ವಿಡಿಯೋ | ಅಂಡಮಾನ್‌ ಬೀಚ್‌ನಲ್ಲಿ ಇತಿಹಾಸ : ಸಾಗರದ ನೀರಿನೊಳಗೆ ರಾರಾಜಿಸಿದ ವಿಶ್ವದ ಅತಿದೊಡ್ಡ ರಾಷ್ಟ್ರಧ್ವಜ ; ಗಿನ್ನೆಸ್ ದಾಖಲೆ

ಶ್ರೀ ವಿಜಯಪುರಂ: ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹವು ಶನಿವಾರದಂದು ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಸ್ವರಾಜ್ ದ್ವೀಪದ (ಹ್ಯಾವ್ಲಾಕ್ ಐಲೆಂಡ್) ವಿಶ್ವಪ್ರಸಿದ್ಧ ರಾಧಾನಗರ ಬೀಚ್‌ನಲ್ಲಿ ವಿಶ್ವದ ಅತಿದೊಡ್ಡ ‘ಅಂಡರ್ ವಾಟರ್’ (ನೀರೊಳಗಿನ) ರಾಷ್ಟ್ರಧ್ವಜವನ್ನು ಅನಾವರಣಗೊಳಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ. ಸಮುದ್ರದಾಳದಲ್ಲಿ ಅನಾವರಣಗೊಂಡ ಈ ಬೃಹತ್ ತ್ರಿವರ್ಣ ಧ್ವಜವು ಸುಮಾರು 60 … Continued

ಹೋಟೆಲ್‌ ರೂಂನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳಾ ವೈದ್ಯರ ವಿಡಿಯೋ ಚಿತ್ರೀಕರಿಸಿದ ಶ್ರೀಲಂಕಾದ ಇಬ್ಬರು ಕ್ರಿಕೆಟಿಗರು ಬಂಧನ

ಕೊಲೊಂಬೊ: ಶ್ರೀಲಂಕಾ ಕ್ರಿಕೆಟಿಗರು ಮೈದಾನದ ಹೊರಗಿನ ಅಶಿಸ್ತಿನ ಕಾರಣಗಳಿಗಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ದೇಶದ ಇಬ್ಬರು 19 ವರ್ಷದೊಳಗಿನ (U-19) ಕ್ರಿಕೆಟಿಗರು ಖಾಸಗಿ ಹೋಟೆಲ್‌ನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳಾ ವೈದ್ಯರ ವಿಡಿಯೋವನ್ನು ಗುಟ್ಟಾಗಿ ಚಿತ್ರೀಕರಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ವೃತ್ತಿಪರ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಮಹಿಳಾ ವೈದ್ಯರು ಆ ಹೋಟೆಲ್‌ನಲ್ಲಿ ತಂಗಿದ್ದರು ಎನ್ನಲಾಗಿದೆ. ಪೊಲೀಸರ ಮಾಹಿತಿ … Continued

ವಿಡಿಯೊ | ಸುಡುವ ಬಿಸಿಲಿನಿಂದ ಬಚಾವಾಗಲು ಹಾಲಿನ ಕ್ಯಾನ್ ತಲೆಗೆ ಹಾಕಿಕೊಂಡ ವ್ಯಕ್ತಿ; ಕ್ಯಾನ್‌ ಒಳಗೆ ಸಿಲುಕಿಕೊಂಡ ತಲೆ…!

ಉತ್ತರ ಭಾರತದಲ್ಲಿ ಬಿಸಿ ಗಾಳಿ ಜೋರಾಗಿದ್ದು, ಜನ ಬಿಸಿಲಿನಿಂದ ಬಚಾವಾಗಲು ವಿಚಿತ್ರ ಸಾಹಸಗಳಿಗೆ ಕೈಹಾಕುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ರಾಜಸ್ಥಾನದ ಗ್ರಾಮೀಣ ಭಾಗದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಲಿನ ಪಾತ್ರೆಯನ್ನೇ (Milk Can) ತಲೆಗೆ ಹೆಲ್ಮೆಟ್‌ನಂತೆ ಧರಿಸಲು ಹೋಗಿ ವಿಚಿತ್ರ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ … Continued

ವೀಡಿಯೊ | ಟ್ರಂಪ್‌ ಪಾಲ್ಗೊಂಡಿದ್ದ ಅಮೆರಿಕ ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ದಾಳಿ ; ದಾಳಿ ಮಾಡಲು ಬಂದಿದ್ದ ವ್ಯಕ್ತಿ ಯಾರು ?

 ವಾಷಿಂಗ್ಟನ್:  ವಿಶ್ವದ ದೊಡ್ಡಣ್ಣ ಅಮೆರಿಕದ ಆಡಳಿತ ಶಕ್ತಿಕೇಂದ್ರ ವೈಟ್ ಹೌಸ್ ನಲ್ಲಿ  ವರದಿಗಾರರ ವಾರ್ಷಿಕ ಔತಣಕೂಟ ಕಾರ್ಯಕ್ರಮದಲ್ಲಿ ಹಠಾತ್ ಶೂಟೌಟ್ ಸದ್ದು ಕೇಳಿಬಂದಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸುರಕ್ಷಿತವಾಗಿ ಅಧಿಕಾರಿಗಳು ಸ್ಥಳಾಂತರಿಸಿದ ಘಟನೆ ನಡೆಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಭಾಗವಹಿಸಿದ್ದ ಹೈ-ಪ್ರೊಫೈಲ್ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ … Continued

ವೇಗದ ಬೋಟ್, ಮಾಸ್ಕ್‌ ಧರಿಸಿ ರೈಫಲ್ ಹಿಡಿದ ಸೈನಿಕರು…: ಭಾರತಕ್ಕೆ ಬರುತ್ತಿದ್ದ ಹಡಗು ವಶಕ್ಕೆ ಪಡೆದ ವಿಡಿಯೋ ಹಂಚಿಕೊಂಡ ಇರಾನ್ ಸೈನಿಕರು

ತೆಹ್ರಾನ್: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬುಧವಾರ ಹಾರ್ಮುಜ್ ಜಲಸಂಧಿಯಲ್ಲಿ ಹಾದುಹೋಗುತ್ತಿದ್ದ ಎಂಎಸ್‌ಸಿ (MSC) ಫ್ರಾನ್ಸೆಸ್ಕಾ ಮತ್ತು ಎಪಾಮಿನೋಂಡಾಸ್ ಎಂಬ ಎರಡು ಬೃಹತ್ ಸರಕು ಹಡಗುಗಳನ್ನು ತಡೆಹಿಡಿದ ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ಹಡಗುಗಳು ಹಾರ್ಮುಜ್‌ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ಇರಾನ್ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಅಲ್ಲಿನ ಸರ್ಕಾರಿ … Continued

ವಿಡಿಯೊ..| ಪ್ರಧಾನಿ ಮೋದಿ ಒಬ್ಬ ‘ಭಯೋತ್ಪಾದಕ’ : ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ; ನಂತರ ಸ್ಪಷ್ಟೀಕರಣ

ಚೆನ್ನೈ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಭಯೋತ್ಪಾದಕ’ ಎಂದು ಕರೆದಿದ್ದು, ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಎಐಎಡಿಎಂಕೆಯನ್ನು (AIADMK) ಪ್ರಶ್ನಿಸುವ ಸಂದರ್ಭದಲ್ಲಿ ಖರ್ಗೆ ಈ ಹೇಳಿಕೆ ನೀಡಿದ್ದಾರೆ. “ಅಣ್ಣಾದೊರೈ ಅವರ ಫೋಟೋ ಹಾಕಿಕೊಳ್ಳುವ ಎಐಎಡಿಎಂಕೆ … Continued

ವಿಡಿಯೋ | ಚಂದಿರನ ಅಕ್ಕಪಕ್ಕ ಹೋಗಿ ಮರಳಿದ ನಾಲ್ವರು ಗಗನಯಾತ್ರಿಗಳು ; ಆರ್ಟೆಮಿಸ್ II ಪೆಸಿಫಿಕ್ ಸಾಗರದಲ್ಲಿ ಯಶಸ್ವಿ ಲ್ಯಾಂಡಿಗ್‌

ಫ್ಲೋರಿಡಾ: ದಶಕಗಳ ನಂತರ ಚಂದ್ರನ ಸಮೀಪಕ್ಕೆ ಪ್ರಯಾಣ ಬೆಳೆಸಿದ್ದ ನಾಲ್ವರು ಗಗನಯಾತ್ರಿಗಳು ತಮ್ಮ 10 ದಿನಗಳ ಐತಿಹಾಸಿಕ ಬಾಹ್ಯಾಕಾಶ ಯಾನವನ್ನು ಮುಗಿಸಿ ಶುಕ್ರವಾರ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಹಮ್ಮಿಕೊಂಡಿದ್ದ ‘ಆರ್ಟೆಮಿಸ್ II’ (Artemis II) ಮಿಷನ್‌ನ ಭಾಗವಾಗಿದ್ದ ಈ ಗಗನಯಾತ್ರಿಗಳು ಕ್ಯಾಲಿಫೋರ್ನಿಯಾ ಕರಾವಳಿಯ ಪೆಸಿಫಿಕ್ ಸಾಗರದಲ್ಲಿ ಯಶಸ್ವಿಯಾಗಿ ಇಳಿದಿದ್ದಾರೆ. … Continued

ಮತ್ತೆ ಸಂಘರ್ಷ ನಡೆದರೆ ನಾವು ಕೋಲ್ಕತ್ತಾ ಮೇಲೆ ದಾಳಿ ಮಾಡ್ತೇವೆ…’: ಭಾರತಕ್ಕೆ ಬೆದರಿಕೆ ಹಾಕಿದ ಪಾಕ್ ರಕ್ಷಣಾ ಸಚಿವ

ಸಿಯಾಲ್ಕೋಟ್: ಭಾರತದೊಂದಿಗೆ ಭವಿಷ್ಯದಲ್ಲಿ ಯಾವುದೇ ರೀತಿಯಸಂಘರ್ಷ ಉಂಟಾದಲ್ಲಿ, ಪಾಕಿಸ್ತಾನ ಈ ಬಾರಿ ಕೋಲ್ಕತ್ತಾವನ್ನು ಟಾರ್ಗೆಟ್‌ ಮಾಡಲಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಶನಿವಾರ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಿಯಾಲ್ಕೋಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಭಾರತವು ಈ ಬಾರಿಯೂ ಯಾವುದೇ ‘ಫಾಲ್ಸ್ ಫ್ಲಾಗ್ ಆಪರೇಷನ್’ (ನಕಲಿ ಕಾರ್ಯಾಚರಣೆ) ನಡೆಸಲು ಪ್ರಯತ್ನಿಸಿದರೆ, ನಾವು ಅದನ್ನು ಕೋಲ್ಕತ್ತಾದವರೆಗೂ … Continued

ಅಮೆರಿಕದ ದಾಳಿಯಲ್ಲಿ ಇರಾನಿನ ಹಲವು ಉನ್ನತ ಸೇನಾಧಿಕಾರಿಗಳು ಸಾವು ಎಂದ ಟ್ರಂಪ್‌ ; ವಿಡಿಯೊ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್ : ಇರಾನ್ ರಾಜಧಾನಿ ತೆಹ್ರಾನ್ ಮೇಲೆ ಅಮೆರಿಕ “ಬೃಹತ್ ದಾಳಿ” ನಡೆಸಿದ್ದು, ಇದರಲ್ಲಿ ಇರಾನ್‌ನ ಹಲವಾರು ಉನ್ನತ ಸೇನಾ ಅಧಿಕಾರಿಗಳು ಹತರಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಶನಿವಾರ (ಅಮೆರಿಕ ಕಾಲಮಾನ) ತಮ್ಮ ‘ಟ್ರುತ್ ಸೋಷಿಯಲ್’ (Truth Social) ಜಾಲತಾಣದಲ್ಲಿ ಅವರು ಈ  ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದಾಳಿಯ ನಂತರದ ದೃಶ್ಯಾವಳಿ ಎನ್ನಲಾದ … Continued

ಇರಾಕಿನ ಬಾಗ್ದಾದಿನಲ್ಲಿ ಅಮೆರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆಯ ಅಪಹರಣ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ಅಮೆರಿಕದ ಖ್ಯಾತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್ಸನ್ (Shelly Kittleson) ಅವರನ್ನು ಸಶಸ್ತ್ರ ದುಷ್ಕರ್ಮಿಗಳು ಹಾಡುಹಗಲೇ ಅಪಹರಿಸಿದ್ದಾರೆ. ಈ ಘಟನೆಯನ್ನು ಇರಾಕ್‌ನ ಆಂತರಿಕ ಸಚಿವಾಲಯ ಖಚಿತಪಡಿಸಿದ್ದು, ದೇಶಾದ್ಯಂತ ಬಿಗಿ ಭದ್ರತೆ ಹಾಗೂ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಬಾಗ್ದಾದ್‌ನ ಜನನಿಬಿಡ ರಸ್ತೆಯಲ್ಲಿ ಶೆಲ್ಲಿ ಅವರು ಪ್ರಯಾಣಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಶಸ್ತ್ರಸಜ್ಜಿತ ವ್ಯಕ್ತಿಗಳು, … Continued