‘ಭಾರತ ಮರ್ಸಿಡಿಸ್‌ʼನಂತೆ, ಪಾಕಿಸ್ತಾನ ಡಂಪ್ ಟ್ರಕ್’ನಂತೆ: ಈ ಹೋಲಿಕೆ ಮಾಡಿ ಆನ್‌ಲೈನ್‌ನಲ್ಲಿ ಟ್ರೋಲ್‌ ಆದ ಪಾಕ್ ಸೇನಾ ಮುಖ್ಯಸ್ಥ

ವಾಷಿಂಗ್ಟನ್: ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕಿದ್ದರ ನಡುವೆ, ಪಾಕಿಸ್ತಾನದ ವಾಸ್ತವಿಕ ಮಿಲಿಟರಿ ಆಡಳಿತಗಾರ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಭಾರತವನ್ನು “ಹೊಳೆಯುವ ಮರ್ಸಿಡಿಸ್” ಗೆ ಮತ್ತು ತನ್ನ ಸ್ವಂತ ದೇಶವನ್ನು “ಡಂಪ್ ಟ್ರಕ್” ಗೆ ಹೋಲಿಕೆ ಮಾಡಿ ಈಗ ಸುದ್ದಿಯಲ್ಲಿದ್ದಾರೆ. ಫ್ಲೋರಿಡಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮುನೀರ್ “ಪರಿಸ್ಥಿತಿ ವಿವರಿಸಲು ನಾನು ಈ ಒರಟಾದ ಸಾದೃಶ್ಯವನ್ನು … Continued

ವೀಡಿಯೊ | ಉಕ್ರೇನ್‌ ಯುದ್ಧದಲ್ಲಿ ಮೃತ ರಷ್ಯಾದ ಸೈನಿಕನ ಅಂತಿಮ ಸಂಸ್ಕಾರವನ್ನು ಹಿಂದೂ ಧರ್ಮದ ಪದ್ಧತಿಯಂತೆ ಆನ್‌ಲೈನ್‌ಲ್ಲಿ ನೆರವೇರಿಸಿದ ಗೋಕರ್ಣ ಅರ್ಚಕರು…!

ಕಾರವಾರ : ಯುದ್ಧದಲ್ಲಿ ಮಡಿದ ರಷ್ಯಾ ಯೋಧ ಸರ್ಗೇಯ ಗಾಬ್ಲೇವ್ ಅವರ ಕೊನೆಯ ಆಸೆಯಂತೆ ಆನ್ಲೈನ್ ಮೂಲಕ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಹಿಂದೂ ಪದ್ಧತಿಯಂತೆ ಅವರ ಅಂತಿಮ ಸಂಸ್ಕಾರ ನಡೆಸಲಾಯಿತು ಎಂದು ವರದಿಯಾಗಿದೆ. ದೂರದ ರಷ್ಯಾದ ಸರ್ಗೇಯ ಗಾಬ್ಲೇವ್ ಎಂಬವರು ಯುದ್ಧದಲ್ಲಿ ಮಡಿದ ನಂತರ ಅವರ ಕೊನೆಯ ಆಸೆಯಂತೆ ಅವರ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆ ಗೋಕರ್ಣದಲ್ಲಿ … Continued

ಮೈಸೂರು ವಿವಿ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ 2021-22ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅ.4 ರಿಂದ ಪೋರ್ಟಲ್‌ ತೆರೆಯಲಾಗುವುದು ಎಂದು ತಿಳಿಸಲಾಗಿದೆ. ಪರೀಕ್ಷೆ ಬರೆಯಲು ಇಚ್ಛಿಸುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ www.uompgadmissions.com ವೀಕ್ಷಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಆರ್‌ಟಿಒ ೧೮ ಸೇವೆಗಳು ಈಗ ಆನ್‌ಲೈನ್‌ನಲ್ಲಿಯೂ ಲಭ್ಯ..!

ನವ ದೆಹಲಿ: ಡ್ರೈವಿಂಗ್ ಲೈಸ್ಸ್, ನವೀಕರಣ ಸೇರಿದಂತೆ ವಿವಿಧ 18 ಸೇವೆಗಳಿಗೆ ಆರ್ ಟಿ ಒ ಕಚೇರಿಗೆ ಹೋಗಿಯೇ ಮಾಡಿಸಬೇಕಿತ್ತು. ಇನ್ಮುಂದೆ ಆಧಾರ್ ದೃಢೀಕರಣದ ಮೂಲಕ 18 ಸೇವೆಗಳನ್ನು ಈಗ, ಸಂಪರ್ಕ ರಹಿತ ಸೇವೆಗನ್ನಾಗಿ ಪಡೆಯಬಹುದಾಗಿದೆ. ಇಂತಹ ಸೇವೆಯನ್ನು ಭಾರತೀಯ ನಾಗರಿಕರಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಆರಂಭಿಸಿದ್ದು, ದೇಶದ ಜನರು ಕುಳಿತಲ್ಲೇ, … Continued