ವಿಡಿಯೊ | ಮೆರ್ಸಿಡಿಸ್ ಕಾರಿನಡಿಗೆ ಸಂಪೂರ್ಣವಾಗಿ ಸಿಲುಕಿದ ಕೆಲ ಕ್ಷಣಗಳಲ್ಲೇ ಎದ್ದು ನಡೆದು ಅಚ್ಚರಿ ಮೂಡಿಸಿದ ವ್ಯಕ್ತಿ…!

ಚಂಡೀಗಢ: ನಗರದ ಸೆಕ್ಟರ್–26 ಪ್ರದೇಶದಲ್ಲಿ ಮೆರ್ಸಿಡಿಸ್ ಕಾರೊಂದು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿ ಇಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಶನಿವಾರ ಸಂಜೆ ನಡೆದಿದೆ. ಈ ಹಿಟ್-ಅಂಡ್-ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯಗಳು ಇದೀಗ ಹೊರಬಿದ್ದಿದ್ದು, ಕಾರು ವ್ಯಕ್ತಿಯ ಮೇಲೆ ಚಲಿಸಿದರೂ ಕೆಲವೇ ಕ್ಷಣಗಳಲ್ಲಿ ವ್ಯಕ್ತಿ ಏನೂ ಆಗದವನಂತೆ ಎದ್ದು ನಡೆಯುತ್ತಿರುವ ದೃಶ್ಯವೂ ಕಂಡುಬಂದಿದೆ. … Continued

ಮೈ ಜುಂ ಎನ್ನುವ ವೀಡಿಯೊ : ಒಮ್ಮೆಗೇ ಧುಮ್ಮಿಕ್ಕಿದ ನೀರಿನ ಝರಿಯಲ್ಲಿ ಜಾರಿಬಿದ್ದ 6 ಮಹಿಳೆಯರು ಸ್ವಲ್ಪದರಲ್ಲೇ ಪಾರು…!

ಗಯಾ: ಬಿಹಾರದ ಗಯಾ ಜಿಲ್ಲೆಯ ಲಂಗುರಿಯಾ ಬೆಟ್ಟದ  ದೊಡ್ಡ ಝರಿಯಲ್ಲಿ ಹಠಾತ್‌ ಹೆಚ್ಚಾದ ನೀರಿನ ರಭಸಕ್ಕೆ ಜಾರಿದ ಆರು ಮಹಿಳೆಯರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ನಡೆದ ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಜಲಮೂಲಗಳ ಬಳಿ ಮಳೆಗಾಲದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಜ್ಞಾಪನೆಯೂ ಆಗಿದೆ. ಸುಮಾರು ಎರಡು … Continued

ಸ್ಕೂಟಿ ಮೇಲೆ ಹತ್ತಿದ ಬ್ಯಾಲೆನ್ಸ್ ತಪ್ಪಿ ಹಿಂದೆ ಬರುತ್ತಿದ್ದ ಟ್ರಕ್ ; ಮುಂದೇನಾಯ್ತೆಂದರೆ…

ಕೋಝಿಕ್ಕೋಡ್: ಶುಕ್ರವಾರ ಕೇರಳದ ಕೋಝಿಕ್ಕೋಡ್‌ನಲ್ಲಿ ಸ್ಕೂಟಿಯ ಮುಂದೆ ಚಲಿಸುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಲು ಪ್ರಾರಂಭಿಸಿದಾಗ ಮಹಿಳೆಯೊಬ್ಬರು ಅದೃಷ್ಟಶಾತ್‌ ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪೆರಿಂಗಲಂ ಪಟ್ಟಣದ ರಸ್ತೆಯ ಬೆಟ್ಟದ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ 7:30 ರ ಸುಮಾರಿಗೆ … Continued

ಮೈ ಜುಂ ಎನ್ನುವ ವೀಡಿಯೊ | ಕಾಜಿರಂಗದಲ್ಲಿ ಸಫಾರಿ ಜೀಪಿನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು…

ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಆತಂಕಕಾರಿ ವೀಡಿಯೊವೊಂದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಫಾರಿ ವೇಳೆ ಅದೃಷ್ಟವಶಾತ್‌ ತಾಯಿ-ಮಗಳು ಅಪಾಯದಿಂದ ಪಾರಾಗಿದ್ದಾರೆ. ತಾಯಿ ಮತ್ತು ಅವರ ಮಗಳು ಚಲಿಸುತ್ತಿದ್ದ ಸಫಾರಿ ಜೀಪ್‌ನಿಂದ ಘೇಂಡಾಮೃಗಗಳ ಮುಂದೆ ಬಿದ್ದಿದ್ದಾರೆ. ಘೇಂಡಾಮೃಗವೊಂದು ದಾಳಿ ಮಾಡಲು ಸಿದ್ಧವಾಗಿದ್ದರೂ ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈರಲ್ ವೀಡಿಯೊದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಸಫಾರಿ ಜೀಪ್‌ಗಳು ತಿರುಗುತ್ತಿರುವಾಗ ಯುವತಿ … Continued

ವೀಡಿಯೊ..| ಮುಂಬೈ ಬಳಿ 6 ವರ್ಷದ ಮಗುವಿನ ಮೇಲೆ ಚಲಿಸಿದ ಕಾರು ; ಪವಾಡಸದೃಶ ರೀತಿಯಲ್ಲಿ ಪಾರಾದ ಮಗು..!

ಮುಂಬೈ: ಮುಂಬೈ ಸಮೀಪದ ವಸಾಯಿ ಎಂಬಲ್ಲಿ ಕಾರೊಂದು ಢಿಕ್ಕಿ ಹೊಡೆದು 6 ವರ್ಷದ ಬಾಲಕ ಗಾಯಗೊಂಡಿದ್ದರೂ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವೀಡಿಯೊ ಕ್ಲಿಪ್‌ ಒಂದರಲ್ಲಿ ಕಾರು ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆಯುವುದನ್ನು ತೋರಿಸುತ್ತದೆ. ಆತನನ್ನು ಸ್ವಲ್ಪದೂರ ಎಳೆದೊಯ್ದ ನಂತರ ಆತ ಕಾರಿನಿಂದ ಅಡಿಯಿಂದ ಹೊರಬೀಳುವುದು ಕಾಣುತ್ತದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಸಾಯಿ … Continued

ವೀಡಿಯೊ..| ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕನ ಮೇಲೆ ಹರಿದ ಬಸ್‌ ; ಪವಾಡಸದೃಶ ರೀತಿಯಲ್ಲಿ ಪಾರಾದ ಪ್ರಯಾಣಿಕ…!

ಕೇರಳದ ಟರ್ಮಿನಲ್ ಬಸ್‌ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದಾಗ ಬಸ್ ಡಿಕ್ಕಿ ಹೊಡೆದರೂ ಯುವಕನೊಬ್ಬ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾನೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಡುಕ್ಕಿ ಜಿಲ್ಲೆಯ ಕುಮಲಿ ಮೂಲದ ವಿಷ್ಣು ಎಂದು ಗುರುತಿಸಲಾದ ವ್ಯಕ್ತಿ ಡಿಸೆಂಬರ್ 1 ರಂದು ಕಟ್ಟಪ್ಪನ ಹೊಸ ಬಸ್ ನಿಲ್ದಾಣ ಟರ್ಮಿನಲ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ. ವೀಡಿಯೋದಲ್ಲಿ, … Continued