ಮುಂಬೈ: 1,400 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ, ಕಿಂಗ್‌ಪಿನ್ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ

ಮುಂಬೈ: ಇತ್ತೀಚಿನ ದಿನಗಳಲ್ಲಿ ಮುಂಬೈನ ಅತಿದೊಡ್ಡ ಡ್ರಗ್ ವಶಕ್ಕೆ ಪಡೆದ ಪ್ರಕರಣದಲ್ಲಿ, ಪಾಲ್ಘರ್ ಜಿಲ್ಲೆಯ ನಲಸೋಪಾರಾದಲ್ಲಿ ಔಷಧ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ ನಗರ ಪೊಲೀಸರು 1,400 ಕೋಟಿ ರೂಪಾಯಿ ಮೌಲ್ಯದ 700 ಕಿಲೋಗ್ರಾಂಗಳಷ್ಟು ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಸಾವಯವ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ ಎಂದು … Continued

ಭಾರತದಲ್ಲಿ ಮುಂಬೈ, ದೆಹಲಿ ಅತ್ಯಂತ ದುಬಾರಿ ಮಹಾ ನಗರಗಳು, ಕೋಲ್ಕತ್ತಾ ಕಡಿಮೆ ವೆಚ್ಚದ ಮಹಾ ನಗರ: ಮರ್ಸರ್ ಅಧ್ಯಯನ

ನವದೆಹಲಿ: ವಲಸಿಗರಿಗೆ ಮುಂಬೈ ಮತ್ತು ದೆಹಲಿ ಮಹಾನಗರಗಳು ಏಷ್ಯಾದ ಟಾಪ್ 40 ಅತ್ಯಂತ ದುಬಾರಿ ನಗರಗಳಲ್ಲಿ ಸ್ಥಾನ ಪಡೆದಿವೆ ಮತ್ತು ಕೋಲ್ಕತ್ತಾ ಕಡಿಮೆ ವೆಚ್ಚದ ನಗರವಾಗಿದೆ ಎಂದು ವರದಿಯೊಂದು ಹೇಳುತ್ತದೆ. ಮರ್ಸರ್‌ನ 2022 ರ ಜೀವನ ವೆಚ್ಚ ಸಮೀಕ್ಷೆಯ ಪ್ರಕಾರ, ಮುಂಬೈ (127) ಶ್ರೇಯಾಂಕದಲ್ಲಿ ಜೀವನ ವೆಚ್ಚಗಳು ಮತ್ತು ವಸತಿ ವೆಚ್ಚಗಳೆರಡರಲ್ಲೂ ಭಾರತದ ಅತ್ಯಂತ ದುಬಾರಿ … Continued

ಪ್ರವಾದಿ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ದೆಹಲಿ, ಮುಂಬೈ, ಯುಪಿ, ಗುಜರಾತ್‌ನಲ್ಲಿ ಆತ್ಮಹತ್ಯಾ ದಾಳಿಯ ಬೆದರಿಕೆ ಹಾಕಿದ ಅಲ್-ಖೈದಾ

ನವದೆಹಲಿ: ಜೂನ್ 6 ರಂದು ಕಳುಹಿಸಿದ ಬೆದರಿಕೆ ಪತ್ರದಲ್ಲಿ, ಭಯೋತ್ಪಾದಕ ಗುಂಪು ಅಲ್-ಖೈದಾ ಪ್ರವಾದಿಯ ಗೌರವಕ್ಕಾಗಿ ಹೋರಾಡಲು ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಆತ್ಮಾಹುತಿ ದಾಳಿಗಳನ್ನು ನಡೆಸುವುದಾಗಿ ಬೆದರಿಕೆ ಹಾಕಿದೆ. ಕೆಲವು ಬಿಜೆಪಿ ನಾಯಕರು ಪ್ರವಾದಿ ಮುಹಮ್ಮದ್ ಕುರಿತು ಹೇಳಿಕೆ ನೀಡಿದ ನಂತರ ಭುಗಿಲೆದ್ದ ವಿವಾದದ ಹಿನ್ನೆಲೆಯಲ್ಲಿ ಇದು ಬೆಳಕಿಗೆ ಬಂದಿದೆ. ನಮ್ಮ … Continued

ಸ್ನಾತಕೋತ್ತರ ಪದವಿಗಳಿಗೆ ಜಿಯೋ ಇನ್‌ಸ್ಟಿಟ್ಯೂಟ್‌ನಿಂದ ಪ್ರವೇಶಾತಿ ಆರಂಭ

ಮುಂಬೈ: ಕೃತಕ ಬುದ್ಧಿಮತ್ತೆ ಮತ್ತು ಮಾರುಕಟ್ಟೆ ಸಂವಹನ ಈ ಹಿಂದೆಂದಿಗಿಂತಲೂ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿವೆ. ಡಿಜಿಟಲ್ ಜಗತ್ತಿನಲ್ಲಿ ದೂರ ಸಂವಹನದಿಂದ ಹಿಡಿದು ಸಾಮಾಜಿಕ ಮಾಧ್ಯಮ, ಇಮೇಲ್, ಮೆಸೇಜಿಂಗ್, ಇಂಟರ್ನೆಟ್ ಸರ್ಚ್, ಸ್ಮಾರ್ಟ್ ಗ್ಯಾಜೆಟ್‌ಗಳು, ಬ್ಯಾಂಕಿಂಗ್, ಮನರಂಜನೆಯಿಂದ ಶಾಪಿಂಗ್‌ವರೆಗೆ ಇವು ಬಳಕೆಯಾಗುತ್ತಿವೆ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೇಟಾ ವಿಜ್ಞಾನ ಹಾಗೂ ಡಿಜಿಟಲ್ ಮಾಧ್ಯಮ … Continued

ಮುಂಬೈ: 60 ಅಂತಸ್ತಿನ ಅಪಾರ್ಟ್‌ಮೆಂಟಿನಲ್ಲಿ ಬೆಂಕಿ, ತಪ್ಪಿಸಿಕೊಳ್ಳುವ ಯತ್ನದಲ್ಲಿ 19ನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು, ವಿಡಿಯೊದಲ್ಲಿ ಸೆರೆ

ಮುಂಬೈ: ಮುಂಬೈನ ಲಾಲ್‌ಬಾಗ್‌ನಲ್ಲಿರುವ ಬಹುಮಹಡಿ ವಸತಿ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಓರ್ವ ಮೃತಪಟ್ಟಿದ್ದಾನೆ. ಮುಂಬೈ ಅಗ್ನಿಶಾಮಕ ದಳವು ಶೋಧ ಮತ್ತು ಬೆಮಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದೆ ಮತ್ತು ಬೆಂಕಿಯ ಕಾರಣ ಕಂಡುಹಿಡಿಯಲು ಪ್ರಯತ್ನಿಸುತ್ತಿದೆ. ವರದಿಗಳ ಪ್ರಕಾರ,11.50 ಕ್ಕೆ ಮಹಾದೇವ್ ಪಲವ್ ಮಾರ್ಗ, ಅವಿ ರಸ್ತೆಯಲ್ಲಿರುವ ಅವಿಘ್ನ ಪಾರ್ಕ್ 60 ಅಂತಸ್ತಿನ ವಸತಿ … Continued

ತಾಯಿಯನ್ನೇ ಕೊಲೆಗೈದ 15 ವರ್ಷದ ಮಗಳು

ಮುಂಬೈ: 15 ವರ್ಷದ ಬಾಲಕಿಯೋರ್ವಳು ಕರಾಟೆ ಬೆಲ್ಟ್ ನಿಂದ ಹೆತ್ತ ತಾಯಿಯ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಥಾಣೆಯಲ್ಲಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ತಾಯಿಗೆ ತನ್ನ ಮಗಳು ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡಲಿ ಎಂದು ಆಸೆ. ಆದರೆ ಅದು ಮಗಳಿಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಅಮ್ಮ-ಮಗಳ ನಡುವೆ ಜಗಳ ಆಗುತ್ತಿತ್ತು. ಇದೇ … Continued

ಮುಂಬೈನಲ್ಲಿ ಕೊರೊನಾ ವೈರಸ್‌ ಹರಡುವಿಕೆ ದರ ಆಘಾತಕಾರಿ ಹೆಚ್ಚಳ..ಫೆಬ್ರವರಿಗೆ ಹೋಲಿಸಿದರೆ ಶೇ. 475 ಏರಿಕೆ…!!

ಮುಂಬೈ: ಮುಂಬೈ ನಗರದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ 88,710 ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ, ಇದು ಹಿಂದಿನ ತಿಂಗಳ ಸೋಂಕಿನ ಪ್ರಮಾಣಕ್ಕಿಂತ ಶೇಕಡಾ 475 ರಷ್ಟು ಹೆಚ್ಚಾಗಿದೆ ಎಂದು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಂಕಿ ಅಂಶಗಳು ತಿಳಿಸಿವೆ. ನಗರದಲ್ಲಿ ಈ ವರ್ಷದ ಜನವರಿಯಲ್ಲಿ 16,328 ಪ್ರಕರಣಗಳು ಹಾಗೂ ಫೆಬ್ರವರಿಯಲ್ಲಿ 18,359 ಕೊವಿಡ್‌-19 ಪ್ರಕರಣಗಳು ವರದಿಯಾಗಿತ್ತು. … Continued

ಮುಂಬೈ: ಕೊವಿಡ್‌ ಆಸ್ಪತ್ರೆಯಲ್ಲಿ ಬೆಂಕಿ ಅವಘಡ, ಏರಿದ ಸಾವಿನ ಸಂಖ್ಯೆ, 9 ಜನರ ಮರಣ

ಮುಂಬೈ: ಮುಂಬಯಿಯ ಭಂಡಪ್ ಪ್ರದೇಶದ ಖಾಸಗಿ ಕೊವಿಡ್‌ -19 ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಅನಾಹುತದಲ್ಲಿ  ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 9 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪ್ರಶಾಂತ್ ಕದಮ್ ಅವರ ಪ್ರಕಾರ, ಸುಮಾರು 22 ಅಗ್ನಿಶಾಮಕ ದಳಗಳು ಆಸ್ಪತ್ರೆಗೆ ತಲುಪಿ ಬೆಂಕಿ ನಂದಿಸುತ್ತಿವೆ. ಮಾಲ್‌ನ ಮೂರನೇ ಮಹಡಿಯಲ್ಲಿರುವ ಆಸ್ಪತ್ರೆಗೆ … Continued

ಕಲಬುರಗಿ-ಮಂಬೈ ವಿಮಾನ ಹಾರಾಟ ಆರಂಭ

ಕಲಬುರಗಿ:ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಕಲ್ಯಾಣ ‌ಕರ್ನಾಟಕದ ಪ್ರಮುಖ ‌ನಗರ ಕಲಬುರಗಿ ‌ಮಧ್ಯೆ ಅಲಯನ್ಸ್ ಏರ್ ಸಂಸ್ಥೆಯ ನೇರ ವಿಮಾನ ‌ಸಂಚಾರ ಗುರುವಾರದಿಂದ ಆರಂಭವಾಯಿತು. ಮುಂಬೈನಿಂದ ಹೊರಟ ಮೊದಲ ವಿಮಾನ ಬೆಳಿಗ್ಗೆ 9.07ಕ್ಕೆ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಎಂಟು ಜನ ಪ್ರಯಾಣಿಕರು ಬಂದರು. 9.40ಕ್ಕೆ ಇಲ್ಲಿಂದ ಹೊರಟ ವಿಮಾನದಲ್ಲಿ 22 ಪ್ರಯಾಣಿಕರು ತೆರಳಿದರು. ಮಹಾರಾಷ್ಟ್ರದಲ್ಲಿ … Continued

ಕಲಬುರಗಿ-ಮುಂಬೈ ವಿಮಾನ ಯಾನ ಮಾರ್ಚ್ 25ರಿಂದ ಆರಂಭ

ಕಲಬುರಗಿ: ಏರ್ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್ ಏರ್ ಇದೇ ಮಾರ್ಚ್ 25ರಿಂದ ಕಲಬುರಗಿ ಹಾಗೂ ಮುಂಬೈ ಮಧ್ಯೆ ವಾರದ ಎಲ್ಲ ದಿನವೂ ನೇರ ವಿಮಾನ ಹಾರಾಟ ಆರಂಭಿಸಲಿದೆ. ಕಲ್ಯಾಣ ಕರ್ನಾಟಕವನ್ನು ದೇಶದ ವಾಣಿಜ್ಯ ರಾಜಧಾನಿ ಮುಂಬೈಯೊಂದಿಗೆ ಸಂಪರ್ಕಿಸಬೇಕೆನ್ನುವ ಈ ಭಾಗದ ಉದ್ಯಮಿಗಳ ಬೇಡಿಕೆ ಈಡೇರಿದಂತಾಗಿದೆ. ಮಾ.25ರಿಂದ ನಿತ್ಯ ಬೆಳಿಗ್ಗೆ 7.20ಕ್ಕೆ ಮುಂಬೈನಿಂದ ಹೊರಡುವ 70 … Continued