ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನ

ಧಾರವಾಡ: ಹಿರಿಯ ಸಾಹಿತಿ ಗುರುಲಿಂಗ ಕಾಪಸೆ (96 ವರ್ಷ) ಮಂಗಳವಾರ ತಡರಾತ್ರಿ ನಗರದ ನಿರ್ಮಲಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾಗಿದ್ದರು. ಗುರುಲಿಂಗ ಕಾಪಸೆ ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 1928ರ ಎಪ್ರಿಲ್ 2ರಂದು ಜನಿಸಿದ ಗುರುಲಿಂಗ ಕಾಪಸೆ ಅವರು ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲೋಣಿ … Continued

ಅಂಕೋಲಾ: ಖ್ಯಾತ ಸಾಹಿತಿ ವಿಷ್ಣು ನಾಯ್ಕ ಇನ್ನಿಲ್ಲ

ಅಂಕೋಲಾ : ಖ್ಯಾತಸಾಹಿತಿ, ಪ್ರಕಾಶಕ, ಪತ್ರಕರ್ತರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ವಿಷ್ಣು ನಾಯ್ಕ (81) ಶನಿವಾರ ತಡರಾತ್ರಿ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಅಂಕೋಲಾದ ಅಂಬಾರಕೊಡ್ಲದವರಾಗಿರುವ ವಿಷ್ಣು ನಾಯ್ಕ ಅವರು 1944ರಲ್ಲಿ ತಾಲ್ಲೂಕಿನ ಅಂಬಾರಕೊಡ್ಲಾದಲ್ಲಿ ಜನಿಸಿದರು. ಎಂ.ಎ ಪದವೀಧರರಾಗಿದ್ದು, ದಿನಕರ ದೇಸಾಯಿ ಅವರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. … Continued

ಖ್ಯಾತ ಕನ್ನಡ-ತುಳು ಸಾಹಿತಿ, ಜಾನಪದ-ಯಕ್ಷಗಾನ ವಿದ್ವಾಂಸ ಪ್ರೊ. ‌ಅಮೃತ ಸೋಮೇಶ್ವರ ಇನ್ನಿಲ್ಲ

ಮಂಗಳೂರು : ಕನ್ನಡದ ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ಹಾಗೂ ಯಕ್ಷಗಾನ ಪ್ರಸಂಗ ಕರ್ತೃ ಪ್ರೊ.ಅಮೃತ ಸೋಮೇಶ್ವರ (89) ಅವರು ಶನಿವಾರ (ಜನವರಿ 6) ಬೆಳಿಗ್ಗೆ ನಿಧನರಾದರು. ಅವರು ವಯೋಸಹಜವಾಗಿ ಶನಿವಾರ ಬೆಳಿಗ್ಗೆ ತಮ್ಮ ಸ್ವಗೃಹ ಸೋಮೇಶ್ವರದ ‘ಒಲುಮೆ’ಯಲ್ಲಿ ನಿಧನರಾದರು. ಅಮೃತ ಸೋಮೇಶ್ವರ ಅವರಿಗೆ ಪತ್ನಿ ನರ್ಮದಾ, ಮಕ್ಕಳಾದ ಚೇತನ ಸೋಮೇಶ್ವರ, ಜೀವನ ಸೋಮೇಶ್ವರ ಇದ್ದಾರೆ. … Continued

ಸಾಹಿತಿ-ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ನಿಧನ

ಉಡುಪಿ: ಸಾಹಿತಿ, ಕವಿ, ನಾಟಕಕಾರ, ಯಕ್ಷಗಾನ ಪ್ರಸಂಗಕರ್ತ, ಯಕ್ಷಗಾನ ಅರ್ಥಧಾರಿಯಾಗಿದ್ದ ಅಪರೂಪದ ವ್ಯಕ್ತಿತ್ವದ ಅಂಬಾತನಯ ಮುದ್ರಾಡಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ಮಂಗಳವಾರ ಮುದ್ರಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಹಾಗೂ ಶಿಷ್ರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಅಂಬಾತನಯ ಮುದ್ರಾಡಿ ಅವರು 1935ರ … Continued

ಆರ್‌ಎಸ್‌ಎಸ್‌ ಹಿರಿಯ ಪ್ರಚಾರಕ, ಲೇಖಕ ಚಂದ್ರಶೇಖರ ಭಂಡಾರಿ ನಿಧನ

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಹಿರಿಯ ಪ್ರಚಾರಕ, ಲೇಖಕ ಚಂದ್ರಶೇಖರ ಭಂಡಾರಿ (87) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಮೂಲತಃ ಮಂಗಳೂರಿನವರಾದ ಚಂದ್ರಶೇಖರ ಅವರು ಆರ್‌ಎಸ್‌ಎಸ್‌ನ ಪ್ರಚಾರ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೇಖಕ, ಅನುವಾದಕ, ಕವಿಯಾಗಿಯೂ ಗುರುತಿಸಿಕೊಂಡಿದ್ದ ಅವರು ಅಂಬೇಡ್ಕರ್‌ ಅವರ ಜೀವನದ ಕುರಿತ … Continued