ಗೋಕರ್ಣ : ಕುಡ್ಲೇ ಬೀಚ್‌ನಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆಯ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೇ ಬೀಚ್‌ನಲ್ಲಿ (Kudle Beach) ಸೋಮವಾರ ಸಮುದ್ರದಲ್ಲಿ ಮುಳುಗಿತ್ತಿದ್ದ ವಿದೇಶಿ ಮಹಿಳೆಯನ್ನು (Woman) ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣೆ ಮಾಡಲಾದ ಮಹಿಳೆಯನ್ನು ಕಜಕಿಸ್ತಾನ ಮೂಲದ (Kazakhstan) ಐದಾಲಿ (25) ಎಂದು ಗುರುತಿಸಲಾಗಿದೆ. ಕಜಕಿಸ್ತಾನ ಮೂಲದ ದಂಪತಿ ಕುಡ್ಲೆ ಬೀಚ್‌ನಲ್ಲಿ ಈಜಲು ಹೋದಾಗ ಮಹಿಳೆ ಸಮುದ್ರದ ಅಲೆಗೆ … Continued

ರಷ್ಯಾಕ್ಕೆ ಹೋಗುತ್ತಿದ್ದ ಅಜರ್‌ ಬೈಜಾನ್ ಏರ್‌ ಲೈನ್ಸ್ ವಿಮಾನ ಪತನ ; 38 ಮಂದಿ ಸಾವು | ವಿಮಾನ ನೆಲಕ್ಕೆ ಅಪ್ಪಳಿಸಿದ ಕ್ಷಣದ ದೃಶ್ಯ ವೀಡಿಯೊದಲ್ಲಿ ಸೆರೆ

ಬುಧವಾರ ಕಝಾಕಿಸ್ತಾನ್‌ನ ಅಕ್ಟೌ ಪ್ರದೇಶದ ಬಳಿ ರಷ್ಯಾಕ್ಕೆ ತೆರಳುತ್ತಿದ್ದ ಅಜರ್‌ಬೈಜಾನಿ ವಿಮಾನ ಪತನಗೊಂಡಿದ್ದು, 38 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಅಪಘಾತಕ್ಕೀಡಾದ ಭಯಾನಕ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿನ ದೃಶ್ಯಗಳು ತೋರಿಸಿವೆ. ರಷ್ಯಾದ ಸುದ್ದಿ ಸಂಸ್ಥೆ ಇಂಟರ್‌ಫ್ಯಾಕ್ಸ್ ಪ್ರಕಾರ, ಅಜೆರ್ಬೈಜಾನಿ ಅಧಿಕಾರಿಗಳನ್ನು ಭೇಟಿಯಾದ ನಂತರ ಉಪ ಪ್ರಧಾನಿ ಮಂತ್ರಿ ಕನತ್ ಬೊಜುಂಬಾವ್ ಸಾವಿನ ಸಂಖ್ಯೆಯನ್ನು … Continued