‘ಯಾರೂ ಮೋದಿಗೆ ಮತ ಹಾಕಬೇಡಿ’ ಎಂದು ತರಗತಿಯೊಳಗೆ ಹೇಳುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನ ಬಂಧನ

ಮುಜಾಫರಪುರ : ತನ್ನ ತರಗತಿಯ ಮಕ್ಕಳಿಗೆ “ಯಾರೂ ಮೋದಿಗೆ ಮತ ಹಾಕಬೇಡಿ” ಎಂದು ಹೇಳುತ್ತಿದ್ದ ಆರೋಪದ ಮೇಲೆ ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಮುಜಾಫರಪುರ ಎಸ್‌ಎಸ್‌ಪಿ ರಾಕೇಶಕುಮಾರ ಪ್ರಕಾರ, ಜಿಲ್ಲಾ ಶಿಕ್ಷಣಾಧಿಕಾರಿ ಎಫ್‌ಐಆರ್ ದಾಖಲಿಸಿದ ನಂತರ, ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕುರ್ಹಾನಿ ಬ್ಲಾಕ್‌ನ ಅಮ್ರಾಖ್‌ನಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯ ಹಲವಾರು ವಿದ್ಯಾರ್ಥಿಗಳ ಪೋಷಕರು ಹಾಗೂ ಕುಟುಂಬ ಸದಸ್ಯರು ಶಿಕ್ಷಕ ಹರೇಂದ್ರ ರಜಾಕ್ ಎಂಬವರ ನಡವಳಿಕೆಯನ್ನು ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಡಿಇಒ ಅಜಯಕುಮಾರ ಸಿಂಗ್ ಹೇಳಿದ್ದಾರೆ.

“ಉಚಿತ ಪಡಿತರ ಯೋಜನೆಯಡಿ ಮಾನವ ಬಳಕೆಗೆ ಯೋಗ್ಯವಲ್ಲದ ಆಹಾರ ಧಾನ್ಯಗಳನ್ನು ವಿತರಿಸುವುದರಿಂದ ಯಾರೂ ಮೋದಿಗೆ ಮತ ಹಾಕಬೇಡಿ ಎಂದು ಈ ಶಿಕ್ಷಕ ಮಕ್ಕಳಿಗೆ ಹೇಳುತ್ತಿದ್ದ ಎಂದು ಪೋಷಕರು ಲಿಖಿತ ದೂರು ಸಲ್ಲಿಸಿದ್ದಾರೆ” ಎಂದು ಡಿಇಒ ಹೇಳಿದ್ದಾರೆ.
“ತರಗತಿಯ ಹಲವಾರು ಹುಡುಗರು ಮತ್ತು ಹುಡುಗಿಯರು ತರಗತಿಯೊಳಗೆ ಶಿಕ್ಷಕ ಅಂತಹ ವಿಷಯಗಳನ್ನು ಹೇಳುತ್ತಿದ್ದಾರೆಂದು ದೃಢಪಡಿಸಿದರು. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ, ಚುನಾವಣಾ ನೀತಿ ಸಂಹಿತೆ ಪ್ರಕಾರ ಯಾವುದೇ ಸರ್ಕಾರಿ ಅಧಿಕಾರಿ ಯಾವುದೇ ರಾಜಕೀಯದ ಪಕ್ಷದ ಪರ ಅಥವಾ ವಿರುದ್ಧ ಜನರಿಗೆ ಪ್ರೇರೇಪಣೆ ನೀಡಬಾರದು. ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮಕ್ಕಾಗಿ ಶಿಕ್ಷಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement