ಕೇರಳದಲ್ಲಿ ನಿಪಾ ವೈರಸ್ ಪ್ರಕರಣಗಳು ದೃಢ : ಕೇಂದ್ರದಿಂದ ತಜ್ಞರ ತಂಡ ರವಾನೆ

ಕೋಝಿಕ್ಕೋಡ್‌ : ಕೋಝಿಕ್ಕೋಡ್‌ನಲ್ಲಿ ಇಬ್ಬರು ನಿಪಾಹ್ ವೈರಸ್‌ನಿಂದ ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ ನಂತರ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಿದೆ. ಒಬ್ಬ ವ್ಯಕ್ತಿ ಸೆಪ್ಟೆಂಬರ್ 11 ರಂದು ಸಾವಿಗೀಡಾದರೆ, ಇನ್ನೊಬ್ಬರು ಆಗಸ್ಟ್ 30 ರಂದು ಮೃತಪಟ್ಟಿದ್ದಾರೆ. ಸೋಮವಾರ (ಸೆಪ್ಟೆಂಬರ್ 11) ಮೃತಪಟ್ಟ ವ್ಯಕ್ತಿಯ 9 ವರ್ಷದ ಮಗು ಮತ್ತು 24 ವರ್ಷದ … Continued

ಜ್ವರದಿಂದ ಇಬ್ಬರ ʼಅಸ್ವಾಭಾವಿಕ’ ಸಾವಿನ ನಂತರ ಕೇರಳದಲ್ಲಿ ಮತ್ತೆ ನಿಫಾ ವೈರಸ್‌ ಎಚ್ಚರಿಕೆ ಘೋಷಣೆ

ಕೋಝಿಕ್ಕೋಡ್‌ : ಕೇರಳದಲ್ಲಿ ಮತ್ತೆ ನಿಫಾ ವೈರಸ್‌ನ ಆತಂಕ ಎದುರಾಗಿದೆ. ಇಲ್ಲಿನ ಕೋಝಿಕ್ಕೋಡ್‌ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಜ್ವರದಿಂದ ಮೃತಪಟ್ಟಿದ್ದು, ಇದನ್ನು ಕೇರಳ ಆರೋಗ್ಯ ಇಲಾಖೆ “ಅಸ್ವಾಭಾವಿಕ” ಎಂದು ಪರಿಗಣಿಸಿದೆ ಹಾಗೂ ಜಿಲ್ಲೆಯಲ್ಲಿ ಆರೋಗ್ಯ ಎಚ್ಚರಿಕೆ ಘೋಷಿಸಿದೆ. ಮೃತ ವ್ಯಕ್ತಿಗಳಲ್ಲಿ ಒಬ್ಬರ ಸಂಬಂಧಿಕರನ್ನು ಸಹ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇದು … Continued

ಕೇರಳದ ಕಣ್ಣೂರಿನಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆ : ಹಂದಿಗಳನ್ನು ಕೊಲ್ಲಲು ಜಿಲ್ಲಾಡಳಿತ ಆದೇಶ

ಕಣ್ಣೂರು: ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆಯಾಗಿದೆ. ಆಫ್ರಿಕನ್‌ ಹಂದಿ ಜ್ವರ ಪತ್ತೆಯಾಗುತ್ತಿದ್ದಂತೆ ಅಲ್ಲಿನ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಎರಡು ಫಾರ್ಮ್‌ ಗಳಲ್ಲಿ ಇರುವ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆಫ್ರಿಕನ್‌ ಹಂದಿ ಜ್ವರ ಕಣ್ಣೂರು ಜಿಲ್ಲೆಯ ಮಲೆಯಂಪಾಡಿಯಲ್ಲಿರುವ ಖಾಸಗಿ ಫಾರ್ಮ್‌ ಗಳಲ್ಲಿ ಪತ್ತೆಯಾಗಿದೆ ಎಂದು ಜಿಲ್ಲಾ ಪಶುಸಂಗೋಪನಾ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ … Continued

ಮುನ್ನಾರಿನಲ್ಲಿ ಭೂಮಿಯಡಿಯಿಂದ ಹೊರಬಂದ ʼಮಹಾಬಲಿʼ ಕಪ್ಪೆ : ವರ್ಷಕ್ಕೆ ಒಂದು ಬಾರಿ ಮಾತ್ರ ಕಾಣಿಸಿಕೊಳ್ಳುತ್ತದೆ ಈ ಕಪ್ಪೆ….! ಏನಿದರ ವೈಶಿಷ್ಟ್ಯ..?

ಮುನ್ನಾರ್​: ವರ್ಷಕ್ಕೆ ಒಂದು ಬಾರಿ ಮಾತ್ರ ಭೂಮಿಯಿಂದ ಹೊರ ಬಂದು ಕಾಣಿಸಿಕೊಳ್ಳುವ ಮಹಾಬಲಿ ಕಪ್ಪೆ ಈಗ ಕೇರಳದ ಮುನ್ನಾರಿನಲ್ಲಿ ಮತ್ತೆ ಕಾಣಿಸಿಕೊಂಡಿದೆ..! ಮಹಾಬಲಿ ಹೆಸರಿನ ಈ ಕಪ್ಪೆಗಳು ವರ್ಷದಲ್ಲಿ 364 ದಿನಗಳ ಕಾಲ ಭೂಮಿಯ ಒಳಗೆ ಇರುತ್ತವೆಯಂತೆ. ವರ್ಷದ ಒಂದು ದಿನ ಮಾತ್ರ ಭೂಮಿಯಿಂದ ಹೊರಬರುವ ಈ ಕಪ್ಪೆಗಳು ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್​ ಪಟ್ಟಣದ … Continued

ಗುರುವಾಯೂರು ದೇವಸ್ಥಾನದ ಶ್ರೀಕೃಷ್ಣನಿಗೆ ಚಿನ್ನದ ಕಿರೀಟ ಅರ್ಪಿಸಿದ ತಮಿಳುನಾಡು ಸಿಎಂ ಸ್ಟಾಲಿನ್ ಪತ್ನಿ

ತ್ರಿಶೂರ್: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರು ಗುರುವಾರ ತ್ರಿಶೂರ್ ಜಿಲ್ಲೆಯ ಪ್ರಖ್ಯಾತ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಡಿಎಂಕೆ ನಾಯಕನ ಪತ್ನಿ ಪ್ರಸಿದ್ಧ ದೇವಸ್ಥಾನದ ದೇವರಾದ ಶ್ರೀಕೃಷ್ಣನಿಗೆ ಚಿನ್ನದ ಕಿರೀಟವನ್ನು ಅರ್ಪಿಸಿದರು. ಸುಮಾರು 32 ಸೊವೆರಿನ್‌ ತೂಕದ ಚಿನ್ನದ ಕಿರೀಟವು ಸುಮಾರು 14 ಲಕ್ಷ ರೂ.ಗಳ ಮೌಲ್ಯದ್ದಾಗಿದೆ. … Continued

ಇಬ್ಬರು ಪುಟ್ಟ ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

ಮಲಪ್ಪುರಂ : ಕೇರಳದ ಮಲಪ್ಪುರಂ ಜಿಲ್ಲೆಯ ಮೈತ್ರಿ ನಗರದಲ್ಲಿ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮಲಪ್ಪುರಂನ ಖಾಸಗಿ ಹಣ ವರ್ಗಾವಣೆ ಸಂಸ್ಥೆಯ ವ್ಯವಸ್ಥಾಪಕ 37 ವರ್ಷದ ಸಬೀಶ, ಅವರ ಪತ್ನಿ ಶೀನಾ (35), ಮತ್ತು ಅವರ ಮಕ್ಕಳಾದ ಹರಿಗೋವಿಂದ (6) ಮತ್ತು … Continued

ಕೇರಳ : ದೇವಾಲಯಗಳ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸಿದ ಸುಮಾರು 1200 ದೇವಾಲಯ ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ

ತಿರುವನಂತಪುರಂ : ದೇವಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸುವ ಸಾಮೂಹಿಕ ಕಸರತ್ತು ಮತ್ತು ಇತರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಿರುವಾಂಕೂರು ದೇವಸ್ವಂ ಮಂಡಳಿ (TDB) ತನ್ನ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಿಗೆ ಹೊಸ ಸುತ್ತೋಲೆ ಹೊರಡಿಸಿದೆ. ತಿರುವಾಂಕೂರು ದೇವಸ್ವಂ ಮಂಡಳಿ ದಕ್ಷಿಣ ಭಾರತದಲ್ಲಿ ಸುಮಾರು 1,200 ದೇವಾಲಯಗಳನ್ನು ನಿರ್ವಹಿಸುವ ಸಂಸ್ಥೆಯಾಗಿದೆ. ದೇವಾಲಯದ ಆವರಣದಲ್ಲಿ ಆರ್‌ಎಸ್‌ಎಸ್ … Continued

ಕೇರಳ: ತನೂರ್ ಒಟ್ಟುಪುರಂ ತೂವಲ್ ಕಡಲತೀರದಲ್ಲಿ ಪ್ರವಾಸಿಗರ ದೋಣಿ ನದಿಯಲ್ಲಿ ಮುಳುಗಿ 18 ಮಂದಿ ಸಾವು

ಮಲಪ್ಪುರಂ: ಮಲಪ್ಪುರಂ ಜಿಲ್ಲೆಯ ತನೂರ್‌ನಲ್ಲಿ ಒಟ್ಟುಪುರಂ ತೂವಲ್ ಬೀಚ್‌ನ ನದಿಯಲ್ಲಿ ಪ್ರವಾಸಿಗರ ದೋಣಿ ಮುಳುಗಿ 18 ಮಂದಿ ಸಾವಿಗೀಡಾದ ಘಟನೆ ಭಾನುವಾರ ಸಂಜೆ ನಡೆದಿದೆ. ಮೂಲಗಳ ಪ್ರಕಾರ, ಸುಮಾರು 40 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಸಂಜೆ 7:30 ರ ಸುಮಾರಿಗೆ ಜಾಯ್‌ರೈಡ್‌ನಲ್ಲಿ ಪಲ್ಟಿಯಾಗಿದೆ. ಸುಮಾರು 20 ಜನರನ್ನು ರಕ್ಷಿಸಲಾಗಿದ್ದು, 15 ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತಪಟ್ಟವರಲ್ಲಿ … Continued

ಸಂಸದರಾಗಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ಕೇರಳದ ವಯನಾಡಿಗೆ ರಾಹುಲ್‌ ಗಾಂಧಿ ನಾಳೆ ಭೇಟಿ ಸಾಧ್ಯತೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ ಸದಸ್ಯರಾಗಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ಏಪ್ರಿಲ್ 11 ರಂದು ತಮ್ಮ ಹಿಂದಿನ ಕ್ಷೇತ್ರ ಕೇರಳದ ವಯನಾಡಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷ ಶಿಕ್ಷೆಗೆ ಒಳಗಾದ ನಂತರ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡಿತ್ತು. ಸೂರತ್ ನ್ಯಾಯಾಲಯವು 2019 ರಲ್ಲಿ … Continued

ಕೇರಳ ಶಾಕರ್ : ವಾಗ್ವಾದದ ನಂತರ ರೈಲಿನಲ್ಲಿ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ವ್ಯಕ್ತಿ ; ಪರಿಣಾಮ 3 ಸಾವು, 9 ಮಂದಿಗೆ ಗಾಯ

ಕೋಝಿಕ್ಕೋಡ್: ಎಕ್ಸ್‌ಪ್ರೆಸ್ ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡ ಕೆಲವೇ ಗಂಟೆಗಳ ನಂತರ ಇಲ್ಲಿನ ಎಲತ್ತೂರ್ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಒಂದು ವರ್ಷದ ಮಗು ಮತ್ತು ಮಹಿಳೆ ಸೇರಿದಂತೆ ಮೂವರು ಶವವಾಗಿ ಪತ್ತೆಯಾಗಿದೆ. ಭಾನುವಾರ ತಡರಾತ್ರಿ ಹಳಿಯಿಂದ ಮಹಿಳೆ, ಮಗು ಮತ್ತು ಪುರುಷನ ಮೃತದೇಹಗಳು ಪತ್ತೆಯಾಗಿವೆ ಎಂದು … Continued