ವೀಡಿಯೊ…| ಕಾರಿನ ಬಾಗಿಲಿಗೆ ಹೆಬ್ಬೆರಳು ಸಿಕ್ಕಿಬಿದ್ದರೂ ವ್ಯಕ್ತಿಯನ್ನು ರಸ್ತೆಯಲ್ಲಿ ಅರ್ಧ ಕಿಮೀ ಎಳೆದೊಯ್ದ ಚಾಲಕ…!

ವಯನಾಡು: ಎರಡು ಗುಂಪುಗಳ ನಡುವಿನ ಜಗಳ ಬಿಡಿಸಲು ಹೋದ ಆದಿವಾಸಿ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ರಸ್ತೆಯುದ್ದಕ್ಕೂ ಅಮಾನುಷವಾಗಿ ಎಳೆದೊಯ್ದ ಘಟನೆ ವಯನಾಡಿನ ಮಾನಂತವಾಡಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಮಥನ್ ಎಂದು ಗುರುತಿಸಲಾಗಿದ್ದು, ಕಾರಿನ ಬಾಗಿಲಿಗೆ ಕೈ ಸಿಕ್ಕಿಕೊಂಡ ಆತನನ್ನು ಸುಮಾರು ಅರ್ಧ ಕಿಲೋಮೀಟರ್ ಎಳೆದೊಯ್ದಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು, ಕೃತ್ಯದಲ್ಲಿ … Continued

ವಯನಾಡು ಉಪಚುನಾವಣೆ: ರಾಹುಲ್‌ ಗಾಂಧಿಗಿಂತ ಹೆಚ್ಚಿನ ಅಂತರದಲ್ಲಿ ಜಯಗಳಿಸಿದ ಸಹೋದರಿ ಪ್ರಿಯಾಂಕಾ ಗಾಂಧಿ…!

ತಿರುವನಂತಪುರಂ: ಇಡೀ ದೇಶದ ಗಮನ ಸೆಳೆದಿದ್ದ ವಯನಾಡು (Wayanad) ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ (Priyanka Gandhi) 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. ರಾಹುಲ್‌ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ಸಹೋದರ ರಾಹುಲ್‌ ಗಾಂಧಿ … Continued

ವಯನಾಡು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಗಾಂಧಿ ಆಸ್ತಿ ಘೋಷಣೆ ; ಇವರಿಗಿಂತ ಪತಿಯ ಆಸ್ತಿ 5 ಪಟ್ಟು ಹೆಚ್ಚು

 ವಯನಾಡು : ವಯನಾಡು ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿರುವ ಪ್ರಿಯಾಂಕಾ ತಮ್ಮ ಬಳಿ ಇರುವ ಆಸ್ತಿಯ ಮೌಲ್ಯವನ್ನು ಘೋಷಿಸಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಸುಮಾರು 12 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಅವರ ಪತಿ ರಾಬರ್ಟ್ ವಾದ್ರಾ ಅವರು ಸುಮಾರು 66 ಕೋಟಿ ರೂಪಾಯಿ ಮೌಲ್ಯದ ಆಸ್ತಿ … Continued

ವಯನಾಡು ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ

ವಯನಾಡು : ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ವಯನಾಡು ಲೋಕಸಭೆ ಕ್ಷೇತ್ರಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಅವರು ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, … Continued

ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆ ; ಕಾಂಗ್ರೆಸ್ ನಿಂದ ಪ್ರಿಯಾಂಕಾ ಗಾಂಧಿ ಹೆಸರು ಘೋಷಣೆ

ನವದೆಹಲಿ: ಚುನಾವಣಾ ಆಯೋಗವು (EC) ವಯನಾಡು ಮತ್ತು ನಾಂದೇಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯನ್ನು ಮಂಗಳವಾರ ಘೋಷಿಸಿದೆ. ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 13ರಂದು ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ವಯನಾಡು ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಲಿದ್ದಾರೆ. ಈ ಬಗ್ಗೆ ಮಂಗಳವಾರ (ಅಕ್ಟೋಬರ್ 15) ಎಐಸಿಸಿ ಅಧಿಕೃತವಾಗಿ ಘೋಷಿಸಿದೆ. … Continued

ಬೈಕ್ ಮೆಕಾನಿಕ್ ಬೆಳಗಾಗೋದ್ರೊಳಗೆ ಕೋಟ್ಯಧಿಪತಿ : ಕೇರಳ ಲಾಟರಿಯಲ್ಲಿ 25 ಕೋಟಿ ರೂ. ಬಹುಮಾನ ಗೆದ್ದ ʻಮಂಡ್ಯ ವ್ಯಕ್ತಿʼ…!

ಮಂಡ್ಯ : ಕರ್ನಾಟಕದ ಬೈಕ್ ಮೆಕಾನಿಕ್​ ರಾತ್ರಿ ಬೆಳಗಾಗುವುದರ ಒಳಗೆ ಕೋಟ್ಯಾಧಿಪತಿಯಾಗಿದ್ದಾರೆ. ಅವರು ಲಾಟರಿಯಲ್ಲಿ‌ 25 ಕೋಟಿ ರೂ.‌ಜಾಕ್ಪಾಟ್‌ ಗೆದಿದ್ದಾರೆ…! ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಅಲ್ತಾಫ್ ಪಾಷಾ ಅವರು ಕೇರಳದ ಲಾಟರಿಯಲ್ಲಿ 25 ಕೋಟಿ ರೂ.ಬಹುಮಾನ ಗೆದ್ದಿದ್ದಾರೆ. ಕೇರಳ ಲಾಟರಿಯ ತಿರುವೋಣಂ ಬಂಪರ್ ಬಹುಮಾನ ವಿಜೇತ ವಯನಾಡಿನಿಂದ ಟಿಕೆಟ್‌ ಖರೀದಿಸಿದ್ದಾರೆ. ಅವರು ವಯನಾಡಿನಲ್ಲಿರುವ ಸಂಬಂಧಿಕರ … Continued

ಇದು ಸಾಮಾನ್ಯ ಅನಾಹುತವಲ್ಲ… : ವಯನಾಡು ಭೂಕುಸಿತ ಪೀಡಿತ ಪ್ರದೇಶಗಳಿಗೆ ಪ್ರಧಾನಿ ಮೋದಿ ಭೇಟಿ

ವಯನಾಡು: ವಿನಾಶಕಾರಿ ಭೂಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದಾರೆ. 400 ಕ್ಕೂ ಹೆಚ್ಚು ಜನರು ಸಾವಿಗೀಡಾಗಿ ನೂರಾರು ಜನ ಗಾಯಗೊಂಡಿರುವ ಕೇರಳದ ವಯನಾಡು ಜಿಲ್ಲೆಯ ಮುಂಡಕೈ-ಚೂರಲ್‌ಮಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಕಲ್ಪೆಟ್ಟಾದ ಎಸ್.ಕೆ.ಎಂ.ಜೆ. ಶಾಲಾ … Continued

ವೀಡಿಯೊ | ವಯನಾಡು ಭೂ ಕುಸಿತ : 10 ದಿನಗಳಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸೇನೆಗೆ ಜನರಿಂದ ಭಾವನಾತ್ಮಕ ಬೀಳ್ಕೊಡುಗೆ

ವಯನಾಡು : ಇತ್ತೀಚಿನ ಭೂಕುಸಿತ ರಕ್ಷಣಾ ಕಾರ್ಯಾಚರಣೆಗಳ ಸಮಯದಲ್ಲಿ ಭಾರತೀಯ ಸೈನಿಕರ ಧೀರ ಪ್ರಯತ್ನಗಳನ್ನು ಗುರುತಿಸಿ, ಕೇರಳದ ವಯನಾಡ್‌ನಲ್ಲಿ ಭಾರತೀಯ ಸೇನಾ ಸಿಬ್ಬಂದಿಗೆ ಜನರು ಹೃತ್ಪೂರ್ವಕ ಮತ್ತು ಭಾವನಾತ್ಮಕ ವಿದಾಯ ಹೇಳಿದರು. ಇತರರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಸೈನಿಕರಿಗೆ ಸ್ಥಳೀಯ ಸಮುದಾಯ ಮತ್ತು ಹೊರಗಿನವರು ಕೃತಜ್ಞತೆ ಮತ್ತು ಮೆಚ್ಚುಗೆಯ ಸುರಿಮಳೆಗೈದರು. ಕೊಚ್ಚಿ ರಕ್ಷಣಾ ಸಾರ್ವಜನಿಕ … Continued

ವಯನಾಡು ಭೂ ಕುಸಿತ ದುರಂತ | ಸಾವಿನ ಸಂಖ್ಯೆ 316ಕ್ಕೆ ಏರಿಕೆ ; ಇನ್ನೂ 200ಕ್ಕೂ ಹೆಚ್ಚು ಜನರು ನಾಪತ್ತೆ

ವಯನಾಡು: ಕೇರಳದ  ವಯನಾಡು ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಸತ್ತವರ ಸಂಖ್ಯೆ ಶುಕ್ರವಾರ 300 ರ ಗಡಿ ದಾಟಿದೆ. ವಯನಾಡಿನ ಚೂರಲ್‌ಮಲಾ ಮತ್ತು ಮುಂಡಕ್ಕೈನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತರ ಸಂಖ್ಯೆ 316 ದಾಟಿದೆ ಹಾಗೂ 240 ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೇನೆ ಮತ್ತು ಇತರ ತಂಡದವರು ಸುಮಾರು 1,000 … Continued

ವಯನಾಡು ವಿನಾಶಕಾರಿ ಭೂಕುಸಿತ | ಸಾವಿನ ಸಂಖ್ಯೆ 282ಕ್ಕೆ ಏರಿಕೆ; 240ಕ್ಕೂ ಹೆಚ್ಚು ಜನ ನಾಪತ್ತೆ

ವಯನಾಡು : ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದ ನಂತರ ಸಾವಿನ ಸಂಖ್ಯೆ 282ಕ್ಕೆ ಏರಿದೆ ಹಾಗೂ ಗುರುವಾರ ಬೆಳಿಗ್ಗೆ 240 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 1,500 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ವಿವಿಧ ರಕ್ಷಣಾ ತಂಡಗಳು ಮತ್ತು ಸಶಸ್ತ್ರ … Continued