ಅಂಕೋಲಾ : ಗಂಗಾವಳಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ, ಸ್ಥಳೀಯರಿಗೆ ಆತಂಕ | ವೀಕ್ಷಿಸಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊಸಕಂಬಿ ಸೇತುವೆ ಬಳಿ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಇದು ಸುಮಾರು 7 ಅಡಿಗಳಷ್ಟು ಉದ್ದವಿರುವ ಬೃಹತ್ ಮೊಸಳೆ ಎನ್ನಲಾಗಿದೆ. ಮೊಸಳೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನದಿ ಪಾತ್ರದ ನಿವಾಸಿಗಳಲ್ಲಿ ಆತಂಕ ಎದುರಾಗಿದೆ. ಅವರು ಹೆಚ್ಚಾಗಿ ನದಿಯನ್ನು ಅವಲಂಬಿಸಿರುವುದರಿಂದ ಅವರಿಗೆ ಆತಂಕ ಎದುರಾಗಿದೆ. ನದಿ ತೀರದಲ್ಲಿ … Continued

ಅಂಕೋಲಾ: ಹಿರಿಯ ಯಕ್ಷಗಾನ ಕಲಾವಿದ ವಿಠೋಬ ನಾಯಕ ನಿಧನ

ಅಂಕೋಲಾ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರಾದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿಠೋಬ ನಾಯಕ ವಂದಿಗೆ (88) ಅವರು ಗುರುವಾರ ನಿಧನರಾಗಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಸುಮಾರು 50 ವರ್ಷಗಳಿಗೂ ಹೆಚ್ಚಿನ ಕಾಲ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವಾರು ಪಾತ್ರಗಳಿಗೆ ಜೀವಂತಿಕೆ ತುಂಬಿದ್ದರು. ಅವರು ತಮ್ಮ ಗಂಭೀರ ಪಾತ್ರನಿರ್ವಹಣೆ, … Continued

ಅಂಕೋಲಾ: ಸಂಶಯಕ್ಕೆ ಕಾರಣವಾದ ಗೋಡೆಗೆ ಅಂಟಿಸಿದ ಚಿತ್ರ-ವಿಚಿತ್ರ ಬರಹದ ಪೋಸ್ಟರುಗಳು…!

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಂಡೀಬಜಾರದ ನಾಲ್ಕು ರಸ್ತೆ ಕೂಡಿದ ಚಿಕನ್ ಅಂಗಡಿಯ ಪಕ್ಕದ ಸ್ಪೋರ್ಟ್ಸ್ ಅಂಗಡಿಯ ಗೋಡೆಗೆ ಮೂರು ಪೋಸ್ಟರಗಳನ್ನು ಅಂಟಿಸಲಾಗಿದೆ. ಬೆಳಿಗ್ಗೆ ಹಲವರು ಇದನ್ನು ಗಮನಿಸಿದ್ದಾರೆ ಬಿಳಿ ಗಾಳೆಯ ಮೇಲೆ ಕೆಂಪು ಬಣ್ಣದ ಮಾರ್ಕರ್ ನಿಂದ ಈ ಬರಹಗಳನ್ನು ಬರೆಯಲಾಗಿದೆ. ಈ ಬರಹಗಳನ್ನು ಯಾರು ಬರೆದು ಅಂಟಿಸಿದ್ದಾರೆಂಬುದು ಗೊತ್ತಾಗಿಲ್ಲ. ಇಂಗ್ಲಿಷ್ ನಲ್ಲಿ … Continued

ವೀಡಿಯೊ..:.ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ-ತುಳಸಿ ಗೌಡರಿಗೆ ಶಿರಬಾಗಿ ನಮಸ್ಕರಿಸಿದ ಪ್ರಧಾನಿ ಮೋದಿ | ವೀಕ್ಷಿಸಿ

ಅಂಕೋಲಾ : ಅಂಕೋಲಾ : ಬಿಜೆಪಿ ಪ್ರಚಾರಾರ್ಥ ಅಂಕೋಲಾಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಬುಡಕಟ್ಟು ಹಾಲಕ್ಕಿ ಸಮುದಾಯದ ಪದ್ಮಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಗೌಡ ಮತ್ತು ತುಳಸಿ ಗೌಡ ಅವರನ್ನು ಭೇಟಿಯಾದರು, ನಂತರ ಅವರಿಗೆ ಶಿರಬಾಗಿ ನಮಸ್ಕರಿಸಿದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹಟ್ಟಿಕೇರಿಯ ಟೋಲ್ ಗೇಟ್ ಬಳಿಯ ಗೌರಿಕೆರೆಯಲ್ಲಿ ಬಿಜೆಪಿ ಸಮಾವೇಶದಲ್ಲಿ ಜಿಲ್ಲೆಯ ಆರು … Continued

ಉದ್ಯಮಿ ಆನಂದ ಮಹಿಂದ್ರಾ ಗಮನ ಸೆಳೆದ ಅಂಕೋಲಾ ಬಸ್‌ ನಿಲ್ದಾಣದಲ್ಲಿನ ಹಾಲಕ್ಕಿ ಮಹಿಳೆಯ ಸ್ವಚ್ಛತೆ | ವೀಕ್ಷಿಸಿ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸಿನಿಂದ ಹೊರಚೆಲ್ಲಿದ ಕಸ ಆರಿಸಿ ಕಸದ ಬುಟ್ಟಿಗೆ ಹಾಕುತ್ತಿರುವ ಹಾಲಕ್ಕಿ ಮಹಿಳೆಯ ಸ್ವಚ್ಛತಾ ಕಳಕಳಿಯ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ಈ ಮಹಿಳೆಯ ಕೆಲಸಕ್ಕೆ ಹಲವಾರು ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬೇಸಿಗೆ ಸಮಯದಲ್ಲಿ ಸಿಗುವ ಕಾಡು ಹಣ್ಣುಗಳನ್ನು … Continued

ಅಂಕೋಲೆಯ ಸುಪ್ರಸಿದ್ಧ ಕರಿ ಇಷಾಡು ಮಾವಿಗೆ ಈಗ ಜಿಐ ಟ್ಯಾಗ್ ಹೆಗ್ಗಳಿಕೆ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಬೆಳೆಯುವ ಸುಪ್ರಸಿದ್ಧ ಕರಿ ಇಷಾಡು ಮಾವು ಅತ್ಯಂತ ಸ್ವಾದಿಷ್ಟ ಫಲವಾಗಿದ್ದು, ಇದರ ವಿಶೇಷ ಸ್ವಾದಿಷ್ಟಕ್ಕೆ ಹೆಗ್ಗಳಿಕೆಯಾಗಿ ಈಗ ಭೌಗೋಳಿಕ ಹೆಗ್ಗುರುತಿನ ಆಧಾರದ ಮೇಲೆ ನೀಡುವ ಜಿಐ (Geographical Indication Tags) ಟ್ಯಾಗ್ ಮಾನ್ಯತೆ ದೊರೆತಿದೆ. ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಪ್ರಕಾರ, ಜಿಯೋಗ್ರಾಫಿಕಲ್ ಇಂಡಿಕೇಶನ್ (ಜಿಐ) ಟ್ಯಾಗ್ … Continued

ಅಂಕೋಲಾ: ವಿಷ ಸೇವಿಸಿ ಯುವಕ ಆತ್ಮಹತ್ಯೆ

ಅಂಕೋಲಾ: ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಹಾರವಾಡ ತರಂಗಮೇಟ ನಿವಾಸಿ ಅಜಯ ಕುಲಮಣಿ ಫಂಡಾ(26) ಮೃತ ಯುವಕನಾಗಿದ್ದು ಈತ ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಹಾಗೂ ಹಾರವಾಡದ ದುರ್ಗಾದೇವಿ ಜಾತ್ರೆ ಪ್ರಯುಕ್ತ ಒಂದು ವಾರದ ಹಿಂದೆ ಊರಿಗೆ ಆಗಮಿಸಿದ್ದ. ಈತ … Continued

ಅಂಕೋಲಾ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಅಂಕೋಲಾ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಕೀಟನಾಶ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಳಂಬಾರದ ತಾಳೇಬೈಲಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತ ವಿದ್ಯಾರ್ಥಿನಿಯನ್ನು ತಾಳೇಬೈಲ್ ನಿವಾಸಿ ಶಿಲ್ಪಾ ಆರ್. ಗೌಡ (17) ಎಂದು ಗುರುತಿಸಲಾಗಿದೆ. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಈಕೆ ಈಗ ನಡೆಯುತ್ತಿರುವ … Continued

ಅಂಕೋಲಾ: ಹೊಸವರ್ಷದ ಮೊದಲ ದಿನವೇ ಭೀಕರ ಅಪಘಾತ, ನಾಲ್ವರು ಸಾವು

ಅಂಕೋಲಾ: ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಹೊರವಲಯದ ಬಾಳೆಗುಳಿ ಕ್ರಾಸ್‌ ಸಮೀಪದ ವರದರಾಜ ಹೊಟೇಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು  ಮೃತಪಟ್ಟವರು ತಮಿಳುನಾಡು ಮೂಲದವರು. ಮೃತರನ್ನು ಅರುಣ ಪಾಂಡ್ಯನ್, ನಿಫುಲ್, … Continued

ಅಂಕೋಲಾ: ಕುಡಿಯುವ ನೀರಿನ ಬಾವಿಗಳಲ್ಲಿ ಡೀಸೆಲ್ ಯುಕ್ತ ನೀರು…!

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಮಠಾಕೇರಿ ಕ್ರಾಸ್ ಬಳಿ ಕುಡಿಯುವ ನೀರಿನ ಬಾವಿಗಳಲ್ಲಿ ಡಿಸೇಲ್ ಅಂಶ ಕಂಡು ಬಂದಿದ್ದು ಕಂಗಾಲಾದ ಮನೆ ಮಾಲಿಕರು ಪುರಸಭೆಗೆ ದೂರು ನೀಡಿದ್ದಾರೆ. ಕಳೆದ 3 ದಿನಗಳಿಂದ ಮಠಾಕೇರಿ ಕ್ರಾಸ್ ಬಳಿಯ ಗಣಪತಿ ವೆಂಕಟ್ರಮಣ ಕಿಣಿ ಮತ್ತು ಸಂತೋಷ ಗಣೇಶ ನಾಯಕ ಎನ್ನುವವರ ಎರಡು ಬಾವಿಗಳ ನೀರಿನಲ್ಲಿ ಡಿಸೇಲ್ … Continued