ಭೀಕರ ಅಪಘಾತ : ಜಲ್ಲಿ ಲಾರಿ ಬಸ್‌ ಡಿಕ್ಕಿ ; 20 ಮಂದಿ ಸಾವು

ಹೈದರಾಬಾದ್: ಇಂದು (ಸೋಮವಾರ) (ನವೆಂಬರ್ 3)‌ ಬೆಳಿಗ್ಗೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಹೈದರಾಬಾದ್-ಬಿಜಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಬಸ್‌ಗೆ ಜಲ್ಲಿಕಲ್ಲು ತುಂಬಿದ್ದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TSRTC) ಗೆ ಸೇರಿದ ಈ ಬಸ್‌ನಲ್ಲಿ ಸುಮಾರು 70 ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ಬಸ್ ವಿಕಾರಾಬಾದ್ ಜಿಲ್ಲೆ ತಾಂಡೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿತ್ತು.
ನಿರ್ಮಾಣ ಸಾಮಗ್ರಿ (ಜಲ್ಲಿಕಲ್ಲು) ತುಂಬಿದ್ದ ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ, ಟ್ರಕ್‌ನಲ್ಲಿದ್ದ ಜಲ್ಲಿಕಲ್ಲು ಬಸ್‌ ಮೇಲೆ ಬಿದ್ದು ಅನೇಕ ಪ್ರಯಾಣಿಕರು ಅದರಡಿಯಲ್ಲಿ ಸಿಲುಕಿಕೊಂಡರು. ಮೃತಪಟ್ಟವರಲ್ಲಿ 10 ತಿಂಗಳ ಮಗು, 10 ಮಹಿಳೆಯರು ಮತ್ತು ಎರಡೂ ವಾಹನಗಳ ಚಾಲಕರು ಸೇರಿದ್ದಾರೆ. ಗಾಯಗೊಂಡ ಹಲವಾರು ಪ್ರಯಾಣಿಕರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ರಕ್ಷಣಾ ಕಾರ್ಯಕರ್ತರು ಅವರನ್ನು ಹೊರತೆಗೆಯಲು ಹರಸಾಹಸ ಪಟ್ಟರು. ಮೃತದೇಹಗಳನ್ನು ಹೊರತರಲು ರಕ್ಷಣಾ ತಂಡಗಳು ಬಸ್ಸಿನ ಭಾಗಗಳನ್ನು ಕತ್ತರಿಸಬೇಕಾಯಿತು.
ಚಾಲಕನ ಸೀಟಿನ ಹಿಂದಿನ ಆರು ಸಾಲುಗಳಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ತೀವ್ರ ಹೊಡೆತ ಬಿದ್ದಿದ್ದು, ಆ ಭಾಗದಲ್ಲಿ ಕುಳಿತಿದ್ದ ಹೆಚ್ಚಿನ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement