ಗೋಕರ್ಣ : ಸಮುದ್ರ ಪಾಲಾದ ಇಬ್ಬರು ಪ್ರವಾಸಿಗರು

ಕಾರವಾರ : ಪ್ರವಾಸಕ್ಕೆ ಬಂದಿದ್ದ ಐವರು ಸ್ನೇಹಿತರ ಪೈಕಿ ಇಬ್ಬರು ಯುವಕರು ಸಮುದ್ರ ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕಲಬುರಗಿ ಮೂಲದ ಆಕಾಶ ಮತ್ತು ಅಭಿಷೇಕ ಎಂಬವರು ಮೃತರು ಎಂದು ಗುರುತಿಸಲಾಗಿದೆ. ಹತ್ತಿರದ ರೆಸಾರ್ಟಿಲ್ಲಿ ತಂಗಿದ್ದ ಐದು ಜನ ಪ್ರವಾಸಿಗರ ಪೈಕಿ ಮೂವರು ಭಾನುವಾರ ಸಂಜೆಯ ಸಮಯದಲ್ಲಿ ಈಜಲು ಸಮುದ್ರಕ್ಕೆ ಇಳಿದಿದ್ದು, ಅಲೆಯ ರಭಸಕ್ಕೆ ಸಿಲುಕಿ ಇಬ್ಬರು ನಾಪತ್ತೆಯಾಗಿದ್ದರು. ಇನ್ನೋರ್ವನನ್ನು ಸಮುದ್ರ ತೀರದಲ್ಲಿದ್ದ ಸ್ಥಳೀಯರು ರಕ್ಷಿಸಿದ್ದಾರೆ. ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 / 5. 2

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement