ಟೋಗ್ರಾಮದ ನ್ಯಾಯಾಲಯದ ಹೊರಗೆ ಬಂಧಿತ ಹಿಂದೂ ಸಂತ ಚಿನ್ಮಯ ಕೃಷ್ಣ ದಾಸ ಅವರ ಬೆಂಬಲಿಗರು ಮತ್ತು ಪೊಲೀಸರು ನಡುವೆ ಘರ್ಷಣೆಗಳು ನಡೆದವು. ಅಲ್ಪಸಂಖ್ಯಾತ ಹಿಂದೂ ಸಮುದಾಯದವರು ಎಂದು ನಂಬಲಾದ ನೂರಾರು ಜನರು, ಇಸ್ಕಾನ್ ಸ್ವಾಮೀಜಿ ಅವರನ್ನು ದೇಶದ್ರೋಹ ಪ್ರಕರಣದಲ್ಲಿ ಬಂಧಿಸಿರುವುದನ್ನು ವಿರೋಧಿಸಿ ನ್ಯಾಯಾಲಯದ ಆವರಣದ ಹೊರಗೆ ಜಮಾಯಿಸಿದ್ದರು. ಬಾಂಗ್ಲಾದೇಶ … Continued