ನೇಪಾಳ ಪ್ರವಾಹ ದುರಂತ : ಮೃತರ ಸಂಖ್ಯೆ 1259ಕ್ಕೆ ಏರಿಕೆ, 5083 ಮಂದಿ ಇನ್ನೂ ನಾಪತ್ತೆ

ಕಠ್ಮಂಡು: ನೇಪಾಳದಲ್ಲಿ ಭೋಟೆ ಕೋಶಿ (Bhote Koshi) ನದಿಯಲ್ಲಿ ಉಂಟಾದ ಭೀಕರ ಪ್ರವಾಹ ಮತ್ತು ಭೂಕುಸಿತ ದುರಂತದ ಬಳಿಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಗುರುವಾರ ಸಂಜೆ ವೇಳೆಗೆ 1,259 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. 5,083 ಮಂದಿ ನಾಪತ್ತೆಯಾಗಿರುವುದರಿಂದ ಪರಿಸ್ಥಿತಿ ಆತಂಕಕಾರಿಯಾಗಿದೆ. ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ತಗ್ಗಿಸುವಿಕೆ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) … Continued

ನೇಪಾಳದ ಭೀಕರ ಪ್ರವಾಹಕ್ಕೂ ಮುನ್ನವೇ ಸಿಕ್ಕಿತ್ತು ಎಚ್ಚರಿಕೆಯ ಗಂಟೆ : 5 ತಿಂಗಳ ಹಿಂದೆ 2 ವರದಿಗಳು ನೀಡಿದ್ದ ಎಚ್ಚರಿಕೆ ಏನು ಗೊತ್ತೆ ?

ನವದೆಹಲಿ: ಹಿಂದೂ ಕುಶ್ ಹಿಮಾಲಯ (HKH) ಪ್ರದೇಶದಲ್ಲಿ ಹಿಮನದಿಗಳು ಕರಗುತ್ತಿರುವ ವೇಗ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಹಿಮನದಿಗಳ ಹಿಮ ಕರಗುವಿಕೆಯ ಪ್ರಮಾಣ ದುಪ್ಪಟ್ಟಾಗಿದೆ ಎಂದು ಅಂತರ್‌ ಸರ್ಕಾರಿ ಜ್ಞಾನ ಮತ್ತು ಕಲಿಕಾ ಕೇಂದ್ರವಾದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್‌ಮೆಂಟ್ (ICIMOD) ಐದು ತಿಂಗಳ ಹಿಂದೆಯೇ ತನ್ನ ಎರಡು ವರದಿಗಳಲ್ಲಿ ಎಚ್ಚರಿಸಿತ್ತು. ಕಠ್ಮಂಡುವಿನಲ್ಲಿ ಕೇಂದ್ರ … Continued

ನೇಪಾಳ ಪ್ರವಾಹದ ಬೆಚ್ಚಿ ಬೀಳಿಸುವ ದೃಶ್ಯ ವಿಡಿಯೊದಲ್ಲಿ ಸೆರೆ : ಕ್ಷಣಾರ್ಧದಲ್ಲಿ ಗ್ರಾಮವನ್ನೇ ನುಂಗಿದ ಮಹಾಪ್ರವಾಹ…!

ಕಠ್ಮಂಡು : ನೇಪಾಳ–ಟಿಬೆಟ್ ಗಡಿಭಾಗದಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ವಿಡಿಯೊಗಳು ಇದೀಗ ದುರಂತದ ಭೀಕರತೆಯನ್ನು ಬಯಲಿಗೆಳೆಯುತ್ತಿವೆ. ಭಾರೀ ಪ್ರಮಾಣದ ಮಣ್ಣು, ಕಲ್ಲು ಮತ್ತು ನೀರಿನ ಪ್ರವಾಹವು ನದಿತೀರದಲ್ಲಿ ಮನೆಗಳಿರುವ ಸಂಪೂರ್ಣ ವಸತಿ ಪ್ರದೇಶವನ್ನೇ ನಾಶಮಾಡಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ಈ ಮಹಾದುರಂತದಲ್ಲಿ ಇದುವರೆಗೆ 538 ಮಂದಿ ಸಾವಿಗೀಡಾಗಿರುವುದು ದೃಢಪಟ್ಟಿದ್ದು, 1,400ಕ್ಕೂ ಹೆಚ್ಚು ಮಂದಿ … Continued

ನೇಪಾಳ ಹಠಾತ್‌ ಪ್ರವಾಹ ದುರಂತ : ಮೃತರ ಸಂಖ್ಯೆ 469ಕ್ಕೆ ಏರಿಕೆ, 1498 ಮಂದಿ ಇನ್ನೂ ನಾಪತ್ತೆ ; ಮತ್ತೊಂದು ಪ್ರವಾಹದ ಎಚ್ಚರಿಕೆ

ಕಠ್ಮಂಡು: ನೇಪಾಳ–ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 469ಕ್ಕೆ ಏರಿಕೆಯಾಗಿದೆ ಎಂದು ನೇಪಾಳ ಪೊಲೀಸರು ಬಿಡುಗಡೆ ಮಾಡಿದ ಇತ್ತೀಚಿನ ವರದಿಯಲ್ಲಿ ತಿಳಿಸಿದ್ದಾರೆ. ದುರಂತದಲ್ಲಿ ಇದುವರೆಗೆ 1,545 ಮಂದಿ ಗಾಯಗೊಂಡಿದ್ದಾರೆ. ಹಾಗೂ 1,468 ಜನರು ನಾಪತ್ತೆಯಾಗಿದ್ದಾರೆ. ಈ ಮಧ್ಯೆ ಹಠಾತ್‌ ಪ್ರವಾಹದಿಂದ ಹೊಸದಾಗಿ ರೂಪುಗೊಂಡ ತಾತ್ಕಾಲಿಕ ಸರೋವರವು ೊಡೆದು ಮತ್ತೊಂದು ಹಠಾತ್‌ ಪ್ರವಾಹದ … Continued

ಹಠಾತ್‌ ಭೀಕರ ಪ್ರವಾಹಕ್ಕೆ ನೇಪಾಳ ತತ್ತರ ; ಸಾವಿನ ಸಂಖ್ಯೆ 353ಕ್ಕೆ ಏರಿಕೆ, 1300ಕ್ಕೂ ಹೆಚ್ಚು ಜನರು ನಾಪತ್ತೆ

ಕಠ್ಮಂಡು: ನೇಪಾಳವನ್ನು ತತ್ತರಗೊಳಿಸಿರುವ ಭೀಕರ ಹಠಾತ್‌ ಪ್ರವಾಹ ದುರಂತದಲ್ಲಿ ಸಾವಿನ ಸಂಖ್ಯೆ 353ಕ್ಕೆ ಏರಿಕೆಯಾಗಿದ್ದು, 1,300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಬದುಕುಳಿದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ಮುಂದುವರಿದಿವೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಭೋಟೆಕೋಶಿ (Bhotekoshi) ನದಿಯಲ್ಲಿ ಏಕಾಏಕಿ ಉಂಟಾದ ಭೀಕರ ಪ್ರವಾಹವು ನೇಪಾಳದ ಮೂರು … Continued

ನೇಪಾಳ ಪ್ರವಾಹ ದುರಂತ: ಕರ್ನಾಟಕದ 8 ಮಂದಿ ಸೇರಿ ದಕ್ಷಿಣ ಭಾರತದ 168 ಜನರು ನಾಪತ್ತೆ

ನವದೆಹಲಿ: ಕೈಲಾಸ ಮಾನಸರೋವರ ಯಾತ್ರೆ ಸೇರಿದಂತೆ ವಿವಿಧ ಕಾರಣಕ್ಕೆ ನೇಪಾಳಕ್ಕೆ ತೆರಳಿದ್ದ ದಕ್ಷಿಣ ಭಾರತದ ಸುಮಾರು 168ಕ್ಕೂ ಹೆಚ್ಚು ಯಾತ್ರಿಕರು ಹಾಗೂ ಪ್ರವಾಸಿಗರು ಹಿಮ-ಬಂಡೆಗಳ ಕುಸಿತದಿಂದ ಉಂಟಾದ ಹಠಾತ್‌ ಭೀಕರ ಪ್ರವಾಹದ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಸಿಲುಕಿಕೊಂಡಿದ್ದು, ಕೆಲವರು ನಾಪತ್ತೆಯಾಗಿದ್ದಾರೆ ಹಾಗೂ ಇನ್ನೂ ಹಲವರ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ನೇಪಾಳದ ರಸುವಾ … Continued

ನೇಪಾಳ ಪ್ರವಾಹ ದುರಂತ: ಇಶಾ ಫೌಂಡೇಶನ್‌ನ 77 ಯಾತ್ರಿಕರು ನಾಪತ್ತೆ ಶಂಕೆ, ರಕ್ಷಣಾ ಕಾರ್ಯಕ್ಕೆ ಸದ್ಗುರು ಸಜ್ಜು

ನವದೆಹಲಿ/ಕಠ್ಮಂಡು: ನೇಪಾಳದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದಲ್ಲಿ (ಫ್ಲ್ಯಾಶ್ ಫ್ಲಡ್) ಸದ್ಗುರು ಅವರ ಇಶಾ ಫೌಂಡೇಶನ್‌ಗೆ ಸೇರಿದ ಕನಿಷ್ಠ 77 ಯಾತ್ರಿಕರು ನಾಪತ್ತೆಯಾಗಿದ್ದಾರೆ ಎಂಬ ಶಂಕೆ ಇದೆ. ಕೈಲಾಸ-ಮಾನಸಸರೋವರ ಯಾತ್ರೆ ಮುಗಿಸಿ ಟಿಬೆಟ್‌ನಿಂದ ಹಿಂದಿರುಗುತ್ತಿದ್ದ ವೇಳೆ ಅವರು ವಲಸೆ (ಇಮಿಗ್ರೇಶನ್) ಕಚೇರಿಯಲ್ಲಿ ಇದ್ದಾಗ ಈ ದುರಂತ ಸಂಭವಿಸಿದೆ ಎಂದು ಸದ್ಗುರು ಸಾಮಾಜಿಕ ಜಾಲತಾಣದಲ್ಲಿ … Continued