ಕೊಚ್ಚಿ ವಿಶ್ವವಿದ್ಯಾನಿಲಯದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಕಾಲ್ತುಳಿತ : 4 ವಿದ್ಯಾರ್ಥಿಗಳು ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

ಕೊಚ್ಚಿ : ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ (CUSAT) ಶನಿವಾರ ಸಂಜೆ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಮತ್ತು ಕನಿಷ್ಠ 64 ಮಂದಿ ಗಾಯಗೊಂಡಿದ್ದಾರೆ. ಹಾಗೂ ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ವಿದ್ಯಾರ್ಥಿಗಳಲ್ಲಿ ಇಬ್ಬರು ಹುಡುಗಿಯರು ಮತ್ತು ಇಬ್ಬರು ಹುಡುಗರು, ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಹಿನ್ನೆಲೆ ಗಾಯಕಿ ನಿಖಿತಾ ಗಾಂಧಿ ಅವರನ್ನು ಒಳಗೊಂಡ ಸಂಗೀತ ಕಾರ್ಯಕ್ರಮವು ಟೆಕ್ ಫೆಸ್ಟ್ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ತೆರೆದ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಕಾರ್ಯಕ್ರಮದ ವೇಳೆ ಮಳೆ ಪ್ರಾರಂಭವಾದ ನಂತರ ಹಿಂಬದಿಯಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ವೇದಿಕೆಯ ಮುಂಭಾಗಕ್ಕೆ ಧಾವಿಸಿದರು. ಮಳೆಯಿಂದ ರಕ್ಷಣೆ ಪಡೆಯಲು ಮೇಲ್ಛಾವಣಿ ಇಲ್ಲದ ಕಾರಣ ವಿದ್ಯಾರ್ಥಿಗಳು ಮುಗಿಬಿದ್ದರು. ಇದು ಮುಂಭಾಗದಲ್ಲಿ ಜನಸಂದಣಿಯ ನೂಕು ನುಗ್ಗಾಟಕ್ಕೆ ಕಾರಣವಾಯಿತು ಮತ್ತು ಕಾಲ್ತುಳಿತದಂತಹ ಪರಿಸ್ಥಿತಿಯನ್ನು ಪ್ರಚೋದಿಸಿತು ಎಂದು ಹೇಳಲಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೊಚ್ಚಿ ವಿಶ್ವವಿದ್ಯಾನಿಲಯದಲ್ಲಿ ನಾಲ್ವರು ವಿದ್ಯಾರ್ಥಿಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು ಇತರ ಸಚಿವರೊಂದಿಗೆ ತುರ್ತು ಸಭೆಗೆ ಕರೆದಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಉಪಕುಲಪತಿ ಡಾ.ಶಂಕರನ್ ಅವರು, “ಟೆಕ್ ಫೆಸ್ಟ್‌ನ ಅಂಗವಾಗಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿತ್ತು, ದುರದೃಷ್ಟವಶಾತ್, ಜನಸಂದಣಿ ಹೆಚ್ಚಿತ್ತು ಮತ್ತು ಮಳೆ ಇತ್ತು, ಇವು ಕೆಲವು ಸಮಸ್ಯೆಗಳನ್ನು ಉಂಟುಮಾಡಿದವು ಮತ್ತು ನೂಕಾಟದಿಂದ ಕೆಲವು ವಿದ್ಯಾರ್ಥಿಗಳು ಕೆಳಗೆ ಬಿದ್ದಿದ್ದಾರೆ. 2,000 ಕ್ಕೂ ಹೆಚ್ಚು ಜನರು ಹಾಜರಿದ್ದರು, ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

ತುರ್ತು ಸೇವೆಗಳು ತ್ವರಿತವಾಗಿ ಸ್ಪಂದಿಸಿದವು ಮತ್ತು ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಲಮಸ್ಸೆರಿ ವೈದ್ಯಕೀಯ ಕಾಲೇಜು ಮತ್ತು ಕಿಂಡರ್ ಆಸ್ಪತ್ರೆಗೆ ಸಾಗಿಸಲಾಯಿತು. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡುವುದಾಗಿ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ.
ಪುರಸಭಾ ಸದಸ್ಯರೊಬ್ಬರು ಹೇಳುವ ಪ್ರಕಾರ, ಹೊರಹೋಗುವ ಮತ್ತು ಪ್ರವೇಶದ್ವಾರ ಎರಡೂಒಂದೇ ಗೇಟ್ ಮೂಲಕ ಇದ್ದುದರಿಂದ ಕಾಲ್ತುಳಿತ ಉಂಟಾಗಿದೆ. “ವಿದ್ಯಾರ್ಥಿಗಳು ಅದೇ ಗೇಟ್ ಮೂಲಕ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಕಡಿದಾದ ಮೆಟ್ಟಿಲುಗಳ ಮೂಲಕ ಪ್ರವೇಶಿಸುತ್ತಿದ್ದ ವಿದ್ಯಾರ್ಥಿಗಳು ಮೊದಲು ಕೆಳಗೆ ಬಿದ್ದರು ಮತ್ತು ಗೇಟ್‌ನಲ್ಲಿದ್ದ ಅಪಾರ ಜನಸಮೂಹವು ಅವರನ್ನು ಮತ್ತೆ ಮತ್ತೆ ತುಳಿಯಿತು” ಎಂದು ಪುರಸಭಾ ಸದಸ್ಯರು ತಿಳಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement