ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ…!

ಕಾರವಾರ : ಧಾರವಾಡದ ಮುಸ್ಲಿಂ ಕುಟುಂಬವು ಹಿಂದೂ ಧರ್ಮದ ಸಂಪ್ರದಾಯದಂತೆ ಗೋಕರ್ಣದಲ್ಲಿ ಪಿತೃಕಾರ್ಯ ಮಾಡಿರುವುದು ವರದಿಯಾಗಿದೆ. ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕೋಟಿ ತೀರ್ಥದಲ್ಲಿ ಪಿತೃಪಕ್ಷದಲ್ಲಿ ಈ ಕುಟುಂಬವು ಪಿತೃಕಾರ್ಯ ನೆರವೇರಿಸಿದ್ದಾರೆ.
ಮರಗೆಲಸ ಮಾಡುವ ಮಾಡುವ ಕುಟುಂಬವು ಧಾರವಾಡದ ಜ್ಯೋತಿಷಿ ಬಳಿ ಹೋದಾಗ ಅವರು ನೀಡಿದ ಸಲಹೆ ಮೇರೆಗೆ ನಾರಾಯಣ ಬಲಿ, ತ್ರಿಪಿಂಡಿ ಶ್ರಾದ್ಧ ಮತ್ತು ತಿಲಹವನವನ್ನು ಪಿತೃಶಾಲೆಯಲ್ಲಿ ಪೂರೈಸಿದೆ.
ಧಾರವಾಡದ ಧಾನೇಶ್ವರಿ ನಗರದಲ್ಲಿ ಶಂಶಾದ್ ಕುಟುಂಬವು ಮೊದಲಿನಿಂದಲೂ ಹಿಂದೂ ಸಂಪ್ರದಾಯದ ಮೇಲೆ ನಂಬಿಕೆ ಉಳ್ಳವರಾಗಿದ್ದಾರೆ. ಗದಗದ ವೀರನಾರಾಯಣ ದೇವಸ್ಥಾನದ ಹತ್ತಿರ ಹಿಂದು ಸಮುದಾಯದವರ ಜೊತೆ ಈ ಕುಟುಂಬದವರು ಬೆಳೆ.ದಿದ್ದಾರಂತೆ.

ಈ ಪಿತೃಕಾರ್ಯ ಮಾಡುವುದು ಶಂಶಾದ್‌ ಅವರು ತಮ್ಮ ತಮ್ಮನಿಗೆ ಮದುವೆ ಸಂಬಂಧ ಎಷ್ಟು ನೋಡಿದರೂ ಅವರಿಗೆ ಮದುವೆಯಾಗಿರಲಿಲ್ಲ. ಹೀಗಾಗಿ ಅವರು ಜ್ಯೋತಿಷಿ ಮೊರೆ ಹೋಗಿದ್ದರಂತೆ. ಆಗ ಅವರು ನಿಮ್ಮ ಅಜ್ಜ ಸತ್ತು ಹಲವು ವರ್ಷಗಳಾದರೂ ನಿಮಗೆ ಅವರ ಆತ್ಮದ ತೊಂದರೆಯಿದ್ದಂತೆ ಕಾಣುತ್ತಿದೆ. ಹೀಗಾಗಿ ನೀವು ಪೀತೃಕಾರ್ಯ ಮಾಡಿ ಎಂದು ಸಲಹೆ ನೀಡಿದ್ದರಂತೆ. ಮೊದಲಿನಿಂದಲೂ ಹಿಂದೂ ಸಂಪ್ರದಾಯದ ಮೇಲೆ ನಂಬಿಕೆಯಿದ್ದ ಈ ಕುಟುಂಬದವರು ಅವರ ಸಲಹೆಯಂತೆ ತಮ್ಮನ ಮದುವೆ ನಡೆಯುವಂತಾಗಲು ಹಾಗೂ ಮನೆಯವರಿಗೆ ಶಾಂತಿ-ನೆಮ್ಮದಿ ಸಿಗಲು ಗೋಕರ್ಣಕ್ಕೆ ಬಂದು ಪಿತೃಕಾರ್ಯ ಮಾಡಿರುವುದಾಗಿ ಹೇಳಿದ್ದಾರೆ. ಗೋಕರ್ಣದಲ್ಲಿ ನಾಗರಾಜ ಭಟ್ ಗುರುಲಿಂಗ ಹಾಗೂ ಸುಬ್ರಹಣ್ಯ ಚಿತ್ರಿಗೆಮಠ ಅವರ ನೇತೃತ್ವದಲ್ಲಿ ಈ ಕುಟುಂಬ ಪಿತೃಕಾರ್ಯ ನೆರವೇರಿಸಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಹಗರಣ: ಮಧ್ಯಂತರ ಜಾಮೀನು ಕೋರಿ ಜನಪ್ರತಿನಿಧಿಗಳ ನ್ಯಾಯಾಲಯದ ಮೆಟ್ಟಿಲೇರಿದ ರೇವಣ್ಣ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement