ಕುಮಟಾ : ಲಾರಿ-ಬೈಕ್‌ ಡಿಕ್ಕಿ; ಓರ್ವ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ

ಕುಮಟಾ: ಬೈಕ್‌ ಹಾಗೂ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಗಿಬ್ ಸರ್ಕಲ್ ಬಳಿ ಭಾನುವಾರ ನಡೆದಿದೆ ಎಂದು ವರದಿಯಾಗಿದೆ. ಮೃತ ವ್ಯಕ್ತಿಯನ್ನು ಬೈಕ್‌ ಸವಾರ ಸುಬ್ರಹ್ಮಣ್ಯ ಅಂಬಿಗ (35) ಎಂದು ಗುರುತಿಸಲಾಗಿದೆ. ಸಹ … Continued

ವೀಡಿಯೊ..| ಕುಮಟಾ: ಡಾಲ್ಫಿನ್ ಕಳೆಬರ ಪತ್ತೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಕಡ್ಲೆಯ ಅರಬ್ಬೀ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೆಬರ ಪತ್ತೆಯಾಗಿದೆ. ಸುಮಾರು 5 ಅಡಿ ಉದ್ದವಿರುವ ಡಾಲ್ಫಿನ್ ಕೊಳೆತ ಸ್ಥಿತಿಯಲ್ಲಿ ತೀರಕ್ಕೆ ಬಂದು ಬಿದ್ದಿದೆ. ಸಾಮಾನ್ಯವಾಗಿ ಹತ್ತರಿಂದ 15 ನಾಟಿಕಲ್ ಮೈಲು ಒಳಗೆ ಇದು ವಾಸಿಸುತ್ತಿದ್ದು ಸಮುದ್ರದ ನೀರಿನ ಇಳಿತದ ಸಂದರ್ಭದಲ್ಲಿ ಆಳ ಸಮುದ್ರಕ್ಕೆ ಹೋದ ಸಂದರ್ಭದಲ್ಲಿ … Continued

ವೀಡಿಯೊಗಳು..| ಕುಮಟಾ : ಹೊಲನಗದ್ದೆ-ಕಡ್ಲೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಕಡ್ಲೆ ಗುಡ್ಡದ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಸಂಜೆ ಬೆಂಕಿ ವ್ಯಾಪಿಸಿದ್ದು  ಸಸ್ಯ ಸಂಕುಲಗಳು ಬೆಂಕಿಗೆ ಆಹುತಿಯಾಗಿದೆ. ಈ ಘಟನೆ ಶುಕ್ರವಾರ ಅಪರಾಹ್ನದ ಸುಮಾರಿಗೆ ನಡೆದಿದೆ ಎಂದು ಹೇಳಲಾಗಿದೆ. ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಿರುವ ಕಡ್ಲೆ ಗುಡ್ಡದಲ್ಲಿ ವ್ಯಾಪಿಸಿರುವ ಬೆಂಕಿ ನಂದಿಸುವುದು ಸುಲಭವಲ್ಲ. ಅರಬ್ಬೀ ಸಮುದ್ರದ ಪಶ್ಚಿಮ … Continued

ಕುಮಟಾ : ಪೆಟ್ರೋಲ್ ಬಂಕ್ ಕಳ್ಳತನ ; ಇಬ್ಬರನ್ನು ಬಂಧಿಸಿದ ಪೊಲೀಸರು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಾಸೂರು ಕ್ರಾಸ್ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಕುಮಟಾ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಫೆಬ್ರವರಿ 1ರ ರಾತ್ರಿ ಪೆಟ್ರೋಲ್ ಬಂಕ್ ಕಚೇರಿಯ ಹಿಂಭಾಗದ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳನುಗ್ಗಿದ್ದ ಕಳ್ಳರು, ಲಾಕರ್ ಮೀಟಿ ತೆಗೆದು ಅದರಲ್ಲಿದ್ದ 25,000 ರೂ. ನಗದು ಹಣವನ್ನು … Continued

ಕುಮಟಾ : ರಾಜ್ಯ ಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ ಕೂಜಳ್ಳಿಯ ಸಂಧ್ಯಾ ಹೆಗಡೆ ದ್ವಿತೀಯ

ಕುಮಟಾ: ರಾಷ್ಟ್ರಕವಿ ಡಾ.ಜಿ.ಎಸ್.ಎಸ್. ಪ್ರತಿಷ್ಠಾನ  ಶಿವಮೊಗ್ಗ ವತಿಯಿಂದ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯ ಸಂಧ್ಯಾ ವಿನಾಯಕ ಹೆಗಡೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಗೀತ ಗಾಯನ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧ ಭಾಗದ 83 ಸ್ಪರ್ಧಾಳುಗಳು ಭಾಗವಹಿಸಿದ್ದು ಅಂತಿಮ ಸುತ್ತಿಗೆ ಕೇವಲ … Continued

ರೋಟರಿ ಕ್ಲಬ್ ಕುಮಟಾಕ್ಕೆ 15 ಪ್ರತಿಷ್ಠಿತ ಪ್ರಶಸ್ತಿಗಳು

ಕುಮಟಾ: ಇತ್ತೀಚೆಗೆ ಕೊಲ್ಲಾಪುರದಲ್ಲಿ ನಡೆದ ರೋಟರಿ ಜಿಲ್ಲೆ 3170ದ 67ನೆಯ ರೋಟರಿ ಜಿಲ್ಲಾ ಸಮಾರಂಭ ‘ಋಣಾನುಬಂಧ’ದಲ್ಲಿ ರೋಟರಿ ಕ್ಲಬ್‌ನ ನಿರಂತರ ಸೇವಾ ಚಟುವಟಿಕೆಗಳು, ಸಮರ್ಪಣೆ ಹಾಗೂ ತಂಡಬದ್ಧ ಕಾರ್ಯಪಟುತನಕ್ಕೆ ರೋಟರಿ ಜಿಲ್ಲಾಡಳಿತದಿಂದ ಮಹತ್ವದ ಗೌರವ ಲಭಿಸಿದೆ. ರೋಟರಿ ಕ್ಲಬ್ ಕುಮಟಾ ಮೂಲಕ ಸಲ್ಲಿಸಲಾದ ಅತ್ಯುತ್ತಮ ಸೇವೆಯನ್ನು ಗುರುತಿಸಿ, ಅದಕ್ಕೆ ಒಟ್ಟು 15 ಪ್ರತಿಷ್ಠಿತ ಪ್ರಶಸ್ತಿಗಳು ಹಾಗೂ … Continued

ಕೂಜಳ್ಳಿ : ಪಂ.ನಿತ್ಯಾನಂದ ಹಳದೀಪುರಗೆ ʼಷಡಕ್ಷರಿ ಗವಾಯಿ ರಾಷ್ಟ್ರೀಯ ಪುರಸ್ಕಾರʼ ಪ್ರದಾನ

ಕುಮಟಾ: ಖ್ಯಾತ ಹಿಂದುಸ್ತಾನಿ ಬಾನ್ಸುರಿ (ಕೊಳಲು)ವಾದಕ, ಮುಂಬೈನ ನಿತ್ಯಾನಂದ ಹಳದೀಪುರ ಅವರಿಗೆ ಪಂ. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ನೀಡುವ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಲಾಯಿತು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಅವರು, ಪಂ. ಷಡಕ್ಷರಿ … Continued

ಕುಮಟಾ : ಜನವರಿ 4ರಂದು ಕೂಜಳ್ಳಿಯಲ್ಲಿ ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಸಂಗೀತೋತ್ಸವ ; ʼಷಡಕ್ಷರಿ ರಾಷ್ಟ್ರೀಯ ಪುರಸ್ಕಾರʼ ಪ್ರದಾನ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯ ಪಂ. ಷಡಕ್ಷರಿ ಗವಾಯಿ ಅಕಾಡೆಮಿಯಿಂದ ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಹಾಗೂ ಷಡಕ್ಷರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪ್ರದಾನ ಸಮಾರಂಭವು ಕೂಜಳ್ಳಿಯ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಜನವರಿ. 4ರಂದು ನಡೆಯಲಿದೆ. ಈ ಬಾರಿ ಖ್ಯಾತ ಕೊಳಲು ವಾದಕ ಮುಂಬೈನ ನಿತ್ಯಾನಂದ ಹಳದೀಪುರ … Continued

ಶಿರಸಿ-ಕುಮಟಾ ರಸ್ತೆಯಲ್ಲಿ ಡಿಸೆಂಬರ್‌ 30 ರಿಂದ ಬಸ್ ಸಂಚಾರ ; ಜಿಲ್ಲಾಧಿಕಾರಿ

ಕಾರವಾರ : ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ-766 ಇ ರಸ್ತೆಯಲ್ಲಿ ಡಿಸೆಂಬರ್‌ 30ರಿಂದ ಪುನಃ ಬಸ್ ಸಂಚಾರಕ್ಕೆ ಅನುವು ಮಾಡಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಪೊಲೀಸ್ ಅಧೀಕ್ಷಕರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವರದಿ ಆಧಾರದ ಮೇಲೆ ಸದರಿ ರಸ್ತೆಯಲ್ಲಿ ಡಿಸೆಂಬರ್‌ 30 … Continued

ಜ.4ರಂದು ಕೂಜಳ್ಳಿಯಲ್ಲಿ ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಸಂಗೀತೋತ್ಸವ ; ಪಂ.ನಿತ್ಯಾನಂದ ಹಳದೀಪುರಗೆ ʼಷಡಕ್ಷರಿ ರಾಷ್ಟ್ರೀಯ ಪುರಸ್ಕಾರʼ ಪ್ರದಾನ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯ ಪಂ. ಷಡಕ್ಷರಿ ಗವಾಯಿ ಅಕಾಡೆಮಿಯಿಂದ ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಹಾಗೂ ಷಡಕ್ಷರಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪ್ರದಾನ ಸಮಾರಂಭವು ಕೂಜಳ್ಳಿಯ ಕುಳಿಹಕ್ಕಲಿನ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಜನವರಿ. 4ರಂದು ನಡೆಯಲಿದೆ. ಈ ಬಾರಿ ಖ್ಯಾತ ಕೊಳಲು ವಾದಕ ಮುಂಬೈನ ನಿತ್ಯಾನಂದ ಹಳದೀಪುರ … Continued