₹6,000ಕ್ಕೆ ಕೆಲಸಕ್ಕೆ ಸೇರಿದ್ದ ಸರ್ಕಾರಿ ಇಂಜಿನಿಯರ್ ಬ್ಯಾಂಕ್ ಲಾಕರ್‌ನಲ್ಲಿ ₹2 ಕೋಟಿ ನಗದು ಪತ್ತೆ ; 13 ಸೈಟು, 5 ಬಹುಮಹಡಿ ಕಟ್ಟಡ ಜಪ್ತಿ !

ಭುವನೇಶ್ವರ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಒಡಿಶಾ ಜಾಗೃತ ದಳ (ವಿಜಿಲೆನ್ಸ್) ಶನಿವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸರ್ಕಾರಿ ಇಂಜಿನಿಯರ್ ಒಬ್ಬರಿಗೆ ಸೇರಿದ 9 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ವೇಳೆ ಇಂಜಿನಿಯರ್ ಕುಟುಂಬಕ್ಕೆ ಸೇರಿದ ಬ್ಯಾಂಕ್ ಲಾಕರ್‌ಗಳಿಂದ ಬರೋಬ್ಬರಿ 2 ಕೋಟಿ ರೂಪಾಯಿ ನಗದು ಹಣವನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. … Continued