ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದಾಗ ಕುಸಿದು ಬಿದ್ದ ಸಚಿವ ರಾಮಚಂದ್ರನ್

ಕಣ್ಣೂರು: ಕೇರಳದ ಕಣ್ಣೂರಿನಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಸಚಿವ ಕಡನ್ನಪಲ್ಲಿ ರಾಮಚಂದ್ರನ್ ಅವರು ಭಾಷಣ ಮಾಡುತ್ತಿದ್ದಾಗಲೇ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ. ಕಣ್ಣೂರಿನ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ನಂತರ ಸಚಿವರು ಉದ್ಘಾಟನಾ ಭಾಷಣ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅವರಿಗೆ ತಲೆಸುತ್ತು ಕಾಣಿಸಿಕೊಂಡಿದ್ದು, ವೇದಿಕೆಯ ಮೇಲೆಯೇ ಕುಸಿದು ಬಿದ್ದರು. ತಕ್ಷಣವೇ … Continued

ದೆಹಲಿಯ ಕಾಂಗ್ರೆಸ್‌ ಸಭೆಗೆ ಗೈರು : ಪ್ರಧಾನಿ ಮೋದಿ ಕಾರ್ಯಕ್ರಮಕ್ಕಾಗಿ ಕೇರಳದಲ್ಲೇ ಉಳಿದ ಶಶಿ ತರೂರ್

ನವದೆಹಲಿ/ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಪೂರ್ವಸಿದ್ಧತೆ ಕುರಿತು ಚರ್ಚಿಸಲು ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರೆದಿದ್ದ ಮಹತ್ವದ ಸಭೆಗೆ ಸಂಸದ ಶಶಿ ತರೂರ್ ಗೈರಾಗಿದ್ದಾರೆ. ಇದು ಪಕ್ಷದೊಳಗೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ರಾಹುಲ್ ಗಾಂಧಿ ಮತ್ತು ಪಕ್ಷದ ನಾಯಕತ್ವದ ಮೇಲೆ ತರೂರ್ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.  ಆರಂಭದಲ್ಲಿ ತರೂರ್ ಅವರು ತಮಗೆ … Continued

ತನ್ನ ವಿರುದ್ಧ ಬಸ್ಸಿನಲ್ಲಿ ಲೈಂಗಿಕ ಕಿರುಕುಳದ ಆರೋಪದಿಂದ ನೊಂದು ವ್ಯಕ್ತಿ ಆತ್ಮಹತ್ಯೆ ; ಮಹಿಳೆಯ ಬಂಧನ

ಕೇರಳದ ಬಸ್ಸಿನಲ್ಲಿ 42 ವರ್ಷದ ವ್ಯಕ್ತಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದ 35 ವರ್ಷದ ಮಹಿಳಾ ಇನ್ಫ್ಲುಯೆನ್ಸರ್ (Influencer) ಅವರನ್ನು ಬಂಧಿಸಲಾಗಿದೆ. ಈಕೆಯ ಆರೋಪದಿಂದ ಮನನೊಂದ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿಬಂದ ನಂತರ ಈ ಬಂಧನವಾಗಿದೆ. ಕಳೆದ ವಾರ ಶಿಮ್ಜಿತಾ ಮುಸ್ತಫಾ ಮತ್ತು ದೀಪಕ ಯು ಎಂಬುವವರು ಒಂದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. … Continued

ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ 5 ವರ್ಷದ ಮಗುವಿನ ಗುಪ್ತಾಂಗ ಸುಟ್ಟ ಮಲತಾಯಿ

ಪಾಲಕ್ಕಾಡ್ (ಕೇರಳ): ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾಳೆಂದು ಐದು ವರ್ಷದ ಹೆಣ್ಣು ಮಗುವಿನ ಗುಪ್ತಾಂಗಕ್ಕೆ ಬಿಸಿ ಸೌಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಭೀಕರ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಂಜಿಕೋಡ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಕಳೆದ ವಾರ ಈ ಅಮಾನವೀಯ ಕೃತ್ಯ ನಡೆದಿದ್ದು, ಮಗು ಅಂಗನವಾಡಿಗೆ ಹೋದಾಗ ಶಿಕ್ಷಕಿಯ ಜಾಗರೂಕತೆಯಿಂದ ವಿಷಯ ಬೆಳಕಿಗೆ ಬಂದಿದೆ. … Continued

ಕೇರಳ ಗಡಿಭಾಗದ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ: ಕೇರಳ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು : ಕರ್ನಾಟಕದ ಗಡಿಭಾಗದ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಮೊದಲ ಭಾಷೆಯನ್ನಾಗಿ ಮಾಡುವ ಕೇರಳ ಸರ್ಕಾರದ ಕ್ರಮಕ್ಕೆ ಕರ್ನಾಟಕ ಸರ್ಕಾರ ಮತ್ತು ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತೀವ್ರ ವಿರೋಧ ವ್ಯಕ್ತಪಡಿಸಿವೆ. ಪ್ರಸ್ತಾವಿತ ಮಲಯಾಳಂ ಭಾಷಾ ವಿಧೇಯಕ-2025ರ ಅನ್ವಯ 1ರಿಂದ 10ನೇ ತರಗತಿಯವರೆಗೆ ಮಲಯಾಳಂ ಅನ್ನು ಮೊದಲ ಭಾಷೆಯನ್ನಾಗಿ ಕಡ್ಡಾಯಗೊಳಿಸಲು ಕೇರಳ ಸರ್ಕಾರ … Continued

ತಿರುವನಂತಪುರಂ ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ವಿ.ವಿ. ರಾಜೇಶ ಆಯ್ಕೆ ; 45 ವರ್ಷಗಳ ಎಡರಂಗದ ಆಡಳಿತಕ್ಕೆ ತೆರೆ

ತಿರುವನಂತಪುರಂ: ಕೇರಳದ ರಾಜಧಾನಿಯಲ್ಲಿ ಬಿಜೆಪಿಯ ಪ್ರಮುಖ ಮುಖಗಳಲ್ಲಿ ಒಬ್ಬರಾದ ಹಿರಿಯ ನಾಯಕ ವಿ.ವಿ. ರಾಜೇಶ ಅವರು ಶುಕ್ರವಾರ ತಿರುವನಂತಪುರಂ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಿತ್ತು. ಒಟ್ಟು 101 ಸ್ಥಾನಗಳ ಪೈಕಿ 50 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ … Continued

ರೇಜರ್ ಬ್ಲೇಡ್-ಜ್ಯೂಸ್ ಸ್ಟ್ರಾ ಬಳಸಿ ರಸ್ತೆಯಲ್ಲೇ ತುರ್ತು ಆಪರೇಶನ್‌ ಮಾಡಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು….!

ಕೊಚ್ಚಿ : ವೈದ್ಯಕೀಯ ಕೌಶಲ್ಯ ಮತ್ತು ಮಾನವೀಯತೆಯ ಅಪರೂಪದ ಸಂಗಮಕ್ಕೆ ಕೇರಳದ ರಸ್ತೆಯೊಂದು ಸಾಕ್ಷಿಯಾಗಿದೆ. ಆಸ್ಪತ್ರೆಗೆ ತಲುಪಲು ಸಮಯವಿಲ್ಲದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ, ರಸ್ತೆಯ ಪಕ್ಕದಲ್ಲೇ ತುರ್ತು ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಕೇರಳದ ವೈದ್ಯರ ತಂಡವೊಂದು ಆ ವ್ಯಕ್ತಿಯ ಜೀವ ಉಳಿಸಿ ಮಹತ್ಕಾರ್ಯ ಮಾಡಿದೆ. ಯಾವುದೇ ಆಪರೇಷನ್ ಥಿಯೇಟರ್ ಇಲ್ಲದೆ, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ … Continued

ವೀಡಿಯೊ..| ವರ್ಕಲಾ ಕಡಲತೀರದಲ್ಲಿ ಮೀನುಗಾರರ ಬಲೆಗೆ ಸಿಲುಕಿದ್ದ ಬೃಹತ್ ಶಾರ್ಕ್‌ ಗೆ ಸ್ಥಳೀಯರು-ಪ್ರವಾಸಿಗರಿಂದ ಜೀವದಾನ

ವರ್ಕಲಾ (ಕೇರಳ):ಸಂಕಷ್ಟದಲ್ಲಿರುವ ಜೀವಿಗಳಿಗೆ ಮಾನವೀಯತೆಯ ಸಹಾಯ ಮಾಡಲು ಜನರು ಒಗ್ಗೂಡಿದಾಗ ಸುಂದರ ಫಲಿತಾಂಶ ದೊರೆಯುತ್ತದೆ. ಇಂತಹ ಹೃದಯಸ್ಪರ್ಶಿ ಘಟನೆಯು ಇತ್ತೀಚೆಗೆ ಕೇರಳದ ವರ್ಕಲಾ ಕಡಲತೀರದಲ್ಲಿ ನಡೆದಿದೆ. ದಡಕ್ಕೆ ಬಂದು ಸಿಲುಕಿದ್ದ ಒಂದು ಬೃಹತ್ ತಿಮಿಂಗಿಲ ಶಾರ್ಕ್‌ಗೆ (Whale Shark) ಸ್ಥಳೀಯರು ಮತ್ತು ಪ್ರವಾಸಿಗರ ಗುಂಪೊಂದು ಯಶಸ್ವಿಯಾಗಿ ನೆರವು ನೀಡಿ, ಅದನ್ನು ಮರಳಿ ಸಮುದ್ರಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ. … Continued

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ : ಯುಡಿಎಫ್‌ ಗೆ ಭರ್ಜರಿ ಗೆಲುವು ; ಆಡಳಿತಾರೂಢ ಎಡರಂಗಕ್ಕೆ ಹಿನ್ನಡೆ

ತಿರುವನಂತಪುರಂ: 2025ರ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (UDF) ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳೆರಡರಲ್ಲೂ ಭರ್ಜರಿ ವಿಜಯವನ್ನು ದಾಖಲಿಸಿದೆ. ಆರು ಪ್ರಮುಖ ಮಹಾನಗರ ಪಾಲಿಕೆಗಳಲ್ಲಿ ಯುಡಿಎಫ್ ನಾಲ್ಕರಲ್ಲಿ (ಕೊಲ್ಲಂ, ಕೊಚ್ಚಿ, ತ್ರಿಶೂರ್ ಮತ್ತು ಕಣ್ಣೂರು) ಭರ್ಜರಿ ಜಯಗಳಿಸಿದೆ.  ಎಲ್‌ಡಿಎಫ್ (LDF) ಕೋಝಿಕ್ಕೋಡ್ ಅನ್ನು ಮಾತ್ರ ಉಳಿಸಿಕೊಂಡಿದೆ. ಆದರೆ, … Continued

ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಮಲೆಯಾಳಂ ನಟ ದಿಲೀಪ ಖುಲಾಸೆ

ಕೊಚ್ಚಿನ್ : 2017 ರಲ್ಲಿ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಮಲೆಯಾಳಂ ನಟ ದಿಲೀಪ (A8) ಅವರನ್ನು ಎರ್ನಾಕುಲಂನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸೋಮವಾರ (ಡಿಸೆಂಬರ್ 8) ದೋಷಮುಕ್ತಗೊಳಿಸಿದೆ. ಎಂಟು ವರ್ಷಗಳ ಕಾಲ ನಡೆದ ಈ ಸುದೀರ್ಘ ವಿಚಾರಣೆಗೆ ತೆರೆಬಿದ್ದಿದ್ದು, ನ್ಯಾಯಾಧೀಶೆ ಶ್ರೀಮತಿ ಹನಿ … Continued