ಮುಂಬೈನಲ್ಲಿ ಕೊರೊನಾ ವೈರಸ್‌ ಹರಡುವಿಕೆ ದರ ಆಘಾತಕಾರಿ ಹೆಚ್ಚಳ..ಫೆಬ್ರವರಿಗೆ ಹೋಲಿಸಿದರೆ ಶೇ. 475 ಏರಿಕೆ…!!

ಮುಂಬೈ: ಮುಂಬೈ ನಗರದಲ್ಲಿ ಈ ವರ್ಷದ ಮಾರ್ಚ್‌ನಲ್ಲಿ 88,710 ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ, ಇದು ಹಿಂದಿನ ತಿಂಗಳ ಸೋಂಕಿನ ಪ್ರಮಾಣಕ್ಕಿಂತ ಶೇಕಡಾ 475 ರಷ್ಟು ಹೆಚ್ಚಾಗಿದೆ ಎಂದು ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಂಕಿ ಅಂಶಗಳು ತಿಳಿಸಿವೆ.
ನಗರದಲ್ಲಿ ಈ ವರ್ಷದ ಜನವರಿಯಲ್ಲಿ 16,328 ಪ್ರಕರಣಗಳು ಹಾಗೂ ಫೆಬ್ರವರಿಯಲ್ಲಿ 18,359 ಕೊವಿಡ್‌-19 ಪ್ರಕರಣಗಳು ವರದಿಯಾಗಿತ್ತು. ಅಂದರೆ ಹಿಂದಿನ ತಿಂಗಳಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಮುಂಬೈಯಲ್ಲಿ 70,351 ಪ್ರಕರಣಗಳು ಮತ್ತು ಜನವರಿಯಲ್ಲಿನ ಮೊತ್ತಕ್ಕೆ ಹೋಲಿಸಿದರೆ 72,382 ಪ್ರಕರಣಗಳು ಹೆಚ್ಚು ದಾಖಲಾಗಿವೆ.
ಮಾಹಿತಿಯ ಪ್ರಕಾರ, ವೈರಸ್ಸಿಗೆ ಮಾರ್ಚಿನಲ್ಲಿ ದೇಶದ ಆರ್ಥಿಕ ರಾಜಧಾನಿಯಲ್ಲಿ 216 ಜನರು ಮೃಪಟ್ಟಿದ್ದಾರೆ. ಫೆಬ್ರವರಿಯಲ್ಲಿ 119 ರ ಸಾವಿನ ಸಂಖ್ಯೆಗೆ ಹೋಲಿಸಿದರೆ ಇದು ಶೇಕಡಾ 181ರಷ್ಟು ಹೆಚ್ಚಾಗಿದೆ.
ಈ ವರ್ಷದ ಮೊದಲ ತಿಂಗಳಲ್ಲಿ ಒಟ್ಟು 237 ಸಾವುಗಳು ವರದಿಯಾಗಿವೆ.
ಮಾರ್ಚ್ 31 ರಂದು, ಮಹಾನಗರದ ಕೊವಿಡ್‌-19 ಕ್ಯಾಸೆಲೋಡ್ 4,14,714 ಅನ್ನು ಮುಟ್ಟಿದರೆ, ಸಾವಿನ ಸಂಖ್ಯೆ 11,686 ಕ್ಕೆ ತಲುಪಿದೆ.ಮಾರ್ಚ್ 31 ರ ವೇಳೆಗೆ ಕೊವಿಡ್‌-19ರ 51,411 ಸಕ್ರಿಯ ಪ್ರಕರಣಗಳಿವೆ ಎಂದು ಬಿಎಂಸಿ ದತ್ತಾಂಶವು ತೋರಿಸಿದೆ, ಆದರೆ ಫೆಬ್ರವರಿ ಅಂತ್ಯದ ವೇಳೆಗೆ ಈ ಸಂಖ್ಯೆ 9,715 ಆಗಿತ್ತು.
ಕೊವಿಡ್‌ -19 ಪ್ರಕರಣಗಳ ಏರಿಕೆಯೊಂದಿಗೆ, ಮಾರ್ಚ್ ಅಂತ್ಯದ ವೇಳೆಗೆ ಮುಂಬೈನ ಚೇತರಿಕೆಯ ಪ್ರಮಾಣವು ಶೇಕಡಾ 85 ಕ್ಕೆ ಇಳಿದಿದೆ, ಹಿಂದಿನ ತಿಂಗಳ ಅಂತ್ಯದ ವೇಳೆಗೆ ಇದು ಶೇಕಡಾ 93 ರಷ್ಟಿತ್ತು.
ಫೆಬ್ರವರಿ ಅಂತ್ಯದ ವೇಳೆಗೆ ದಾಖಲಾದ ಕೇವಲ 0.28 ಶೇಕಡಾದಿಂದ ನಗರದ ಕೊವಿಡ್‌-19 ಬೆಳವಣಿಗೆಯ ದರವು ಮಾರ್ಚ್ ಅಂತ್ಯದ ವೇಳೆಗೆ 1.37 ಶೇಕಡಕ್ಕೆ ಬಂದುನಿಂತಿದೆ..!ಈ ಅವಧಿಯಲ್ಲಿ 245 ದಿನಗಳಿಂದ ಅದರ ಪ್ರಕರಣ ದ್ವಿಗುಣಗೊಳಿಸುವಿಕೆಯ ಪ್ರಮಾಣವು 49 ದಿನಗಳಿಗೆ ಇಳಿದಿದೆ ಎಂದು ಡೇಟಾ ಬಹಿರಂಗಪಡಿಸಿದೆ.
ಮುಂಬಯಿಯಲ್ಲಿ ದೈನಂದಿನ ಕೊವಿಡ್‌-19 ಪ್ರಕರಣಗಳ ಸಂಖ್ಯೆ ಫೆಬ್ರವರಿ ಮಧ್ಯದಿಂದ ಗಮನಾರ್ಹ ಏರಿಕೆ ಕಂಡಿದೆ, ಆದರೂ ಆ ಸಮಯದಲ್ಲಿ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿಲ್ಲ.ಆದಾಗ್ಯೂ, ಕಳೆದ ವಾರದಿಂದ ಸಾವಿನ ಸಂಖ್ಯೆ ಹೆಚ್ಚಲು ಪ್ರಾರಂಭಿಸಿದೆ. ನಗರದಲ್ಲಿ ಇಲ್ಲಿಯವರೆಗೆ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರು ಸೇರಿದಂತೆ ಜನರಿಗೆ 11.52 ಲಕ್ಷ ಡೋಸ್ ಕೊವಿಡ್-19 ಲಸಿಕೆಗಳನ್ನು ನೀಡಲಾಗಿದೆ.

ಪ್ರಮುಖ ಸುದ್ದಿ :-   ಜನಾಂಗೀಯ ಕಾಮೆಂಟ್‌ ವಿವಾದದ ಬೆನ್ನಲ್ಲೇ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಮ್‌ ಪಿತ್ರೋಡಾ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement