ಗೋಕರ್ಣ : ಕುಡ್ಲೇ ಬೀಚ್‌ನಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆಯ ರಕ್ಷಣೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೇ ಬೀಚ್‌ನಲ್ಲಿ (Kudle Beach) ಸೋಮವಾರ ಸಮುದ್ರದಲ್ಲಿ ಮುಳುಗಿತ್ತಿದ್ದ ವಿದೇಶಿ ಮಹಿಳೆಯನ್ನು (Woman) ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.
ರಕ್ಷಣೆ ಮಾಡಲಾದ ಮಹಿಳೆಯನ್ನು ಕಜಕಿಸ್ತಾನ ಮೂಲದ (Kazakhstan) ಐದಾಲಿ (25) ಎಂದು ಗುರುತಿಸಲಾಗಿದೆ. ಕಜಕಿಸ್ತಾನ ಮೂಲದ ದಂಪತಿ ಕುಡ್ಲೆ ಬೀಚ್‌ನಲ್ಲಿ ಈಜಲು ಹೋದಾಗ ಮಹಿಳೆ ಸಮುದ್ರದ ಅಲೆಗೆ ಸಿಲುಕಿದ್ದರು. ಕೂಡಲೇ ಇದನ್ನು ಗಮನಿಸಿದ ಅಲ್ಲಿದ್ದ ರಕ್ಷಣಾ ಸಿಬ್ಬಂದಿ ಅವರನ್ನು ಕಾಪಾಡಿದ್ದಾರೆ.
ರಕ್ಷಣಾ ಸಿಬ್ಬಂದಿ ಮಂಜುನಾಥ ಹರಿಕಂತ್ರ, ಗಿರೀಶ್ ಗೌಡ, ನಾಗೇಂದ್ರ ಮೊದಲಾದವರು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಗೋಕರ್ಣ (Gokarna ) ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement