ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ 5 ವರ್ಷದ ಮಗುವಿನ ಗುಪ್ತಾಂಗ ಸುಟ್ಟ ಮಲತಾಯಿ

ಪಾಲಕ್ಕಾಡ್ (ಕೇರಳ): ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾಳೆಂದು ಐದು ವರ್ಷದ ಹೆಣ್ಣು ಮಗುವಿನ ಗುಪ್ತಾಂಗಕ್ಕೆ ಬಿಸಿ ಸೌಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಭೀಕರ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಂಜಿಕೋಡ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಕಳೆದ ವಾರ ಈ ಅಮಾನವೀಯ ಕೃತ್ಯ ನಡೆದಿದ್ದು, ಮಗು ಅಂಗನವಾಡಿಗೆ ಹೋದಾಗ ಶಿಕ್ಷಕಿಯ ಜಾಗರೂಕತೆಯಿಂದ ವಿಷಯ ಬೆಳಕಿಗೆ ಬಂದಿದೆ. … Continued