ತ್ರಿಶೂರ್‌ನಲ್ಲಿ ಪಟಾಕಿ ಕಾರ್ಖಾನೆ ಭೀಕರ ಸ್ಫೋಟ: 13 ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

ತ್ರಿಶೂರ್: ಕೇರಳದ ತ್ರಿಶೂರ್ ಸಮೀಪದ ಮುಂಡತಿಕೋಡ್‌ನಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಮಂಗಳವಾರ ಸಂಭವಿಸಿದ ಸರಣಿ ಸ್ಫೋಟ ಮತ್ತು ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 13 ಜನರು ಸಾವಿಗೀಡಾಗಿದ್ದಾರೆ ಮತ್ತು ಸುಮಾರು 40 ಕಾರ್ಮಿಕರು ಗಾಯಗೊಂಡಿದ್ದಾರೆ. ಇದು ಈ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ದುರಂತಗಳಲ್ಲಿ ಒಂದಾಗಿದೆ. ವಿಶೇಷವೆಂದರೆ, ಕಳೆದ ಭಾನುವಾರ ತಮಿಳುನಾಡಿನ ವಿರುದ್‌ನಗರದ … Continued

ಚಿಕನ್ ಖಾದ್ಯದ ಜೊತೆ ಶ್ರೀಕೃಷ್ಣನ ಚಿತ್ರವಿರುವ ಕಾರ್ಡ್ ಪ್ರಕಟಣೆ : ರೆಸ್ಟೋರೆಂಟ್ ಮಾಲೀಕನ ಬಂಧನ

ಆಲಪ್ಪುಳ: ವಿಷು ಹಬ್ಬದ ಶುಭಾಶಯ ಕೋರುವ ಕಾರ್ಡ್‌ನಲ್ಲಿ ಭಗವಾನ್ ಶ್ರೀಕೃಷ್ಣನ ಚಿತ್ರದ ಪಕ್ಕದಲ್ಲಿ ‘ಚಿಕನ್ ಮಂಡಿ’ (ಗ್ರಿಲ್ಡ್ ಚಿಕನ್ ಮತ್ತು ಅನ್ನದ ಖಾದ್ಯ) ಇರುವ ಫೋಟೋವನ್ನು ಬಳಸಿ ವಿವಾದ ಸೃಷ್ಟಿಸಿದ್ದ ಕೇರಳದ ರೆಸ್ಟೋರೆಂಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಚೇರ್ತಲಾದ ಮನೋರಮಾ ಜಂಕ್ಷನ್ ಬಳಿ ಇರುವ ‘ಮೆಹರ್ ಮಂದಿ ಅಂಡ್ ಗ್ರಿಲ್ಸ್’ ಹೋಟೆಲ್‌ನ ಮಾಲೀಕ ಅರ್ಷದ್ ಬಂಧಿತ … Continued

ವಿಧಾನಸಭೆ ಚುನಾವಣೆ : ಅಸ್ಸಾಂನಲ್ಲಿ 84.42%, ಕೇರಳದಲ್ಲಿ 75%, ಪುದುಚೇರಿಯಲ್ಲಿ 86.92%ರಷ್ಟು ಮತದಾನ

ನವದೆಹಲಿ : ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಗುರುವಾರ (ಏಪ್ರಿಲ್ 9) ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನವು ಬಿಗಿ ಭದ್ರತೆ ಹಾಗೂ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ನಡೆದಿದೆ. ಮೂರೂ ರಾಜ್ಯಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ … Continued

ಚಿಕ್ಕಮಗಳೂರು : ಪ್ರವಾಸಕ್ಕೆ ಬಂದಿದ್ದ ಕೇರಳದ ವಿದ್ಯಾರ್ಥಿನಿ ಚಂದ್ರದ್ರೋಣ ಪರ್ವತ ಪ್ರದೇಶದಲ್ಲಿ ನಾಪತ್ತೆ

ಚಿಕ್ಕಮಗಳೂರು : ಕೇರಳದಿಂದ 40 ಜನರ ತಂಡದೊಂದಿಗೆ ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ 16 ವರ್ಷದ ವಿದ್ಯಾರ್ಥಿನಿ  ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ (Mullayanagiri) ಭಾಗದ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಪತ್ತೆಯಾಗಿರುವ 10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದಾ (16) ಎಂದು ಗುರುತಿಸಲಾಗಿದ್ದು, ಕೇರಳದಿಂದ ಬಂದ 40 ಜನರ ತಂಡ ಮಂಗಳವಾರ ಸಂಜೆ 6:30ರ ಸುಮಾರಿಗೆ … Continued

ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಗಾವಲು ವಾಹನ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದಿದೆ. ಎ.ಪಿ. ಅನಿಲಕುಮಾರ ಅವರ ಪರವಾಗಿ ಪ್ರಚಾರ ನಡೆಸಲು ತರೂರ್ ಅವರು ವಂಡೂರು ಪ್ರದೇಶಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ. ಬೈಕ್ ಮತ್ತು ಕಾರುಗಳಲ್ಲಿ ಬಂದ ಗುಂಪೊಂದು ತರೂರ್ ಅವರ ವಾಹನವನ್ನು ಅಡ್ಡಗಟ್ಟಿ, ಅವರ … Continued

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿಗೆ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ನವದೆಹಲಿ:  ಚುನಾವಣಾ ಆಯೋಗವು ಇಂದು, ಭಾನುವಾರ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕಗಳನ್ನು ಘೋಷಿಸಿದೆ. ಉಳಿದ ಎಲ್ಲಾ ರಾಜ್ಯಗಳಲ್ಲಿ ಚುನಾವಣೆಗಳು ಒಂದೇ ಹಂತದಲ್ಲಿ ನಡೆಯಲಿದ್ದರೆ, ಪಶ್ಚಿಮ ಬಂಗಾಳ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಅಸ್ಸಾಂ, ಕೇರಳ ಮತ್ತು ಪುದುಚೇರಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ … Continued

1 ರೂಪಾಯಿ ನೋಟು ತಂದ್ರೆ ಹೊಸ ಶೂ ಕೊಡ್ತೇವೆ ಅಂದ್ರು : ಕನಸು ಕಂಡು ಬಂದವರಿಗೆ ಸಿಕ್ಕಿದ್ದು ಲಾಠಿ ಏಟು…!

ಕೋಯಿಕ್ಕೋಡ್: ಕೇವಲ ಒಂದು ರೂಪಾಯಿಗೆ ಬ್ರಾಂಡೆಡ್ ಶೂ ಸಿಗುತ್ತದೆ ಎಂದರೆ ಯಾರಿಗೆ ತಾನೇ ಆಸೆ ಆಗಲ್ಲ ಹೇಳಿ? ಆದರೆ ಅದೇ ಆಸೆ ಇಂದು, ಭಾನುವಾರ ದೊಡ್ಡ ರಂಪಾಟಕ್ಕೆ ಕಾರಣವಾಗಿದೆ. ವ್ಯಾಪಾರ ಹೆಚ್ಚಿಸಿಕೊಳ್ಳಲು ಅಂಗಡಿಯವರು ಮಾಡಿದ ಒಂದು ‘ಗಿಮಿಕ್’ ನಿಂದ ಜನರ ನಿಯಂತ್ರಣಕ್ಕೆ ಪೊಲೀಸರ ಲಾಠಿ ಚಾರ್ಜ್ ನಡೆಸಬೇಕಾಯಿತು. ಇದು ಮಾಲೀಕರ ಬಂಧನದಲ್ಲಿ ಅಂತ್ಯವಾಗಿದೆ. ಇದು ಕೇರಳದ … Continued

ವೀಡಿಯೊ..| ದೇವಾಲಯದ ಉತ್ಸವದ ವೇಳೆ ಆಘಾತಕಾರಿ ಘಟನೆ ; ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಆನೆ

 ತ್ರಿಶೂರ್ : ಕೇರಳದ ತ್ರಿಶೂರ್ ಜಿಲ್ಲೆಯ ಅನ್ನಮನದ ಮಹಾದೇವ ದೇವಸ್ಥಾನದ ಉತ್ಸವದ ವೇಳೆ ಆನೆಯೊಂದು ಹಠಾತ್ತನೆ ಆಕ್ರಮಣಕಾರಿಯಾಗಿ ವರ್ತಿಸಿ,  ವ್ಯಕ್ತಿಯೊಬ್ಬರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಘಟನೆ ಗುರುವಾರ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಮೆರವಣಿಗೆಗಾಗಿ ಆನೆಯನ್ನು ಸಿಂಗರಿಸಿ ನಿಲ್ಲಿಸಲಾಗಿತ್ತು. ದೇವರ ವಿಗ್ರಹವನ್ನು ಆನೆಯ ಮೇಲೆ ಪ್ರತಿಷ್ಠಾಪಿಸಲು ಸಿದ್ಧತೆ ನಡೆಸುತ್ತಿದ್ದಾಗ, ಮಾವುತನು ಅರ್ಚಕರೊಬ್ಬರಿಗೆ ಆನೆಯ ಮೇಲೆ ಹತ್ತಲು ಸಹಾಯ … Continued

ಕೇರಳ ಇನ್ಮುಂದೆ ‘ಕೇರಳಂ’: ಹೆಸರು ಬದಲಾವಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ನವದೆಹಲಿ: ಒಂದು ಮಹತ್ವದ ಬೆಳವಣಿಗೆಯಲ್ಲಿ, ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸುವ ಕೇರಳ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟವು ಮಂಗಳವಾರ ಒಪ್ಪಿಗೆ ನೀಡಿದೆ. ನೂತನವಾಗಿ ಉದ್ಘಾಟನೆಗೊಂಡ ಪ್ರಧಾನ ಮಂತ್ರಿ ಕಾರ್ಯಾಲಯದ (PMO) ಕಟ್ಟಡವಾದ ‘ಸೇವಾ ತೀರ್ಥ’ದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಈ ಅನುಮೋದನೆ ಲಭಿಸಿರುವುದು ವಿಶೇಷ. “ಕೇರಳವನ್ನು ‘ಕೇರಳಂ’ … Continued

ಸಾವಿನಲ್ಲೂ ಸಾರ್ಥಕತೆ : 10 ತಿಂಗಳ ಕಂದಮ್ಮನ ಅಂಗಾಂಗ ದಾನ ; ನಾಲ್ವರಿಗೆ ಮರುಜೀವ ನೀಡಿದ ಕೇರಳದ ಪುಟ್ಟ ಮಗು

ತಿರುವನಂತಪುರಂ: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ (Brain Dead)  10 ತಿಂಗಳ ಪುಟ್ಟ ಹೆಣ್ಣುಮಗುವೊಂದು ತನ್ನ ಅಂಗಾಂಗ ದಾನ ಮಾಡುವ ಮೂಲಕ ಹಲವರ ಬಾಳಿಗೆ ಬೆಳಕಾಗಿರುವ ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆ ಕೇರಳದಲ್ಲಿ ನಡೆದಿದೆ. ಫೆಬ್ರವರಿ 13ರ ಶುಕ್ರವಾರ ನಡೆದ ಈ ಅಂಗಾಂಗ ದಾನವು ಕೇರಳದಾದ್ಯಂತ ಮತ್ತೊಂದು ಶಿಶು ಸೇರಿದಂತೆ  ನಾಲ್ವರಿಗೆ ಹೊಸ ಬದುಕು ನೀಡಲಿದೆ. … Continued