ಮೃತ ತಂದೆ- ಪ್ರಜ್ಞಾಹೀನ ತಾಯಿಯ ಕಾಯುತ್ತ ಇಡೀ ರಾತ್ರಿ ಕಾಡಿನಲ್ಲಿ ಕಳೆದ ಐದು ವರ್ಷದ ಪುಟಾಣಿ…!

ದೇವಗಢ (ಒಡಿಶಾ): ಕೌಟುಂಬಿಕ ಕಲಹವೊಂದು ಸುಂದರ ಸಂಸಾರವನ್ನು ಹೇಗೆ ಛಿದ್ರಗೊಳಿಸಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಕ್ಷಣಿಕ ಕೋಪಕ್ಕೆ ಬಲಿಯಾದ ದಂಪತಿ ಕಾಡಿನ ನಡುವೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಐದು ವರ್ಷದ ಪುಟ್ಟ ಮಗ ಇಡೀ ರಾತ್ರಿ ಅಪ್ಪ-ಅಮ್ಮನ ಪಕ್ಕದಲ್ಲೇ ಕುಳಿತು, ಅವರು ಏಳಬಹುದು ಎಂದು ಕಾಯುತ್ತಾ ದಟ್ಟ ಕಾಡಿನ ಕತ್ತಲಲ್ಲಿ ಕಳೆದಿದ್ದಾನೆ. … Continued

1.1 ಕೋಟಿ ರೂ. ಬಹುಮಾನ ಹೊಂದಿದ್ದ ಟಾಪ್ ನಕ್ಸಲ್ ನಾಯಕ ಗಣೇಶ ಉಯಿಕೆ ಹತ

ಭುವನೇಶ್ವರ/ಹೈದರಾಬಾದ್: ಒಡಿಶಾದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಗುರುವಾರ ಐತಿಹಾಸಿಕ ಯಶಸ್ಸು ಸಾಧಿಸಿವೆ. ಸಿಪಿಐ (ಮಾವೋವಾದಿ) ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಹಾಗೂ ಒಡಿಶಾ ಕಾರ್ಯಾಚರಣೆಗಳ ಮುಖ್ಯಸ್ಥ, 69 ವರ್ಷದ ಗಣೇಶ ಉಯಿಕೆ ಅಲಿಯಾಸ್ ಪಕ್ಕಾ ಹನುಮಂತು ಎಂಬಾತನನ್ನು ಬಿಎಸ್ಎಫ್ (BSF) ಮತ್ತು ಸಿಆರ್‌ಪಿಎಫ್ (CRPF) ಪಡೆಗಳು ಎನ್ಕೌಂಟರ್‌ನಲ್ಲಿ ಹೊಡೆದುರುಳಿಸಿವೆ. ಕಂಧಮಾಲ್ ಮತ್ತು ಗಂಜಾಂ … Continued

ಮೊಂತಾ ಚಂಡಮಾರುತ : 72 ರೈಲುಗಳ ಸಂಚಾರ ರದ್ದು, ಹಲವು ವಿಮಾನಗಳ ಸಂಚಾರ ಸ್ಥಗಿತ

ವಿಶಾಖಪಟ್ಟಣಂ: ‘ಮೊಂತಾ’ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿಯನ್ನು ಅಪ್ಪಳಿಸುತ್ತಿರುವ ಹಿನ್ನೆಲೆಯಲ್ಲಿ, ರೈಲ್ವೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ72ಕ್ಕೂ ಹೆಚ್ಚು ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದಾರೆ. ಈ ರದ್ದತಿಯು ಅಕ್ಟೋಬರ್ 28 ಮತ್ತು 29ರ ಮಧ್ಯೆ ಜಾರಿಯಲ್ಲಿರಲಿದ್ದು, ವಿಜಯವಾಡ, ರಾಜಮಂಡ್ರಿ, ಕಾಕಿನಾಡ, ವಿಶಾಖಪಟ್ಟಣಂ ಮತ್ತು ಭೀಮಾವರಂ ಮಾರ್ಗಗಳ ಪ್ರಮುಖ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಹವಾಮಾನ … Continued

ಹಾಸ್ಟೆಲಿನಲ್ಲಿ ತಮಾಷೆ ಮಾಡಲು ಹೋಗಿ 8 ಮಕ್ಕಳು ಆಸ್ಪತ್ರೆಗೆ ದಾಖಲು; ಅಂಟು ಹಾಕಿದ್ದರಿಂದ ಕಣ್ಣನ್ನೇ ತೆರೆಯಲು ಬರುತ್ತಿಲ್ಲ…!

ಭುವನೇಶ್ವರ: ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ತಮಾಷೆ ಮಾಡಲು ಹೋಗಿ ಎಂಟು ವಿದ್ಯಾರ್ಥಿಗಳು ಮಲಗಿದ್ದಾಗ ಅವರ ಕಣ್ಣುಗಳಿಗೆ ತಕ್ಷಣವೇ ಹಿಡಿದುಕೊಳ್ಳುವ ಅಂಟು ಹಾಕಿದ್ದರಿಂದ ಅದು ಗಂಭೀರವಾಗಿ ಪರಿಣಮಿಸಿತು. ಮಕ್ಕಳು ಎಚ್ಚರವಾದಾಗ ಅವರ ಕಣ್ಣುರೆಪ್ಪೆಗಳನ್ನು ತೆರೆಯಲು ಬರುತ್ತಿರಲಿಲ್ಲ. ಈಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಡಳಿತವು ಆಘಾತಕಾರಿ ಪ್ರಕರಣದ ತನಿಖೆಗೆ ಆದೇಶಿಸಿದೆ. ಕಂಧಮಾಲ್‌ನ ಸಲಗುಡದಲ್ಲಿರುವ ಸೇವಾಶ್ರಮ ಶಾಲೆಯಲ್ಲಿ ಈ ಘಟನೆ … Continued

ಆಘಾತಕಾರಿ ವೀಡಿಯೊ…| ಜಲಪಾತದಲ್ಲಿ ರೀಲ್ಸ್‌ ಮಾಡುವಾಗ ನೋಡ ನೋಡುತ್ತಲೇ ಕೊಚ್ಚಿಹೋದ ಯೂ ಟ್ಯೂಬರ್

ಒಡಿಶಾದ ಕೊರಾಪುಟ್ ಜಿಲ್ಲೆಯ ದುಡುಮಾ ಜಲಪಾತದಲ್ಲಿ ರೀಲ್‌ಗಳನ್ನು ಚಿತ್ರೀಕರಿಸುವಾಗ ಯೂ ಟ್ಯೂಬರ್ ಒಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ಅವರನ್ನು ಗಂಜಾಂ ಜಿಲ್ಲೆಯ ಬೆರ್ಹಾಂಪುರ್‌ನ 22 ವರ್ಷದ ಸಾಗರ ತುಡು ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಗರ ತುಡು ಭಾನುವಾರ ಮಧ್ಯಾಹ್ನ ಡ್ರೋನ್ ಕ್ಯಾಮೆರಾ ಬಳಸಿ ಜಲಪಾತದಲ್ಲಿ ರೀಲ್‌ಗಳನ್ನು ರೆಕಾರ್ಡ್ ಮಾಡುತ್ತಿದ್ದಾಗ ಈ ಘಟನೆ … Continued

ಶಾಲೆಗೆ ಬೀಗ ಹಾಕಿಹೋದ ಸಿಬ್ಬಂದಿ ; ಹೊರಬರಲು ಯತ್ನಿಸಿ ಕಿಟಕಿಯಲ್ಲಿ ಸಿಲುಕಿದ 2ನೇ ತರಗತಿ ಹುಡುಗಿಯ ತಲೆ : ರಾತ್ರಿಯಿಡೀ ಹಾಗೆಯೇ ಕಳೆದ ಬಾಲಕಿ..!

ಕಿಯೋಂಝಾರ್ : ಗುರುವಾರ ಒಡಿಶಾದ ಪುಟ್ಟ ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ದುಃಸ್ವಪ್ನವೊಂದು ಸಂಭವಿಸಿದೆ. 2ನೇ ತರಗತಿಯ ಬಾಲಕಿ ಗುರುವಾರ ಬೆಳಿಗ್ಗೆ ಶಾಲೆಗೆ ಹೋಗಿದ್ದಳು, ಆದರೆ ಸಂಜೆ 4 ಗಂಟೆಗೆ ತರಗತಿಗಳು ಮುಗಿದ ನಂತರವೂ ಮನೆಗೆ ಹಿಂತಿರುಗಲಿಲ್ಲ. ಆಗಿದ್ದೇನೆಂದರೆ ಸರ್ಕಾರಿ ಶಾಲೆಯ ಸಿಬ್ಬಂದಿ ತರಗತಿಗೆ ಬೀಗ ಹಾಕಿ ದಿನದ ರಜೆಗಾಗಿ ಹೋದರು, ಏಳು ವರ್ಷದ ಬಾಲಕಿ … Continued

ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತ

ಬಾಲಾಸೋರ್‌ : ಭಾರತ ಬುಧವಾರ (ಆಗಸ್ಟ್ 20) ಒಡಿಶಾದ ಚಂದಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ತನ್ನ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು. ರಕ್ಷಣಾ ಸಚಿವಾಲಯವು ಒಂದು ಹೇಳಿಕೆಯಲ್ಲಿ, ಉಡಾವಣೆಯು ಎಲ್ಲಾ ಕಾರ್ಯಾಚರಣೆ ಮತ್ತು ತಾಂತ್ರಿಕ ನಿಯತಾಂಕಗಳು ಸರಿಯಾಗಿತ್ತು ಮತ್ತು ಕಾರ್ಯತಂತ್ರದ ಪಡೆಗಳ ಕಮಾಂಡ್‌ನ ಆಶ್ರಯದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದೆ ಎಂದು … Continued

ಒಡಿಶಾ ಮಾಜಿ ಸಿಎಂ ನವೀನ ಪಟ್ನಾಯಕ್ ಆಸ್ಪತ್ರೆಗೆ ದಾಖಲು

ಭುವನೇಶ್ವರ: ಒಡಿಶಾದ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ವಿಪಕ್ಷದ ನಾಯಕ ನವೀನ ಪಟ್ನಾಯಕ್ ಅವರನ್ನು ಭಾನುವಾರ ಸಂಜೆ ‘ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ, 78 ವರ್ಷದ ಬಿಜೆಡಿ ಅಧ್ಯಕ್ಷರಿಗೆ ದಿನದ ಆರಂಭದಲ್ಲಿ ಅಸ್ವಸ್ಥತೆ ಉಂಟಾಗಿದ್ದು, ಅವರನ್ನು ವೈದ್ಯಕೀಯ ಆರೈಕೆಗಾಗಿ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಿದ್ದಾರೆ ಮತ್ತು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ … Continued

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ; ಕಾಂಗ್ರೆಸ್ ವಿದ್ಯಾರ್ಥಿ ಘಟಕದ ನಾಯಕನ ಬಂಧನ

ಭುವನೇಶ್ವರ: 19 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಒಡಿಶಾ ಪೊಲೀಸರು ಭಾನುವಾರ ತಡರಾತ್ರಿ ಕಾಂಗ್ರೆಸ್‌ ವಿದ್ಯಾರ್ಥಿ ಘಟಕವಾದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ರಾಜ್ಯ ಘಟಕದ ಅಧ್ಯಕ್ಷ ಉದಿತ್ ಪ್ರಧಾನ ಅವರನ್ನು ಬಂಧಿಸಿದ್ದಾರೆ. 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಾರ್ಚ್‌ನಲ್ಲಿ ಹೋಟೆಲ್ ಕೋಣೆಯಲ್ಲಿ ಉದಿತ್‌ ಪ್ರಧಾನ ತನಗೆ ಮಾದಕ ದ್ರವ್ಯ … Continued

ಶಿಕ್ಷಕನಿಂದ ಲೈಂಗಿಕ ಕಿರುಕುಳ : ಕಾಲೇಜು ಆವರಣದಲ್ಲೇ ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿನಿ…!

ಬಾಲೇಶ್ವರ: ಒಡಿಶಾದ ಬಾಲಸೋರ್ ನಲ್ಲಿ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಆವರಣದಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ನಗರವನ್ನೇ ಬೆಚ್ಚಿಬೀಳಿಸಿದೆ. ಫಕೀರ್ ಮೋಹನ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಆವರಣದಲ್ಲೇ ಬೆಂಕಿ ಹಚ್ಚಿಕೊಂಡಿದ್ದಾಳೆ. ಕಾಲೇಜಿನ ಶಿಕ್ಷಕನ ದೀರ್ಘಕಾಲದ ಕಿರುಕುಳದಿಂದಾಗಿ ಹತಾಶಳಾದ ವಿದ್ಯಾರ್ಥಿನಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಘಟನೆ ಕಾಲೇಜಿನ ಹೊರಗೆ ಅಳವಡಿಸಲಾದ ಸಿಸಿಟಿವಿ … Continued