ಕೈಕೊಟ್ಟ ಮುಂಗಾರು: 126 ವರ್ಷಗಳಲ್ಲಿ ಮಳೆಯಿಲ್ಲದೆ ಕಂಗಾಲಾಗಿಸಿದ ಜೂನ್ ತಿಂಗಳಿಗೆ ಈ ವರ್ಷದ ಜೂನ್‌ ತಿಂಗಳೂ ಸೇರ್ಪಡೆ…!

ನವದೆಹಲಿ: ಭಾರತದಲ್ಲಿ ಈ ವರ್ಷದ (2026) ಮುಂಗಾರು ಆರಂಭದಲ್ಲೇ ತೀವ್ರ ನಿರಾಸೆ ಮೂಡಿಸಿದೆ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ವಾಯುವ್ಯ ಭಾರತದ ಹಲವು ಭಾಗಗಳಿಗೆ ಮುಂಗಾರು ಮಾರುತಗಳ ಆಗಮನ ಮತ್ತಷ್ಟು ವಿಳಂಬವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮುಂಗಾರಿನ ಪ್ರಗತಿ ತೀವ್ರ ಅಸಮತೋಲನದಿಂದ ಕೂಡಿದ್ದು, ದೇಶದ ಬಹುದೊಡ್ಡ ಭಾಗಗಳು ಇನ್ನೂ ಮಳೆಯ … Continued

ಮುಂಗಾರು ಕುಂಠಿತ ? ಭಾರತದ ಬಹುತೇಕ ಭಾಗಗಳಲ್ಲಿ ಮಳೆಮೋಡಗಳೇ ಕಾಣುತ್ತಿಲ್ಲ ; ಉಪಗ್ರಹ ಚಿತ್ರದಲ್ಲಿ ಆತಂಕಕಾರಿ ದೃಶ್ಯ

ನವದೆಹಲಿ : ನೈಋತ್ಯ ಮುಂಗಾರು ದೇಶದ ಬಹುತೇಕ ಭಾಗಗಳಿಗೆ ಅಧಿಕೃತವಾಗಿ ಪ್ರವೇಶಿಸಿದ್ದರೂ, ಮಧ್ಯ, ಪಶ್ಚಿಮ ಹಾಗೂ ವಾಯವ್ಯ ಭಾರತದ ವಿಶಾಲ ಪ್ರದೇಶಗಳಲ್ಲಿ ಅಸಾಮಾನ್ಯವಾಗಿ ಕಂಡುಬರುವ ಮೋಡರಹಿತ ವಾತಾವರಣ ಮುಂದುವರಿದಿದೆ. ಇತ್ತೀಚಿನ ಉಪಗ್ರಹ ಚಿತ್ರಗಳು ದೇಶದ ಬಹುಭಾಗದಲ್ಲಿ ವ್ಯಾಪಕ ಮಳೆ ಸುರಿಸುವ ದಟ್ಟ ಮಳೆಮೋಡಗಳು ಕಾಣಿಸದಿರುವುದನ್ನು ಸ್ಪಷ್ಟವಾಗಿ ತೋರಿಸಿವೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿಅಂಶಗಳ ಪ್ರಕಾರ, … Continued

ಮುಂಗಾರಿನ ಉಲ್ಟಾ ಪಲ್ಟಾ ಆಟ : ರಾಜಸ್ಥಾನದ ಮರುಭೂಮಿ ಹಸಿರಾಗುತ್ತಿದೆ, ಮಳೆ ಬೀಳುವ ಪ್ರದೇಶಗಳು ಒಣಗುತ್ತಿವೆ ಯಾಕೆ ?

ನವದೆಹಲಿ: ದೇಶಾದ್ಯಂತ ನೈಋತ್ಯ ಮುಂಗಾರು ಮಾರುತಗಳು ಮತ್ತೊಮ್ಮೆ ಚುರುಕಾಗಲಿ ಎಂದು ಇಡೀ ಭಾರತ ಕಾತರದಿಂದ ಕಾಯುತ್ತಿರುವ ಬೆನ್ನಲ್ಲೇ, ದೇಶದ ಹವಾಮಾನ ವ್ಯವಸ್ಥೆಯಲ್ಲಿ ತೀರಾ ಆಶ್ಚರ್ಯಕರ ಮತ್ತು ಆತಂಕಕಾರಿ ವಿದ್ಯಮಾನವೊಂದು ಮುಂಚೂಣಿಗೆ ಬಂದಿದೆ. ಭಾರತದ ಅತ್ಯಂತ ಒಣ ಭೂಮಿ ಹಾಗೂ ಥಾರ್ ಮರುಭೂಮಿಯ ನೆಲೆಯಾಗಿರುವ ರಾಜಸ್ಥಾನದಲ್ಲಿ ಈ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದೆ. ಆದರೆ, … Continued

ಕೇರಳಕ್ಕೆ ಮುಂಗಾರು ಪ್ರವೇಶ: 8 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಣೆ

ತಿರುವನಂತಪುರಂ: ನೈಋತ್ಯ ಮುಂಗಾರು ಗುರುವಾರ ಕೇರಳವನ್ನು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ದೃಢಪಡಿಸಿದೆ. ಇದು ವಾಡಿಕೆಗಿಂತ ಮೂರು ದಿನ ವಿಳಂಬವಾಗಿದೆ. ಮುಂಗಾರು ಮಾರುತಗಳ ಆಗಮನದಿಂದಾಗಿ ಕೇರಳ ಮತ್ತು ಲಕ್ಷದ್ವೀಪದಾದ್ಯಂತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಕೇರಳದ ಹಲವು ಜಿಲ್ಲೆಗಳಲ್ಲಿ ಭಾರಿ ಹಾಗೂ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್‌ … Continued

ಶಾಕಿಂಗ್‌ ಸುದ್ದಿ ; ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ-ಜೂನ್‌ನಲ್ಲಿ ಕ್ಷೀಣ ; ಶಾಖದ ಅಲೆ ತೀವ್ರ : ಹವಾಮಾನ ಇಲಾಖೆ

ನವದೆಹಲಿ: ದೇಶದ ಬಹುತೇಕ ಭಾಗಗಳು ಭೀಕರ ಬೇಸಿಗೆಯ ಬಿಸಿಲ ಧಗೆಯಿಂದ ತತ್ತರಿಸುತ್ತಿರುವ ಬೆನ್ನಲ್ಲೇ, ಸಾರ್ವಜನಿಕರಿಗೆ ಹಾಗೂ ಕೃಷಿ ವಲಯಕ್ಕೆ ಭಾರತೀಯ ಹವಾಮಾನ ಇಲಾಖೆ (IMD) ಮತ್ತೊಂದು ಆಘಾತಕಾರಿ ಸುದ್ದಿ ನೀಡಿದೆ. ಹವಾಮಾನ ಇಲಾಖೆಯು ಶುಕ್ರವಾರದ ತನ್ನ ಮುನ್ಸೂಚನೆಯಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯ ನೈಋತ್ಯ ಮುಂಗಾರು ಮಳೆಯ ಪ್ರಮಾಣವನ್ನು ಶೇ. 92 ರಿಂದ ಶೇ. 90ಕ್ಕೆ ಇಳಿಕೆ … Continued

ವಾಡಿಕೆಗಿಂತ 4 ದಿನ ಮೊದಲೇ ಮುಂಗಾರು ಮಳೆ ಆಗಮನ : ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ಈ ವರ್ಷದ ನೈಋತ್ಯ ಮುಂಗಾರು ಮಾರುತಗಳು ವಾಡಿಕೆಗಿಂತ ತುಸು ಮುಂಚಿತವಾಗಿ ಕೇರಳಕ್ಕೆ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಅಂದರೆ ನೈಋತ್ಯ ಮುಂಗಾರು ಮೇ 26 ರಂದು ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಇಲಾಖೆ ತಿಳಿಸಿದೆ. ಈ ಮುನ್ಸೂಚನೆಯಂತೆ ನಾಲ್ಕು ದಿನಗಳ ಮುಂಚಿತವಾಗಿ ಅಥವಾ ತಡವಾಗಿ (ಪ್ಲಸ್ … Continued

ವಾಡಿಕೆಗಿಂತ ಒಂದು ವಾರಕ್ಕಿಂತ ಮೊದಲೇ ಕೇರಳಕ್ಕೆ ಆಗಮಿಸಿದ ನೈಋತ್ಯ ಮುಂಗಾರು ಮಳೆ…!

ನವದೆಹಲಿ: ನೈಋತ್ಯ ಮಾನ್ಸೂನ್ ಶನಿವಾರ ಕೇರಳವನ್ನು ತಲುಪಿದ್ದು, 2009 ರ ನಂತರ ಭಾರತದ ಮುಖ್ಯ ಭೂಭಾಗಕ್ಕೆ ನೈಋತ್ಯ ಮುಂಗಾರು ಮಳೆ ಇಷ್ಟು ಮೊದಲು ಆಗಮಿಸಿರುವುದು ಇದೇ ಮೊದಲು ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ. 2009 ರಲ್ಲಿ, ಮಾನ್ಸೂನ್ ಮೇ 23 ರಂದು ಕೇರಳಕ್ಕೆ ಆಗಮಿಸಿತ್ತು, 1975 ರಿಂದ ಲಭ್ಯವಿರುವ ದತ್ತಾಂಶವು ಮಾನ್ಸೂನ್ 1990 … Continued