ಸ್ನಾತಕೋತ್ತರ ಪದವಿಗಳಿಗೆ ಜಿಯೋ ಇನ್‌ಸ್ಟಿಟ್ಯೂಟ್‌ನಿಂದ ಪ್ರವೇಶಾತಿ ಆರಂಭ

ಮುಂಬೈ: ಕೃತಕ ಬುದ್ಧಿಮತ್ತೆ ಮತ್ತು ಮಾರುಕಟ್ಟೆ ಸಂವಹನ ಈ ಹಿಂದೆಂದಿಗಿಂತಲೂ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿವೆ. ಡಿಜಿಟಲ್ ಜಗತ್ತಿನಲ್ಲಿ ದೂರ ಸಂವಹನದಿಂದ ಹಿಡಿದು ಸಾಮಾಜಿಕ ಮಾಧ್ಯಮ, ಇಮೇಲ್, ಮೆಸೇಜಿಂಗ್, ಇಂಟರ್ನೆಟ್ ಸರ್ಚ್, ಸ್ಮಾರ್ಟ್ ಗ್ಯಾಜೆಟ್‌ಗಳು, ಬ್ಯಾಂಕಿಂಗ್, ಮನರಂಜನೆಯಿಂದ ಶಾಪಿಂಗ್‌ವರೆಗೆ ಇವು ಬಳಕೆಯಾಗುತ್ತಿವೆ.
ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೇಟಾ ವಿಜ್ಞಾನ ಹಾಗೂ ಡಿಜಿಟಲ್ ಮಾಧ್ಯಮ ಮತ್ತು ಮಾರುಕಟ್ಟೆ ಸಂವಹನಗಳಲ್ಲಿ ಒಂದು ವರ್ಷದ ಪೂರ್ಣಾವಧಿ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ (ಪಿಜಿಪಿ) ಜಿಯೋ ಸಂಸ್ಥೆ ಅರ್ಜಿಗಳನ್ನು ಆಹ್ವಾನಿಸುವುದನ್ನು ಆರಂಭಿಸಿದೆ.

ಕೃತಕ ಬುದ್ಧಿಮತ್ತೆ ಮತ್ತು ಡೇಟಾ ವಿಜ್ಞಾನ (ಎಐ & ಡಿಎಸ್) ವಿಷಯಗಳಲ್ಲಿನ ಪಿಜಿಪಿ, ಸೈದ್ಧಾಂತಿಕ ಸಾಮರ್ಥ್ಯಗಳನ್ನು ಹಾಗೂ ಉದ್ಯಮಶೀಲತೆ ಮತ್ತು ಸಮಾಜಕ್ಕೆ ಪ್ರಾಯೋಗಿಕ ಪರಿಹಾರಗಳನ್ನು ಹೇಗೆ ನೀಡುವುದು ಎಂದು ತಿಳಿವಳಿಕೆಗಳನ್ನು ನೀಡುವ ಗುರಿ ಹೊಂದಿದೆ. ಡಿಜಿಟಲ್ ಮಾಧ್ಯಮ ಮತ್ತು ಮಾರುಕಟ್ಟೆ ಸಂವಹನ (ಡಿಎಂ & ಎಂಸಿ) ವಿಷಯದಲ್ಲಿನ ಪಿಜಿಪಿ, ವಿನೂತನವಾಗಿ ತೊಡಗಿಸಿಕೊಳ್ಳುವ, ಸೇವೆಗಳು ಮತ್ತು ಸಂವಹನದ ಮೂಲಕ ಡಿಜಿಟಲ್ ಯುಗದಲ್ಲಿ ಗ್ರಾಹಕ ಅನುಭವವನ್ನು ಹೇಗೆ ನಿಭಾಯಿಸುವುದು ಎಂಬ ಜ್ಞಾನವನ್ನು ಸಂಪಾದಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

ಅಧಿಕೃತ ವೆಬ್‌ಸೈಟ್ www.jioinstitute.edu.in ನಲ್ಲಿ ‘ಅಪ್ಲೈ ನೌ’ ಲಿಂಕ್ ಮೂಲಕ ಅಗತ್ಯ ದಾಖಲೆಗಳ ಜತೆಗೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬೇಕು. ಆನ್‌ಲೈನ್ ಜಿಯೋ ಸಂಸ್ಥೆ ಪ್ರವೇಶ ಪರೀಕ್ಷೆಯ (ಜೆಇಟಿ) ಅರ್ಜಿ ಶುಲ್ಕವಾಗಿ 2,500 ರೂ.ಗಳನ್ನು ಪಾವತಿಸಬೇಕು.
ವಿಶ್ವ ದರ್ಜೆಯ ಬೋಧನಾ ವಿಭಾಗ, ಅಂತಾರಾಷ್ಟ್ರೀಯ ಸಹಭಾಗಿತ್ವ, ಕಠಿಣ ಶಿಕ್ಷಣ ಶಾಸ್ತ್ರ ಮತ್ತು ಉದಾರ ವಿದ್ಯಾರ್ಥಿವೇತನಗಳ ಸಹಾಯದೊಂದಿಗೆ ಯುವಜನರನ್ನು ಪರಿವರ್ತಿಸುವ ಮಿಷನ್ ಅನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಜಾಗತಿಕ ಪರಿಣಾಮದೊಂದಿಗೆ ಭಾರತದ ಮೌಲ್ಯಗಳನ್ನು ಬಿತ್ತಲು ನಾವು ಆಶಿಸುತ್ತೇವೆ. ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಕೈಗಾರಿಕಾ ಪ್ರಸ್ತುತತೆಯನ್ನು ಸಂಯೋಜಿಸುವ ಉದ್ಘಾಟನಾ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ಆರಂಭಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಜಿಯೋ ಇನ್‌ಸ್ಟಿಟ್ಯೂಟ್‌ನ ಉಪ ಕುಲಪತಿ ಡಾ ದೀಪಕ್ ಜೈನ್ ಹೇಳಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement