ದುಬೈನಲ್ಲಿ 35 ಕೋಟಿ ರೂ. ಜಾಕ್‌ ಪಾಟ್ ಗೆದ್ದ ಭಾರತೀಯ ವ್ಯಕ್ತಿ…!

ಖಲೀಜ್ ಟೈಮ್ಸ್‌ನ ವರದಿಯ ಪ್ರಕಾರ, ಸೆಪ್ಟೆಂಬರ್ 3 ರಂದು ನಡೆದ ಅಬುಧಾಬಿ ಬಿಗ್ ಟಿಕೆಟ್ ಸರಣಿ 278 ಡ್ರಾದಲ್ಲಿ ದುಬೈನಲ್ಲಿ ವಾಸಿಸುವ ಭಾರತೀಯ ವಲಸಿಗ 15 ಮಿಲಿಯನ್ ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಮ್‌ಗಳ (ಸುಮಾರು 35 ಕೋಟಿ ರೂ.) ಜಾಕ್‌ಪಾಟ್‌ ಬಹುಮಾನ ಗೆದ್ದಿದ್ದಾರೆ. ಈ ದೊಡ್ಡ ಮೊತ್ತದ ಬಹುಮಾನ ಗೆದ್ದಿರುವವರು ದುಬೈ ಡ್ರೈಡಾಕ್ಸ್‌ನಲ್ಲಿರುವ ಭಾರತೀಯ ವಲಸಿಗ … Continued

ಅಮೆರಿಕ ವೇದಿಕ್ ವೆಲ್ನೆಸ್ ವಿವಿ ವೈಬ್ರನ್ಸ್ 2025 ಟ್ಯಾಲೆಂಟ್‌ ಸ್ಪರ್ಧೆ : ಕುಮಟಾದ ಅದಿತಿ ಶಾನಭಾಗ ಕರ್ನಾಟಕಕ್ಕೆ ದ್ವಿತೀಯ

ಕುಮಟಾ : ಅಮೆರಿಕದ ಫ್ಲೋರಿಡಾದ ವೇದಿಕ್ ವೆಲ್ನೆಸ್ ವಿಶ್ವವಿದ್ಯಾಲಯ (ವಿಡಬ್ಲ್ಯೂಯು) ಆಯೋಜಿಸಿದ್ದ ಭಾರತೀಯ ಕಲೆ, ಸಂಗೀತದ ಟ್ಯಾಲೆಂಟ್‌ ಶೋ‌ ಸ್ಪರ್ಧೆ ವೈಬ್ರನ್ಸ್ 2025 ಸ್ಪರ್ಧೆಯಲ್ಲಿ ಕುಮಟಾದ ಅದಿತಿ ಶಾನಭಾಗ ಕರ್ನಾಟಕಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಫ್ಲೋರಿಡಾದ ವೇದಿಕ್ ವೆಲ್ನೆಸ್ ವಿಶ್ವವಿದ್ಯಾಲಯ ಆಯೋಜಿಸುವ ವೈಬ್ರನ್ಸ್ ಹೆಸರಿನ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ … Continued

ಓಟದ ಸ್ಪರ್ಧೆಯಲ್ಲಿ ಬಹುಮಾನ ಸಿಗದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರು: ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಸಿಗದ ವಿಚಾರಕ್ಕೆ ಖಿನ್ನತೆಗೊಳಗಾದ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸಂಪ್ಯದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಸಂಪ್ಯ ಬೈಲಾಡಿ ನಿವಾಸಿ ಪುತ್ರಿ ನಿಶಾ (17) ಎಂಬವರು ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ ಒಂದು ವಾರದ ಹಿಂದೆ ವಿಷ ಸೇವಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ … Continued

ಟಿಸಿಎಸ್ ಟೆಕ್‌ಬೈಟ್ಸ್‌‌ ಹುಬ್ಬಳ್ಳಿ ಆವೃತ್ತಿಯ ಪ್ರಶಸ್ತಿ ಬಾಚಿಕೊಂಡ ಧೀರಜ್

ಹುಬ್ಬಳ್ಳಿ: ಜಾಗತಿಕ ಐಟಿ ಸೇವೆ, ಸಲಹೆ ಮತ್ತು ಉದ್ದಿಮೆ ವಹಿವಾಟು ಪರಿಹಾರ ಸಂಘಟನೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್), ಮತ್ತು ಕರ್ನಾಟಕ ಸರ್ಕಾರ ರಚಿಸಿರುವ ಐಟಿ ಶಿಕ್ಷಣ ಗುಣಮಟ್ಟ ಮಂಡಳಿಯ (ಬಿಐಟಿಇಎಸ್) ಜಂಟಿ ಆಶ್ರಯದಲ್ಲಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಟಿಸಿಎಸ್ ಟೆಕ್‌ಬೈಟ್ಸ್ ೧೨ನೇ ಆವೃತ್ತಿಯ ಐಟಿ ರಸಪ್ರಶ್ನೆ ಸ್ಪರ್ಧೆಯ ಹುಬ್ಬಳ್ಳಿ ಪ್ರಾದೇಶಿಕ ವಲಯದ ಅಂತಿಮ … Continued