ಪಾಕ್‌ ಕ್ರಿಕೆಟ್‌ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಅಣ್ಣನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿ ; ವಿಡಿಯೋ ವೈರಲ್‌

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರ ಹಿರಿಯ ಸಹೋದರ ಶಾಹಿದ್ ಅಖ್ತರ್ ಅವರ ಅಂತ್ಯಕ್ರಿಯೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಮತ್ತು ಅದರ ರಾಜಕೀಯ ಮುಖವಾಣಿ ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ (PMML) ನಾಯಕರು ಅಲ್ಲಿ ಕಾಣಿಸಿಕೊಂಡಿರುವುದು ಪಾಕಿಸ್ತಾನದಲ್ಲಿ ಉಗ್ರರಿಗೆ ಸುರಕ್ಷಿತ ಆಶ್ರಯ ದೊರೆಯುತ್ತಿದೆ ಎಂಬ ಆತಂಕವನ್ನು ಮತ್ತೊಮ್ಮೆ ಹೆಚ್ಚಿಸಿದೆ. … Continued

ವಿಡಿಯೋ | ಬೆಂಗಳೂರು : ಹೆಲ್ಮೆಟ್ ಇಲ್ಲದೆ ಹೋಗುತ್ತಿದ್ದ ಬೈಕ್ ಸವಾರನ ತಲೆ ಮೇಲೆ ಬಿದ್ದ ಮರದ ಕೊಂಬೆ ; ಗಂಭೀರ ಗಾಯ

ಬೆಂಗಳೂರು: ಮಹಾನಗರದ ರಾಜಾಜಿನಗರದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ, ರಸ್ತೆಯ ಬದಿಯ ಒಣ ಮರದ ಬೃಹತ್ ಕೊಂಬೆಯೊಂದು ಬೈಕ್ ಸವಾರನ ತಲೆಯ ಮೇಲೆ ಬಿದ್ದ ಪರಿಣಾಮ 52 ವರ್ಷದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಈ ಘಟನೆ ಬುಧವಾರ ಸಂಜೆ ನಡೆದಿದೆಎಂದು ಹೇಳಲಾಗಿದೆ. ಈ ಘಟನೆ ರಾಮಮಂದಿರ ರಸ್ತೆಯಲ್ಲಿ ನಡೆದಿದ್ದು, ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ … Continued

ವಿಡಿಯೋ | ಬೆಂಗಳೂರು : ಚಲಿಸುತ್ತಿದ್ದ ಶಾಲಾ ವಾಹನದ ಹಿಂಬಾಗಿಲು ತೆರೆದು ರಸ್ತೆಗೆ ಬಿದ್ದ ಮಕ್ಕಳು….!

ಬೆಂಗಳೂರು: ಶಾಲಾ ಮಕ್ಕಳನ್ನು ಒಯ್ಯುತ್ತಿದ್ದ ಓಮ್ನಿಯ ಹಿಂಬದಿಯ ಬಾಗಿಲು ದಿಢೀರನೆ ತೆರೆದುಕೊಂಡ ಪರಿಣಾಮ ರಸ್ತೆಗೆ ಬಿದ್ದ ಐವರು ಶಾಲಾ ಮಕ್ಕಳಿಗೆ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದಿದೆ ಎಂದುವರದಿಯಾಗಿದೆ. ಮಕ್ಕಳೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಕೆ.ಆರ್.ಪುರಂನ ಗಾಯತ್ರಿ ಲೇಔಟ್‌ನಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮ್ನಿ ವ್ಯಾನ್ … Continued

ವಿಡಿಯೋ | ಮೋದಿ ಪ್ರಧಾನಿಯಾಗಿದ್ದಾಗ ಯಾರಾದ್ರೂ ಭಾರತದ ಮೇಲೆ ದಾಳಿ ಮಾಡಿದ್ರೆ……’: ಟ್ರಂಪ್ ಉತ್ತರಕ್ಕೆ ಜಾಗತಿಕ ಸಂಚಲನ

ಎವಿಯನ್ (ಫ್ರಾನ್ಸ್): ಅಮೆರಿಕ ಮತ್ತು ಭಾರತದ ನಡುವೆ ಯಾವುದೇ ಔಪಚಾರಿಕ ರಕ್ಷಣಾ ಒಪ್ಪಂದವಿಲ್ಲದಿದ್ದರೂ, ಸಂಕಷ್ಟದ ಸಮಯದಲ್ಲಿ ಅಮೆರಿಕ ಯಾವಾಗಲೂ ನವದೆಹಲಿಯ ಬೆಂಬಲಕ್ಕೆ ನಿಲ್ಲಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಉಭಯ ದೇಶಗಳ ರಕ್ಷಣಾ ಬಾಂಧವ್ಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮ ನಡುವಿನ ಸಂಬಂಧ ಅತ್ಯುತ್ತಮವಾಗಿದೆ. ಭಾರತದೊಂದಿಗೆ ನಮ್ಮದು ಯಾವುದೇ ಔಪಚಾರಿಕ … Continued

ವಿಡಿಯೋ | ಅಹಮದಾಬಾದ್ : ವಿಮಾನದ ಸ್ಪೀಕರ್ ಬಾಕ್ಸ್‌ನಲ್ಲಿ ಬಚ್ಚಿಟ್ಟಿದ್ದ ₹4.26 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್‌ ಪತ್ತೆ

ಅಹಮದಾಬಾದ್: ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದುಬೈನಿಂದ ಬಂದ ಇಂಡಿಗೋ ವಿಮಾನದಲ್ಲಿ ಸ್ಪೀಕರ್ ಬಾಕ್ಸ್‌ನಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 4.26 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಆಗಮಿಸಿದ ಇಂಡಿಗೋ ಸಂಸ್ಥೆಯ ‘6E-1478’ ವಿಮಾನದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತು ವಿಮಾನದ … Continued

ವಿಡಿಯೋ ವೈರಲ್‌ | ದಿಢೀರನೆ ಬಂದು ನಾಯಿ ಮರಿ ಹೊತ್ತೊಯ್ದು ಮರ ಏರಿ ಕುಳಿತ ದೈತ್ಯ ಮಂಗ…! ಮುಂದೇನಾಯ್ತು ಗೊತ್ತೆ…?

ಪ್ರಕೃತಿಯಲ್ಲಿ ಪ್ರಾಣಿಗಳ ನಡುವಿನ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಕೊನೆಯಿಲ್ಲ ಎಂಬುದಕ್ಕೆ ಸಾಕ್ಷಿಯಾದ ಅಪರೂಪದ ಘಟನೆಯೊಂದು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇಲ್ಲಿನ ರೇವಾಲ್ಸರ್ ಪ್ರದೇಶದಲ್ಲಿ ಕೋತಿಯೊಂದು ನಾಯಿ ಮರಿಯನ್ನು ಹೊತ್ತೊಯ್ದು ಮರದ ಮೇಲೆ ಕುಳಿತು ಪ್ರೀತಿಯಿಂದ ನೋಡಿಕೊಂಡ ದೃಶ್ಯ ಸ್ಥಳೀಯರ ಮನಗೆದ್ದಿದೆ. ಸ್ಥಳೀಯರು ನೀಡಿದ … Continued

ಮನಮಿಡಿಯುವ ವಿಡಿಯೋ : ಕೊಕ್ಕಿಲ್ಲದ ಹಕ್ಕಿಗೆ ತುತ್ತು ಉಣಿಸಿ ಕಾಪಾಡುವ ಮತ್ತೊಂದು ಹಕ್ಕಿ : ಪಕ್ಷಿ ಲೋಕದ ಈ ಪ್ರೀತಿಗೆ ಜಗತ್ತೇ ಫಿದಾ

ಪ್ರೀತಿ, ಕರುಣೆ ಮತ್ತು ವಾತ್ಸಲ್ಯ ಎಂಬುದು ಕೇವಲ ಮಾನವ ಕುಲಕ್ಕೆ ಮಾತ್ರ ಸೀಮಿತವಲ್ಲ; ಅದು ಇಡೀ ಸೃಷ್ಟಿಯ ಅಂತರ್ಗತ ಗುಣ ಎಂಬುದನ್ನು ಸಾಬೀತುಪಡಿಸುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಹೃದಯಗಳನ್ನು ಗೆಲ್ಲುತ್ತಿದೆ. ವಿಧಿಯ ಆಟಕ್ಕೆ ಸಿಲುಕಿ ಅಸಹಾಯಕವಾಗಿದ್ದ ಹಕ್ಕಿಯೊಂದಕ್ಕೆ, ಮತ್ತೊಂದು ಹಕ್ಕಿ ಸಂಜೀವಿನಿಯಂತೆ ಬಂದು ಆಸರೆಯಾದ ಹೃದಯ ತಟ್ಟುವ ದೃಶ್ಯವಿದು. ವೈರಲ್ … Continued

ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ: ಬೆಂಕಿ ಉಂಡೆಯಾದ ಟರ್ಮಿನಲ್, ವಿನಾಶದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕುವೈತ್ ಸಿಟಿ: ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮದ ನಡುವೆಯೇ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1 ರ ಮೇಲೆ ಭೀಕರ ಡ್ರೋನ್ ದಾಳಿ ನಡೆದಿದೆ. ಈ ಘಟನೆಯಲ್ಲಿ ಓರ್ವ ಭಾರತೀಯ ನಾಗರಿಕ ಮೃತಪಟ್ಟಿದ್ದು, ಕನಿಷ್ಠ 63 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ದಾಳಿಯ ಬೆನ್ನಲ್ಲೇ ಕುವೈತ್ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಸ್ಫೋಟದ ಸಿಸಿಟಿವಿ … Continued

ತ್ವಿಶಾ ಶರ್ಮಾ ಸಾವಿನ ಪ್ರಕರಣ ; ಪ್ರಮುಖ ಸಾಕ್ಷಿಯ ಮೇಲೆ ಹಲ್ಲೆ, ಬೆದರಿಕೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭೋಪಾಲ್ : ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ತ್ವಿಶಾ ಶರ್ಮಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆರೋಪಿ ಸಮರ್ಥ ಸಿಂಗ್‌ನ ಸ್ನೇಹಿತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಕೋರ್ಟ್‌ನಲ್ಲಿ ಸಾಕ್ಷಿ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರು ಆರೋಪಿಸಿದ್ದಾರೆ. ಯುವತಿಯ ಕುಟುಂಬಸ್ಥರು … Continued

ವಿಡಿಯೋ | ಬೆಂಗಳೂರು : ರಾಜ್ಯಪಾಲರ ಸಂಚಾರಕ್ಕಾಗಿ ಸಂಚಾರ ಸ್ಥಗಿತ ; ಗರ್ಭಿಣಿ ಪತ್ನಿ ಚಿಕಿತ್ಸೆಗಾಗಿ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದ ಪತಿ !

ಬೆಂಗಳೂರು: ನಗರದ ಸಂಚಾರ ದಟ್ಟಣೆಯ ನಡುವೆ ವಿಐಪಿ (VIP) ಸಂಸ್ಕೃತಿಯ ಅತಿರೇಕ ಮತ್ತೊಮ್ಮೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯಪಾಲರ ಬೆಂಗಾವಲು ಪಡೆಯ (ಕಾನ್ವಾಯ್) ಸುಗಮ ಸಂಚಾರಕ್ಕಾಗಿ ಪೊಲೀಸರು ಬರೋಬ್ಬರಿ 30 ನಿಮಿಷಗಳ ಕಾಲ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ, ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ಗರ್ಭಿಣಿ ಪತ್ನಿಯ ತುರ್ತು ವೈದ್ಯಕೀಯ ತಪಾಸಣೆಗಾಗಿ ಆಕೆಯ ಪತಿ … Continued