ಶ್ರೀಧರನ್‌ ಕೇರಳ ಸಿಎಂ ಅಭ್ಯರ್ಥಿ ಘೋಷಣೆಯೂ…ಯೂ ಟರ್ನ್‌ ಗೊಂದಲವೂ

  ಕೊಚ್ಚಿ: ಮೆಟ್ರೋ ಮ್ಯಾನ್‌ ಇ ಶ್ರೀಧರನ್‌ ಅವರ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಗೊಂದಲವೇರ್ಪಟ್ಟಿದೆ. ಇ ಶ್ರೀಧರನ್‌ ಅವರು ಕೇರಳದ ಏ.೬ರಂದು ನಡೆಯಲಿರುವ ಕೇರಳದ ವಿಧಾನಸಭೆ ಚುನಾವಣೆಯ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗುರುವಾರ ಬಿಜೆಪಿ ಕೇರಳದ ರಾಜ್ಯಾಧ್ಯಕ್ಷ ಗುರುವಾರ ಘೋಷಣೆ ಮಾಡಿದ ಬೆನ್ನಲ್ಲೇ ಇದು ದೊಡ್ಡ ಸುದ್ದಿಯಾಯಿತು, ಇದು ಸಾಕಷ್ಟು ಸುದ್ದಿಯಾಗುತ್ತಿದ್ದಂತೆಯೇ ದೆಹಲಿಯಲ್ಲಿ … Continued

ಶಬರಿಮಲೆ ಆಂದೋಲನಕ್ಕೆ ಸಂಬಂಧಿಸಿದ ಪ್ರಕರಣ ಹಿಂತೆಗೆಯಲು ಕೇರಳ ಸರ್ಕಾರ ನಿರ್ಧಾರ: ಚುನಾವಣಾ ಸ್ಟಂಟ್‌ ಎಂದ ಬಿಜೆಪಿ

ರಾಜ್ಯದ ವಿಧಾನಸಭೆ ಚುನಾವಣೆ ಸನಿಹದಲ್ಲಿರುವ ಕೇರಳದಲ್ಲಿ ಎಡರಂಗ ಸರ್ಕಾರವು ಶಬರಿಮಲೆ ಆಂದೋಲನ ಹಾಗೂ ನಾಗರಿಕ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದೆ. ಬಿಜೆಪಿಯು ಎಡರಂಗದ ಸರ್ಕಾರದ ಈ ನಿರ್ಧಾರ ಚುನಾವಣಾ ಸ್ಟಂಟ್‌ ಎಂದು ಹೇಳಿದೆ. ಶಬರಿಮಲೆ ಆಂದೋಲನಕ್ಕೆ ಸಂಬಂಧಿಸಿದಂತೆ 50,000 ಕ್ಕೂ ಹೆಚ್ಚು ಜನರ ವಿರುದ್ಧ … Continued

ಕೇರಳದಲ್ಲಿ ಮತ್ತೆ ಎಲ್‌ಡಿಎಫ್‌ ಸರಕಾರ ಅಧಿಕಾರಕ್ಕೆ: ಸಮೀಕ್ಷೆ

ಕೇರಳದಲ್ಲಿ ಪ್ರಸ್ತುತ ಚುನಾವಣೆ ನಡೆದರೆ ಸಿಪಿಎಂ ನೇತೃತ್ವದ ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌ (ಎಲ್‌ಡಿಎಫ್)‌ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. 1980 ರಿಂದ ಈಚೆಗೆ ಯಾವುದೇ ಪಕ್ಷ ಅಥವಾ ಒಕ್ಕೂಟ ರಾಜ್ಯದಲ್ಲಿ ಸತತ ೨ ಬಾರಿ ಅಧಿಕಾರದ ಗದ್ದುಗೆ ಏರಿಲ್ಲ. ಏಷ್ಯಾನೆಟ್ ನ್ಯೂಸ್-ಸಿಫೋರ್ ಸಮೀಕ್ಷೆಯ ಪ್ರಕಾರ, 140 ಸದಸ್ಯರ ವಿಧಾನಸಭೆಯಲ್ಲಿ ಎಲ್‌ಡಿಎಫ್ … Continued

ಖ್ಯಾತ ಓಟಗಾರ್ತಿ ಪಿ.ಟಿ.ಉಷಾ ಬಿಜೆಪಿಗೆ..?: ಅಲ್ಲಗಳೆದ ಆಪ್ತ ವಲಯ

ತಿರುವನಂತಪುರ: ಕೇರಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಈಗ ರಾಜಕೀಯ ಮೆಟ್ರೋ ಮ್ಯಾನ್ ಶ್ರೀಧರನ್ ನಂತರ ಪಿಟಿ ಉಷಾ ರಾಜಕೀಯಕ್ಕೆ ಧುಮುಕುತ್ತಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಅವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ಹೇಳಾಗುತ್ತಿದೆ. ಆದರೆ ಅವರ ಆಪ್ಕೇತ ವಲಯ ಈ ಸುದ್ದಿಯನ್ನು ನಿರಾಕರಿಸಿದೆ.   ಕೇರಳದಲ್ಲಿ ಪ್ರಬಲವಾಗಿ ನೆಲೆಯೂರಲು ಸಿದ್ಧತೆ ನಡೆಸಿರುವ ಬಿಜೆಪಿ ಇದಕ್ಕಾಗಿ ವಿವಿಧ … Continued

ಕೇರಳದಿಂದ ಬೆಂಗಳೂರಿಗೆ ಬರುವವರಿಗೆ ಕೊರೊನಾ ವರದಿ ತರುವುದು ಕಡ್ಡಾಯ

ಬೆಂಗಳೂರು: ಕೇರಳದಿಂದ ಬೆಂಗಳೂರಿಗೆ ಬರುವವರು ಕೊರೊನಾ ನೆಗೆಟಿವ್‌ ವರದಿ ತರುವುದು ಕಡ್ಡಾಯ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ ತಿಳಿಸಿದ್ದಾರೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಕೇರಳದಿಂದ ಬಂದವರಿಗೆ ಕೊವಿಡ್‌-೧೯ ಪರೀಕ್ಷೆ ಆಗಿದೆಯೇ ಎಂಬುದನ್ನು ಉದ್ಯೋಗದಾತ ಕಂಪನಿಗಳು, ವಾಸವಿರುವ ಅಪಾರ್ಟಮೆಂಟ್‌ ಮಾಲಿಕರ ಜವಾಬ್ದಾರಿ. ಕೊರೊನಾ ಪರೀಕ್ಷೆ ಮಾಡಿಸದೇ … Continued

೨೫ ವರ್ಷಗಳ ನಂತರ ಮಹಿಳೆ ದೇಹದಿಂದ ಹೊರಬಂತು ಸೀಟಿ..!

ಕಣ್ಣೂರು (ಕೇರಳ): ಸುಮಾರು ೨೫ ವರ್ಷಗಳ ಹಿಂದೆ ೧೫ ವರ್ಷಗಳ ಬಾಲಕಿಯೊಬ್ಬಳು ಆಟವಾಡುತ್ತಾ ಸೀಟಿ ನುಂಗಿಬಿಟ್ಟಿದ್ದಳು.ಈಗ ೨೫ ವರ್ಷಗಳ ನಂತರ ಸೀಟಿ ಆಕೆಯ ದೇಹದಿಂದ ಹೊರಬಿದ್ದಿದೆ.ವೈದ್ಯರು ಅದನು ಆಕೆಯ ದೇಹದಿಂದ ಹೊರ ತೆಗೆದಿದ್ದಾರೆ. ಘಟನೆ ವಿವರ: ಗೆಳೆಯನೊಂದಿಗೆ ಆಟವಾಡುತ್ತಿದ್ದ ವೇಳೆ, ಈಕೆ ಆಕಸ್ಮಾತ ಸೀಟಿಯನ್ನು ನುಂಗಿದ್ದಳು. ಅದು ಬಾಲಕಿಯ ಶ್ವಾಸಕೋಶದಲ್ಲಿ ಸಿಲುಕಿಬಿಟ್ಟಿತ್ತು. ಆ ಕ್ಷಣದಲ್ಲಿ ಆಕೆಗೆ … Continued

ಬಿಜೆಪಿ ತೆಕ್ಕೆಗೆ ಮೆಟ್ರೋಮ್ಯಾನ್‌ ಇ. ಶ್ರೀಧರನ್‌

ಮೆಟ್ರೋಮ್ಯಾನ್‌ ಎಂದೇ ಖ್ಯಾತಿಗಳಿಸಿದ ಇ. ಶ್ರೀಧರನ್‌ ಶೀಘ್ರದಲ್ಲೇ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌ ತಿಳಿಸಿದ್ದಾರೆ. ನಮ್ಮ ಮೆಟ್ರೋ ಪ್ರಾಜೆಕ್ಟ್‌ ರೂವಾರಿ ಶ್ರೀಧರನ್‌ ಪಕ್ಷ ಸೇರಿಕೊಳ್ಳಲು ಆಸಕ್ತಿ ತೋರಿದ್ದಾರೆ. ಅವರು ಬಿಜೆಪಿ ರಾಜ್ಯವ್ಯಾಪಿ ಯಾತ್ರೆ ಮಲಪ್ಪುರಂ ಜಿಲ್ಲೆ ಪ್ರವೇಶಿಸಿದ ಸಂದರ್ಭದಲ್ಲಿ ಪಕ್ಷದ ಸದಸ್ಯತ್ವ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿ … Continued

ಮಹಾರಾಷ್ಟ್ರಕ್ಕೆ ತೆರಳುವ ಕೇರಳದವರಿಗೆ ಕೊರೋನಾ ಪರೀಕ್ಷೆ ಕಡ್ಡಾಯ

ಮುಂಬೈ: ಕೇರಳದಿಂದ ಮಹಾರಾಷ್ಟ್ರಕ್ಕೆ ಬರುವ ಎಲ್ಲ ಪ್ರಯಾಣಿಕರು ಕೊರೊನಾ ಪರೀಕ್ಷೆ ನೆಗೆಟಿವ್‌ ವರದಿ ಹೊಂದಿರುವುದು ಕಡ್ಡಾಯ ಎಂದು ಮಹಾರಾಷ್ಟ್ರ ಸರಕಾರ ಸೂಚನೆ ನೀಡಿದೆ. ಸರಕಾರ ಹೊರಡಿಸಿದ ನೂತನ ಸ್ಟಾಂಡರ್ಡ್‌ ಆಪರೇಟಿಂಗ್‌ ಪ್ರಾಸಿಜರ್ಸ್‌ ಪ್ರಕಾರ ಕೇರಳದಿಂದ ರಾಜ್ಯಕ್ಕೆ ಬರುವವರು ಕಡ್ಡಾಯವಾಗಿ ಕೋವಿಡ್‌-೧೯ ಪರೀಕ್ಷೆಯ ನೆಗೆಟಿವ್‌ ವರದಿ ಹೊಂದಿರಬೇಕು. ಇದಕ್ಕೂ ಮೊದಲು ಮಹಾರಾಷ್ಟ್ರ ಸರ್ಕಾರ ದೆಹಲಿ, ರಾಜಸ್ಥಾನ, ಗುಜರಾತ್ … Continued

ಕೇರಳ ಚುನಾವಣೆಯಲ್ಲಿ ಶಬರಿಮಲೆ ಕಾರ್ಡ್‌ ಬಳಸಲು ಕಾಂಗ್ರೆಸ್‌ ಚಿಂತನೆ

ಮುಂಬರಲಿರುವ ಕೇರಳ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಬರಿಮಲೆ ಕಾರ್ಡ್‌ ಬಳಸಲು ಕಾಂಗ್ರೆಸ್‌ ಮುಂದಾಗಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಯುಡಿಎಫ್ ಅಧಿಕಾರಕ್ಕೆ ಬಂದರೆ ಶಬರಿಮಲೆ ದೇವಾಲಯದ ಪದ್ಧತಿಗಳ ರಕ್ಷಣೆಗೆ ಕಾನೂನನ್ನು ಜಾರಿಗೆ ತರಲಿದೆ ಎಂದು ಹೇಳಿದರು. ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ತಿರುವಂಚೂರು ರಾಧಾಕೃಷ್ಣನ್ ಬಿಡುಗಡೆ ಮಾಡಿದ ‘ಕರಡು ಪ್ರತಿಯಲ್ಲಿ ಶಬರಿಮಲೆ ದೇವಾಲಯದ … Continued