ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಲು ಅವಕಾಶ : ತಾಯಿಗೆ 40 ವರ್ಷ ಜೈಲು ಶಿಕ್ಷೆ; “ತಾಯ್ತನಕ್ಕೆ ಅವಮಾನʼ ಎಂದ ಕೋರ್ಟ್‌

ತಿರುವನಂತಪುರಂ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಪ್ರಕರಣದಲ್ಲಿ ಮಹಿಳೆಗೆ ಕೇರಳ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸೋಮವಾರ 40 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಿದೆ. ಏಳು ವರ್ಷದ ತನ್ನ ಮಗಳ ಮೇಲೆ ತನ್ನ ಪ್ರೇಮಿ ಅತ್ಯಾಚಾರ ಮಾಡಲು ಸಹಾಯ ಮಾಡಿದ್ದಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ.
ತಿರುವನಂತಪುರಂ ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ ಆರೋಪಿಯು “ತಾಯ್ತನಕ್ಕೆ ಅವಮಾನ” ಎಂದು ಪರಿಗಣಿಸಿತು ಮತ್ತು ಆಕೆ ಯಾವುದೇ ಕರುಣೆಗೆ ಅರ್ಹಳಲ್ಲ ಎಂದು ಹೇಳಿತು. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಗಮನಾರ್ಹವಾಗಿ, ಪೋಕ್ಸೊ (POCSO) ಪ್ರಕರಣಗಳಲ್ಲಿ ತಾಯಂದಿರು ಕಾನೂನು ಪರಿಣಾಮ ಎದುರಿಸುವ ಪ್ರಕರಣಗಳು ಬಹಳ ವಿರಳ.ಮಾರ್ಚ್ 2018 ಮತ್ತು ಸೆಪ್ಟೆಂಬರ್ 2019 ರ ನಡುವೆ ಈ ಘಟನೆ ನಡೆದಿದೆ. ಈ ಸಮಯದಲ್ಲಿ ಅಪರಾಧಿ ತನ್ನ ಮಾನಸಿಕ ಅಸ್ವಸ್ಥ ಪತಿಯಿಂದ ಬೇರ್ಪಟ್ಟು, ಪ್ರಕರಣದ ಪ್ರಮುಖ ಆರೋಪಿಯಾದ ಶಿಶುಪಾಲನ್ ಜೊತೆ ಲಿವ್‌ ಇನ್‌ ನಲ್ಲಿ ವಾಸಿಸುತ್ತಿದ್ದಳು. ಆ ಸಮಯದಲ್ಲಿ 7 ವರ್ಷದ ಮಹಿಳೆಯ ಕಿರಿಯ ಮಗಳನ್ನೂ ಸಹ ಕರೆದೊಯ್ದಿದ್ದಳು.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

ಶಿಶುಪಾಲನ್‌ ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದರೂ ಸುಮ್ಮನಿದ್ದಳು. ಆಘಾತಕಾರಿ ವಿಚಾರವೆಂದರೆ 2018 ರಿಂದ 2019ರ ನಡುವೆ ಸಂತ್ರಸ್ತ ಬಾಲಕಿಯ ತಾಯಿಯ ಸಹಕಾರದಲ್ಲಿಯೇ ಶಿಶುಪಾಲನ್ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ.
ಬಾಲಕಿಯ 11 ವರ್ಷದ ಮಲಸಹೋದರಿ ಮನೆಗೆ ಬಂದಾಗ ಅವಳು ಕೂಡ ಶಿಶುಪಾಲನಿಂದ ದೌರ್ಜನ್ಯಕ್ಕೆ ಒಳಗಾದಳು. ಅವರು ಬೆದರಿಕೆ ಹಾಕಿದ್ದರಿಂದ ಮಕ್ಕಳು ಮಾಹಿತಿ ಬಹಿರಂಗಪಡಿಸಲಿಲ್ಲ. ಆದರೆ ಅಕ್ಕ ತಂಗಿಯ ಹೇಗೋ ತಪ್ಪಿಸಿಕೊಂಡು ಅಜ್ಜಿಯ ಮನೆಗೆ ಪರಾರಿಯಾಗಿದ್ದಾರೆ. ಹಾಗೂ ಅಜ್ಜಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದಾದ ಬಳಿಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ನಂತರ ಅವರನ್ನು ಚಿಲ್ಡ್ರನ್ಸ್‌ ಹೋಂ (children’s home) ಸ್ಥಳಾಂತರಿಸಲಾಯಿತು. ಅಲ್ಲಿ ನಡೆದ ಕೌನ್ಸೆಲಿಂಗ್ ವೇಳೆ ಮಕ್ಕಳು ಘಟನೆಯ ಬಗ್ಗೆ ವಿವರಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾದ ವಿಷಯ ಗೊತ್ತಾಗುತ್ತಿದ್ದಂತೆ ಶಿಶುಪಾಲನ್ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ.

ಹೆತ್ತ ಮಕ್ಕಳ ಮೇಲೆ ದೌರ್ಜನ್ಯ ಎಸಗಲು ಕುಮ್ಮಕ್ಕು ನೀಡಿದ ತಾಯಿ ಕ್ಷಮೆಗೆ ಅನರ್ಹಳು ಎಂದು ಹೇಳಿದ ಕೋರ್ಟ್ 40 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ‌ ಹಾಗೂ 20 ಸಾವಿರ ರೂ. ದಂಡ ಕಟ್ಟುವಂತೆ ಆದೇಶಿಸಿದೆ. ಒಂದು ವೇಳೆ ದಂತ ಕಟ್ಟಲು ಸಾಧ್ಯವಾಗದಿದ್ದಲ್ಲಿ ಮತ್ತೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲು ಆದೇಶಿಸಿದೆ.
ಆದ್ದರಿಂದ ತಾಯಿಗೆ ಮಾತ್ರ ಶಿಕ್ಷೆ ವಿಧಿಸಲಾಯಿತು. ಪ್ರಕರಣದಲ್ಲಿ 22 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದ್ದು, 32 ದಾಖಲೆಗಳನ್ನು ಸಲ್ಲಿಸಲಾಗಿದೆ.
ಮಹಿಳೆಯ ಮತ್ತೊಬ್ಬ ಪ್ರೇಮಿ ಕೂಡ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಪ್ರಕರಣದ ಪ್ರತ್ಯೇಕ ಪ್ರಕರಣ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ನಮ್ಮ ಗಾಯದ ಮೇಲೆ ಉಪ್ಪು ಸವರಬೇಡಿ, ಕಸಬ್ ಹೊಗಳುವುದಿದ್ದರೆ ಪಾಕಿಸ್ತಾನಕ್ಕೆ ಹೋಗಿ": 26/11 ದಾಳಿ ಬಗ್ಗೆ ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಕಸಬ್ ವಿಚಾರಣೆ ಸಾಕ್ಷಿಯ ಆಕ್ಷೇಪ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement