ಭಾರತದ ಜನಪ್ರಿಯ ಗಾಯಕಿ ಆಶಾ ಭೋಂಸ್ಲೆ ಇನ್ನಿಲ್ಲ : ಎಂಟು ದಶಕಗಳ ಹಾಡಿನ ಪಯಣ ಅಂತ್ಯ

ನವದೆಹಲಿ: ಭಾರತೀಯ ಚಿತ್ರರಂಗದ ದಂತಕಥೆ, ಬಹುಮುಖ ಪ್ರತಿಭೆಯ ಗಾಯಕಿ ಆಶಾ ಭೋಂಸ್ಲೆ (92) ಅವರು ಅಂಗಾಂಗ ವೈಫಲ್ಯದಿಂದಾಗಿ ಭಾನುವಾರ (ಏಪ್ರಿಲ್ 12) ನಿಧನರಾದರು. ಈ ವಿಷಯವನ್ನು ಅವರ ಕುಟುಂಬ ಸದಸ್ಯರು ಮತ್ತು ವೈದ್ಯರು ಖಚಿತಪಡಿಸಿದ್ದಾರೆ. ಆಶಾ ಅವರ ಪುತ್ರ ಆನಂದ ಭೋಂಸ್ಲೆ ಈ ಬಗ್ಗೆ ಮಾಹಿತಿ ನೀಡಿದ್ದು, “ನನ್ನ ತಾಯಿ ಇಂದು ನಮ್ಮನ್ನು ಅಗಲಿದ್ದಾರೆ. ಸಾರ್ವಜನಿಕರು … Continued

ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ ; ಆಸ್ಪತ್ರೆಗೆ ದಾಖಲು

ಮುಂಬೈ : ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) ಅವರಿಗೆ ಶನಿವಾರ (ಏಪ್ರಿಲ್ 11) ಹೃದಯಾಘಾತವಾಗಿದ್ದು, ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಸದ್ಯ ಅವರು ಆಸ್ಪತ್ರೆಯ ತುರ್ತು ವೈದ್ಯಕೀಯ ಸೇವೆಗಳ (EMS) ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಅವರ ಕುಟುಂಬ ಸದಸ್ಯರಿಂದಾಗಲಿ ಅಥವಾ ಆಸ್ಪತ್ರೆಯ … Continued

ತಂದೆ ಜೊತೆ ಜಗಳ; 4 ವರ್ಷದ ಬಾಲಕನ ಕಾಲು ಹಿಡಿದೆತ್ತಿ ನೆಲಕ್ಕೆ ಬಡಿದು, ಕಬ್ಬಿಣದ ರಾಡ್‌ಗೆ ಆತನ ತಲೆ ಜಜ್ಜಿದ ಕಿರಾತಕ…!

ಮುಂಬೈ: ಮುಂಬೈನ ವಸೈನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳದ ನಂತರ ಸೇಡಿಗಾಗಿ ಅಟೋ ರಿಕ್ಷಾ ಚಾಲಕನೊಬ್ಬ ತಾನು ಜಗಳವಾಡಿದ ವ್ಯಕ್ತಿಯ ನಾಲ್ಕು ವರ್ಷದ ಪುಟ್ಟ ಮಗನ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಮಗುವನ್ನು ಕಾಲು ಹಿಡಿದು ಎತ್ತಿ ನೆಲಕ್ಕೆ ಅಪ್ಪಳಿಸಿ, ಕಬ್ಬಿಣದ ರಾಡ್‌ಗೆ ಆತನ ತಲೆ ಜಜ್ಜಿ ಭೀಕರವಾಗಿ ವರ್ತಿಸಿದ್ದಾನೆ. … Continued

ಖ್ಯಾತ ಉದ್ಯಮಿ, ರೇಮಂಡ್ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ವಿಜಯಪತ್ ಸಿಂಘಾನಿಯಾ ನಿಧನ

ಮುಂಬೈ: ಭಾರತದ ಖ್ಯಾತ ಉದ್ಯಮಿ, ರೇಮಂಡ್ ಗ್ರೂಪ್‌ನ ಮಾಜಿ ಅಧ್ಯಕ್ಷ ಮತ್ತು ಪದ್ಮಭೂಷಣ ಪುರಸ್ಕೃತ ವಿಜಯಪತ್ ಸಿಂಘಾನಿಯಾ ಅವರು ಶನಿವಾರ ಸಂಜೆ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಉದ್ಯಮ, ವಿಮಾನಯಾನ ಮತ್ತು ಜವಳಿ ಉದ್ಯಮಕ್ಕೆ ಅಪಾರ ಕೊಡುಗೆ ನೀಡಿದ್ದ ಅವರು, ದಾರ್ಶನಿಕ ಉದ್ಯಮಿ ಮತ್ತು ಲೋಕೋಪಕಾರಿ ಎಂದು ಗುರುತಿಸಿಕೊಂಡಿದ್ದರು. ಅವರ ಪುತ್ರ ಹಾಗೂ … Continued

ಬೆಂಗಳೂರು ಸೇರಿ ಮೆಟ್ರೋ ನಗರಗಳಲ್ಲಿ ಹೋಟೆಲ್ ಉದ್ಯಮಕ್ಕೆ ಎಲ್‌ಪಿಜಿ ಅಭಾವ

ನವದೆಹಲಿ/ ಬೆಂಗಳೂರು : ಪಶ್ಚಿಮ ಏಷ್ಯಾದಲ್ಲಿ (Middle East) ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ವಾಣಿಜ್ಯ ಅಡುಗೆ ಅನಿಲ (Commercial LPG) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬೆಂಗಳೂರು, ಚೆನ್ನೈ ಮತ್ತು ಮುಂಬೈ ನಗರಗಳ ಹೋಟೆಲ್ ಹಾಗೂ ರೆಸ್ಟೋರೆಂಟ್ ಉದ್ಯಮಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಪರಿಸ್ಥಿತಿಯನ್ನು ನಿಭಾಯಿಸಲು ತೈಲ ಸಂಸ್ಕರಣಾಗಾರಗಳಿಗೆ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. … Continued

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಜುನ ತೆಂಡೂಲ್ಕರ್

ಮುಂಬೈ: ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ ತೆಂಡೂಲ್ಕರ್ ಅವರು ಇಂದು (ಮಾರ್ಚ್ 5) ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹವಾದರು. ವಧು ಸಾನಿಯಾ ಚಂದೋಕ್ ಅವರೊಂದಿಗೆ ನಡೆದ ಈ ವಿವಾಹ ಮಹೋತ್ಸವವು ಕ್ರೀಡೆ, ಉದ್ಯಮ ಮತ್ತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ತಾರಾ ಮೆರುಗು ಪಡೆಯಿತು. ದಕ್ಷಿಣ ಮುಂಬೈನ ಖಾಸಗಿ ಸಭಾಂಗಣದಲ್ಲಿ ನಡೆದ ಈ … Continued

ಮುಂಬೈ ಮೆರಿನ್ ಡ್ರೈವ್‌ನಲ್ಲಿ ಎಲ್ಲರ ಮಧ್ಯೆ ಜಾಗಿಂಗ್ ಮಾಡಿದ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್-ವೀಡಿಯೊ ವೈರಲ್‌

ಮುಂಬೈ: ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ‘ಎಐ ಇಂಪ್ಯಾಕ್ಟ್ ಸಮ್ಮಿಟ್’ನಲ್ಲಿ (AI Impact Summit) ಭಾಗವಹಿಸಲು ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮಂಗಳವಾರ ಮುಂಬೈನಲ್ಲಿ ಬಿಡುವಿಲ್ಲದ ಕಾರ್ಯಕ್ರಮದ ನಡುವೆಯೂ ಜನರ ಗಮನ ಸೆಳೆದರು. ಮಂಗಳವಾರ ಬೆಳಿಗ್ಗೆ ಮುಂಬೈಗೆ ಬಂದಿಳಿದ ಮ್ಯಾಕ್ರನ್ ಅವರು, ಬೆಳಿಗ್ಗೆ 11 ಗಂಟೆಯ ಸುಮಾರಿಗೆ ನಗರದ ಐಕಾನಿಕ್ ‘ಮೆರಿನ್ ಡ್ರೈವ್’ ಮತ್ತು … Continued

ವೀಡಿಯೊ…| ರೈಲ್ವೆ ಹಳಿಯ ಮೇಲೆ ಮಲಗಿದ್ದ ಕುಡುಕ ; ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಮುಂಬೈ: ಇಲ್ಲಿನ ಜನನಿಬಿಡ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ಭೀಕರ ರೈಲು ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕುಡಿದ ಅಮಲಿನಲ್ಲಿ ಯುವಕನೊಬ್ಬ ಹಳಿಯ ಮೇಲೆ ಮಲಗಿದ್ದರಿಂದ ಲೋಕಲ್ ರೈಲನ್ನು ತುರ್ತಾಗಿ ನಿಲ್ಲಿಸಬೇಕಾಯಿತು. ಸೋಮವಾರ ಮಧ್ಯಾಹ್ನ ಸುಮಾರು 3:20ರ ವೇಳೆಗೆ, ಪ್ಲಾಟ್‌ಫಾರ್ಮ್ ಸಂಖ್ಯೆ 1ಕ್ಕೆ ಲೋಕಲ್ ರೈಲು (ಸಂಖ್ಯೆ 1169, … Continued

ವೀಡಿಯೊ..| ಮುಂಬೈನಲ್ಲಿ ಭಾರತದ ಮೊದಲ ‘ಸಂಗೀತ ರಸ್ತೆ’ ಉದ್ಘಾಟನೆ ; ರಸ್ತೆಯಲ್ಲಿ ವಾಹನ ಸಂಚರಿಸಿದ್ರೆ ತಾನಾಗೇ ಸಂಗೀತ ನುಡಿಸುತ್ತದೆ…

ಮುಂಬೈ: ಮುಂಬೈನ ಕರಾವಳಿ ರಸ್ತೆ (ಕೋಸ್ಟಲ್ ರೋಡ್), ಅಂದರೆ ಅಧಿಕೃತವಾಗಿ ‘ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ ಮಾರ್ಗ’ದಲ್ಲಿ ಸಾಗುವ ವಾಹನ ಸವಾರರಿಗೆ ಈಗ ಒಂದು ಅಪೂರ್ವ ಅನುಭವ ಕಾಯುತ್ತಿದೆ. ವಾಹನವು ಈ ರಸ್ತೆಯ ಮೇಲೆ ಸಾಗುತ್ತಿದ್ದಂತೆ, ರೇಡಿಯೋ ಅಥವಾ ಸ್ಟೀರಿಯೋ ಆನ್ ಮಾಡದಿದ್ದರೂ ಆಸ್ಕರ್ ಪ್ರಶಸ್ತಿ ವಿಜೇತ ‘ಜೈ ಹೋ’ ಹಾಡಿನ ಸುನಾದವು ಕಾರಿನೊಳಗೆ ಕೇಳಿಬರುತ್ತದೆ. … Continued

ಮುಂಬೈ ಮೇಯರ್ ಆಗಿ ರಿತು ತಾವ್ಡೆ ಅವಿರೋಧವಾಗಿ ಆಯ್ಕೆ

ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹನ್‌ ಮುಂಬೈ ಮಹಾನಗರ ಪಾಲಿಕೆ (BMC)ಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಆಡಳಿತಾಧಿಕಾರಿಗಳ ಆಡಳಿತಕ್ಕೆ ತೆರೆ ಬಿದ್ದಿದೆ. ಬಿಜೆಪಿ ಪಾಲಿಕೆ ಸದಸ್ಯರಾದ ರಿತು ತಾವ್ಡೆ ಅವರು ಮುಂಬೈನ ನೂತನ ಮೇಯರ್ ಆಗಿ ಮತ್ತು ಶಿವಸೇನೆಯ (ಶಿಂದೆ ಬಣ) ಸಂಜಯ ಘಾಡಿ ಅವರು ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. … Continued