ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್‌ ನಾಯಕ ಶಿವರಾಜ ಪಾಟೀಲ ನಿಧನ

ಮುಂಬೈ : ಮಾಜಿ ಕೇಂದ್ರ ಸಚಿವರು ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಶಿವರಾಜ ಪಾಟೀಲ್ ಚಾಕೂರ್ಕರ್ ಅವರು ಶುಕ್ರವಾರ (ಡಿಸೆಂಬರ್ 12, 2025) ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಐದು ದಶಕಗಳ ರಾಜಕೀಯ ವೃತ್ತಿಜೀವನದಲ್ಲಿ, ಶಿವರಾಜ ಪಾಟೀಲ ಅವರು ಲೋಕಸಭಾ ಸ್ಪೀಕರ್ ಮತ್ತು ಹಲವು ಸಚಿವಾಲಯಗಳು ಸೇರಿದಂತೆ … Continued

ರತನ್ ಟಾಟಾ ಮಲತಾಯಿ ಸಿಮೋನ್ ಟಾಟಾ ನಿಧನ

ಮುಂಬೈ: ಲಕ್ಮೆ (Lakmé) ಮತ್ತು ವೆಸ್ಟ್‌ಸೈಡ್ (Westside) ನಂತಹ ಜನಪ್ರಿಯ ಬ್ರ್ಯಾಂಡ್‌ಗಳನ್ನು ಟಾಟಾ ಸಮೂಹದ ಅಡಿಯಲ್ಲಿ ಜನಪ್ರಿಯಗೊಳಿಸಲು ಸಹಾಯ ಮಾಡಿದ ಸಿಮೋನ್ ಟಾಟಾ ಅವರು ವಯೋಸಹಜ ಅನಾರೋಗ್ಯದ ಕಾರಣ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಅವರು ದಿವಂಗತ ರತನ್ ಟಾಟಾ ಅವರ ಮಲತಾಯಿ ಮತ್ತು ಹಾಲಿ ಟಾಟಾ ಸನ್ಸ್‌ ಅಧ್ಯಕ್ಷ  ನೋಯೆಲ್ ಟಾಟಾ … Continued

ಬಾಲಿವುಡ್ ‘ಹೀ-ಮ್ಯಾನ್’, ಹಿರಿಯ ನಟ ಧರ್ಮೇಂದ್ರ ಇನ್ನಿಲ್ಲ

ಮುಂಬೈ : ಬಾಲಿವುಡ್‌ ಹೀ ಮ್ಯಾನ್‌ ಎಂದೇ ಖ್ಯಾತಿ ಪಡೆದ, ಹಿರಿಯ ನಟ ಧರ್ಮೇಂದ್ರ (Dharmendra) ಸೋಮವಾರ (ನವೆಂಬರ್‌ 24) ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಧರ್ಮೇಂದ್ರ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈಯ ಬ್ರೀಜ್‌ ಕ್ಯಾಂಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡ ಅವರನ್ನು ಡಿಸ್‌ಚಾರ್ಚ್‌ ಮಾಡಲಾಗಿತ್ತು. ಧರ್ಮೇಂದ್ರ ಅವರು ಇಬ್ಬರು ಪತ್ನಿಯರಾದ ಪ್ರಕಾಶ್ ಕೌರ್ … Continued

ಕುಮಟಾ : ಕೆನರಾ ಕಾಲೇಜು ಸೊಸೈಟಿ ಉಪಾಧ್ಯಕ್ಷ ದಿನಕರ ಕಾಮತ ನಿಧನ

ಕುಮಟಾ : ಶಿಕ್ಷಣ ತಜ್ಞ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕೆನರಾ ಕಾಲೇಜು ಸೊಸೈಟಿಯ ಉಪಾಧ್ಯಕ್ಷ ದಿನಕರ ಕಾಮತ (83)ಶನಿವಾರ ರಾತ್ರಿ ಹೃಧಯಾಘಾತದಿಂದ ನಿಧನರಾಗಿದ್ದಾರೆ. ಹೆಗಡೆಯ ಶಾಂತಿಕಾಂಭ ಪ್ರೌಢ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ದಿನಕರ ಕಾಮತ್‌ ಅವರು … Continued

ವೃಕ್ಷಗಳ ಮಹಾತಾಯಿ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ

ಬೆಂಗಳೂರು : ಪದ್ಮಶ್ರೀ ಪುರಸ್ಕೃತ, ವೃಕ್ಷಮಾತೆ ಸಾಲುಮರ ತಿಮ್ಮಕ್ಕ (Saalumarada Thimmakka) ಇಂದು, ಶುಕ್ರವಾರ ವಿಧಿವಶರಾಗಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು. ತಿಮ್ಮಕ್ಕ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ 12ಗಂಟೆಗೆ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದ 114 ವರ್ಷ ವಯಸ್ಸಿನ ಸಾಲು ಮರದ ತಿಮ್ಮಕ್ಕ ಕಳೆದ … Continued

ಹಿಂದಿ ಸಿನೆಮಾದ ಖ್ಯಾತ ಹಾಸ್ಯನಟ ಅಸ್ರಾನಿ ನಿಧನ

ಮುಂಬೈ: ಅಸ್ರಾನಿ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಬಾಲಿವುಡ್‌ ಹಿರಿಯ ನಟ ಗೋವರ್ಧನ್ ಅಸ್ರಾನಿ ಸೋಮವಾರ ಸಂಜೆ (ಅಕ್ಟೋಬರ್‌ 20) ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದಾಗಿ ಐದು ದಿನಗಳ ಕಾಲ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ತಮ್ಮ ಅಭಿಮಾನಿಗಳಿಗೆ ಇನ್​ಸ್ಟಾಗ್ರಾಂನಲ್ಲಿ ದೀಪಾವಳಿಯ (Deepavali) ಶುಭಾಶಯಗಳನ್ನು ಕೋರಿದ್ದರು. ಅದಾದ … Continued

ಬೆಂಗಳೂರು : ಖ್ಯಾತ ಪತ್ರಕರ್ತ ಟಿಜೆಎಸ್ ಜಾರ್ಜ್ ನಿಧನ

ಬೆಂಗಳೂರು : ಪದ್ಮಭೂಷಣ ಪುರಸ್ಕೃತ ಪತ್ರಕರ್ತ ಹಾಗೂ ಲೇಖಕ ಥಯ್ಯಲ್ ಜಾಕೋಬ್ ಸೋನಿ ಜಾರ್ಜ್(ಟಿಜೆಎಸ್‌ ಜಾರ್ಜ್‌) ಅವರು ಶುಕ್ರವಾರ (ಅಕ್ಟೋಬರ್ 3) ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟಿಜೆಎಸ್ ಜಾರ್ಜ್ 1928ರ ಮೇ 7ರಂದು ಕೇರಳದಲ್ಲಿ ಪತ್ತನಂತಿಟ್ಟ ಜಿಲ್ಲೆಯ ತುಂಬಮಣಿ ಎಂಬಲ್ಲಿ ಜನಿಸಿದ್ದರು. … Continued

ಬಾಲ್ಯದಲ್ಲಿ ತಾಯಿ, ಅಣ್ಣ, ಅಕ್ಕ, ತಂಗಿ ಪ್ಲೇಗ್‌ ನಿಂದ ಸಾವು….ತಮ್ಮನ ಶವ ಒಬ್ಬನೇ ಹೊತ್ತೊಯ್ದು ಅಂತ್ಯಕ್ರಿಯೆ ಮಾಡಿದ್ದ ಬಾಲಕ ಭೈರಪ್ಪ

ಖ್ಯಾತ ಕಾದಂಬರಿಕಾರ, ಎಸ್‌.ಎಲ್‌. ಭೈರಪ್ಪ SL Bhyrappa)ಅವರು 94ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಆದರೆ ಭೈರಪ್ಪ ( ಅವರ ಬಾಲ್ಯ ಅತ್ಯಂತ ದುರಂತದಿಂದ ಕೂಡಿತ್ತು. ಅವರು ಬಾಲ್ಯದಲ್ಲಿ ಪ್ಲೇಗ್‌ಗೆ ತುತ್ತಾಗಿದ್ದರು. ಹೇಗೋ ಅದರಿಂದ ಪಾರಾದರು. ಆದರೆ ಅವರ ಕುಟುಂಬದ ಸದಸ್ಯರನ್ನು ಹೆಮ್ಮಾರಿ ಪ್ಲೇಗ್‌ ಬಲಿ ತೆಗೆದುಕೊಂಡಿತ್ತು. ಈ ಬಗ್ಗೆ ಅವರು ತಮ್ಮ ಆತ್ಮಕಥನ ಭಿತ್ತಿಯಲ್ಲಿಯೂ ಬರೆದಿದ್ದಾರೆ. ಅವರ … Continued

ಸಾಹಿತಿ ಎಸ್‌.ಎಲ್‌.ಭೈರಪ್ಪ ನಿಧನ ; ನಾಳೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಬೆಂಗಳೂರು: ಖ್ಯಾತ ಕಾದಂಬರಿಕಾರ, ಎಸ್‌.ಎಲ್‌. ಭೈರಪ್ಪ ಅವರು 94ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ನಾಳೆ, ಗುರುವಾರ (ಸೆಪ್ಟೆಂಬರ್‌ 25) ಬೆಂಗಳೂರು ಮತ್ತು ಮೈಸೂರಿನಲ್ಲಿ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅವರ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನಕ್ಕೆ ನಾಳೆ ಗುರುವಾರ ಬೆಳಿಗ್ಗೆ 8 ಎಲ್ಲ ಅಭಿಮಾನಿಗಳು ರವೀಂದ್ರ ಕಲಾಕ್ಷೇತ್ರಕ್ಕೆ ಬಂದು ಅಂತಿಮ ದರ್ಶನ ಪಡೆಯಬೇಕೆಂದು ಕುಟುಂಬದವರು … Continued

ಕನ್ನಡದ ಖ್ಯಾತ ಕಾದಂಬರಿಕಾರ, ʼಸರಸ್ವತಿ ಸಮ್ಮಾನ್‌ʼ ಪುರಸ್ಕೃತ ಸಾಹಿತಿ ಎಸ್‌ ಎಲ್‌ ಭೈರಪ್ಪ ಇನ್ನಿಲ್ಲ

ಬೆಂಗಳೂರು: ಕನ್ನಡದ ಖ್ಯಾತ ಕಾದಂಬರಿಕಾರ, ಚಿಂತಕ, ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಸ್‌ ಎಲ್‌ ಭೈರಪ್ಪ (SL Bhyrappa) ಇಂದು, ಬುಧವಾರ ಮಧ್ಯಾಹ್ನ 2:30ರ ಸುಮಾರಿಗೆ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಹಾಸನ ಜಿಲ್ಲೆಯ … Continued