ಮುಂಬೈ : ಬಾಲಿವುಡ್ ಹೀ ಮ್ಯಾನ್ ಎಂದೇ ಖ್ಯಾತಿ ಪಡೆದ, ಹಿರಿಯ ನಟ ಧರ್ಮೇಂದ್ರ (Dharmendra) ಸೋಮವಾರ (ನವೆಂಬರ್ 24) ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಧರ್ಮೇಂದ್ರ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈಯ ಬ್ರೀಜ್ ಕ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಸಿಕೊಂಡ ಅವರನ್ನು ಡಿಸ್‌ಚಾರ್ಚ್ ಮಾಡಲಾಗಿತ್ತು.
ಧರ್ಮೇಂದ್ರ ಅವರು ಇಬ್ಬರು ಪತ್ನಿಯರಾದ ಪ್ರಕಾಶ್ ಕೌರ್ ಮತ್ತು ಹೇಮಾ ಮಾಲಿನಿ, ಆರು ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್, ವಿಜೇತ ಡಿಯೋಲ್, ಅಜೀತಾ ಡಿಯೋಲ್, ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಅವರನ್ನು ಅಗಲಿದ್ದಾರೆ.
1935ರ ಡಿಸೆಂಬರ್ 8ರಂದು ಪಂಜಾಬಿನ ನಸ್ರಾಲಿಯಲ್ಲಿ ಜನಿಸಿದ ಧರ್ಮೇಂದ್ರ ಅವರ ಮೂಲ ಹೆಸರು ಕೇವಲ್ ಕೃಶನ್ ಡಿಯೋಲ್., ಅವರು ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು 19 ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು 1954 ರಲ್ಲಿ ವಿವಾಹವಾದರು. ನಂತರ, ಅವರು ನಟಿ ಹೇಮಾ ಮಾಲಿನಿ ಅವರನ್ನು ವಿವಾಹವಾದರು. 1960ರಿಂದಲೂ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು 6 ದಶಕಗಳ ವೃತ್ತಿ ಜೀವನದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಹಿಂದಿ ಚಿತ್ರರಂಗದ ‘ಹೀ-ಮ್ಯಾನ್’ ಎಂದೇ ಅವರನ್ನುಗುರುತಿಸುತ್ತಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ಧರ್ಮೇಂದ್ರ ನಟಿಸಿದ್ದ ಧರ್ಮೇಂದ್ರ ಅನೇಕ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಧರ್ಮೇಂದ್ರ ಅವರು 2004 ರಲ್ಲಿ ಬಿಜೆಪಿಯಿಂದ ರಾಜಸ್ಥಾನದ ಬಿಕಾನೇರ್‌ನಿಂದ ಲೋಕಸಭೆಗೆ ಆಯ್ಕೆಯಾಗಿ ಸಂಸದರಾಗಿ ಕಾರ್ಯನಿರ್ವಹಿಸಿದ್ದರು.
1960ರಲ್ಲಿ ರಿಲೀಸ್ ಆದ ʼದಿಲ್ ಬಿ ತೇರ ಹಮ್ ಬಿ ತೇರೆʼ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಧರ್ಮೇಂದ್ರ ಬಳಿಕ ಹಿಂದಿರುಗಿ ನೋಡಿಲ್ಲ. ಹಿಂದಿ ಜತೆಗೆ ಪಂಜಾಬಿ, ಬಂಗಾಳಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸೂಪರ್ ಹಿಟ್ ಚಿತ್ರ ʼಶೋಲೆʼಯಲ್ಲಿನ ಅವರ ನಟನೆಯನ್ನು ಇಂದಿಗೂ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. ಧರ್ಮೇಂದ್ರ ನಟಿಸಿರುವ ಶ್ರೀರಾಮ ರಾಘವನ್ ನಿರ್ದೇಶನದ ʼಇಕ್ಕೀಸ್ʼ ಹಿಂದಿ ಚಿತ್ರದಲ್ಲಿ ಧರ್ಮೇಂದ್ರ ಮುಖ್ಯ ಪಾತ್ರ ನಿರ್ವಹಿಸಿದ್ದು, ಈ ವರ್ಷ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಕಥೆಯನ್ನು ಇದು ಹೊಂದಿದೆ.
ಧರ್ಮೇಂದ್ರ ಪ್ರಮುಖ ಸಿನಿಮಾಗಳು:1960 ರ ದಶಕದಲ್ಲಿ ಅನ್ಪದ್, ಬಂದಿನಿ, ಅನುಪಮಾ ಮತ್ತು ಆಯಾ ಸಾವನ್ ಝೂಮ್ ಕೆ ಮುಂತಾದ ಚಿತ್ರಗಳಲ್ಲಿ ಸಾಮಾನ್ಯ ಪಾತ್ರಗಳ ಮೂಲಕ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಶೋಲೆ, ಧರಮ್ ವೀರ್, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್ ಮತ್ತು ಡ್ರೀಮ್ ಗರ್ಲ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಖ್ಯಾತಿಗಳಿಸಿದರು.ಧರ್ಮೇಂದ್ರ ಅವರು ಶೋಲೆ (1975) ಮತ್ತು ಚುಪ್ಕೆ ಚುಪ್ಕೆ (1975) ಸೇರಿದಂತೆ ಅನೇಕ ಸೂಪರ್-ಹಿಟ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಫೂಲ್ ಔರ್ ಪತ್ತರ್ (1966), ಸೀತಾ ಔರ್ ಗೀತಾ (1972), ಧರಮ್ ವೀರ್ (1977), ಮತ್ತು ಮೇರಾ ಗಾಂವ್ ಮೇರಾ ದೇಶ್ (1971). ಅವರು ಪ್ರತಿಗ್ಯಾ (1975), ಆಂಖೇನ್ (1968), ಮತ್ತು ಬಾಂದಿನಿ (1963) ನಂತಹ ಸಿನಿಮಾಗಳಿಂದಲೂ ಅವರು ಹೆಸರುವಾಸಿಯಾಗಿದ್ದರು. ಆರು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅವರು ಶೋಲೆ, ಯಾದೋನ್ ಕಿ ಬಾರತ್, ಮೇರಾ ಗಾಂವ್ ಮೇರಾ ದೇಶ್, ಪ್ರತಿಗ್ಯಾ, ಚುಪ್ಕೆ ಚುಪ್ಕೆ, ನೌಕರ್ ಬೀವಿ ಕಾ, ಫೂಲ್ ಔರ್ ಪತ್ತರ್, ಸತ್ಯಕಾಂ, ಆಯೀ ಮಿಲನ್ ಕಿ ಬೇಲಾ, ದಿಲ್ ನೆ ಫಿರ್ ಯಾದ್ ಕಿಯಾ,ಆಯೆ ದಿನ್ ಬಹರ್ ಕೆ, ಆಂಖೇನ್, ಆಯಾ ಸಾವನ್ ಜೂಮ್ ಕೆ, ಜೀವನ್ ಮೃತ್ಯು, ಜುಗ್ನು, ಚರಸ್, ಧರಮ್ ವೀರ್, ಆಜಾದ್, ಗಜಾಬ್, ಲೋಹಾ, ಹುಕುಮತ್ ಮತ್ತು ಅಪ್ನೆ ಸೇರಿದಂತೆ ಹಲವಾರು ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ