ಟಿಸಿಎಸ್ ಟೆಕ್‌ಬೈಟ್ಸ್‌‌ ಹುಬ್ಬಳ್ಳಿ ಆವೃತ್ತಿಯ ಪ್ರಶಸ್ತಿ ಬಾಚಿಕೊಂಡ ಧೀರಜ್

ಹುಬ್ಬಳ್ಳಿ: ಜಾಗತಿಕ ಐಟಿ ಸೇವೆ, ಸಲಹೆ ಮತ್ತು ಉದ್ದಿಮೆ ವಹಿವಾಟು ಪರಿಹಾರ ಸಂಘಟನೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್), ಮತ್ತು ಕರ್ನಾಟಕ ಸರ್ಕಾರ ರಚಿಸಿರುವ ಐಟಿ ಶಿಕ್ಷಣ ಗುಣಮಟ್ಟ ಮಂಡಳಿಯ (ಬಿಐಟಿಇಎಸ್) ಜಂಟಿ ಆಶ್ರಯದಲ್ಲಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಟಿಸಿಎಸ್ ಟೆಕ್‌ಬೈಟ್ಸ್ ೧೨ನೇ ಆವೃತ್ತಿಯ ಐಟಿ ರಸಪ್ರಶ್ನೆ ಸ್ಪರ್ಧೆಯ ಹುಬ್ಬಳ್ಳಿ ಪ್ರಾದೇಶಿಕ ವಲಯದ ಅಂತಿಮ ಸುತ್ತಿನ ಫಲಿತಾಂಶ ಪ್ರಕಟಿಸಲಾಗಿದೆ.
ವಿಜೇತರು: ಧೀರಜ್ ದನೇಶ್ ಅಂಗಡಿ -ಕೆಎಲ್‌ಇ ಡಾ. ಎಂ. ಎಸ್. ಶೇಷಗಿರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಬೆಳಗಾವಿ
ರನ್ನರ್ಸ್ ಅಪ್: ವಿಜೇತ್ ಉದಯ್ ರೇವಣಕರ್- ಕೆಎಲ್‌ಎಸ್ ವಿಶ್ವನಾಥರಾವ್ ದೇಶಪಾಂಡೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಳಿಯಾಳ
ವಿಜೇತರಿಗೆ ಟಿಸಿಎಸ್ ೧೨,೦೦೦ ರೂ. ಮೊತ್ತದ ಗಿಫ್ಟ್ ವೋಚರ್ ಮತ್ತು ರನ್ನರ್ಸ್ ಅಪ್‌ಗೆ ೧೦,೦೦೦ ರೂ. ಮೊತ್ತದ ಗಿಫ್ಟ್ ವೋಚರ್ ನೀಡಿದೆ. ಮಾರ್ಚ್ ೨೬ರಂದು ನಡೆಯಲಿರುವ ರಾಜ್ಯಮಟ್ಟದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಈ ವಲಯದ ವಿಜೇತರು ಮಂಗಳೂರನ್ನು ಪ್ರತಿನಿಧಿಸಲಿದ್ದಾರೆ.
೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ವಭಾವಿ ಸುತ್ತಿನ ಆನ್‌ಲೈನ್ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಇವರಲ್ಲಿ ಮುಂಚೂಣಿ ೬ ತಂಡಗಳು ಸಂವಾದ ರೂಪದ ಆನಿಮೇಷನ್ ಆಧಾರದ ರಸಪ್ರಶ್ನೆ ಸುತ್ತಿಗೆ ಅರ್ಹತೆ ಪಡೆದಿದ್ದವು. ಈ ಸುತ್ತಿನ ಕ್ವಿಜ್, ಬೈಟ್ ಅಬಂಡನ್ಸ್, ಟೆಕ್ ವಿಷನ್, ಬೈಟ್ ಕ್ಲೌಡ್ಸ್, ಕನೆಕ್ಟೆಡ್ ಇಕೊಸಿಸ್ಟಮ್ ಮತ್ತು ಟೆಕ್ ಅಜೈಲ್ ಹೆಸರಿನ ಐದು ವಲಯಗಳನ್ನು ಒಗೊಂಡಿತ್ತು.
ಟಿಸಿಎಸ್‌ನ ಬೆಂಗಳೂರು ವಿತರಣಾ ಕೇಂದ್ರದ ಮುಖ್ಯಸ್ಥ ಸುನಿಲ್ ದೇಶಪಾಂಡೆ ಮಾತನಾಡಿ, ‘ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬದಲಾವಣೆಗಳಿಗೆ ಪೂರಕವಾಗಿ ಬೆಳೆಯುವುದಕ್ಕೆ ಟಿಸಿಎಸ್ ಟೆಕ್‌ಬೈಟ್ಸ್, ವಿದ್ಯಾರ್ಥಿ ಸಮುದಾಯಕ್ಕೆ ದೊಡ್ಡ ಅವಕಾಶ ಒದಗಿಸಿದೆ ಎಂದು ಹೇಳಿದ್ದಾರೆ.
‘ಬಿಐಟಿಇಎಸ್’ನ ಅಧ್ಯಕ್ಷ ಡಾ. ಕೆ. ಎನ್. ಬಾಲಸುಬ್ರಮಣ್ಯ ಮಾತನಾಡಿ, ‘ಟಿಸಿಎಸ್ ಟೆಕ್‌ಬೈಟ್ಸ್, ಸದ್ಯದ ಸ್ಪರ್ಧಾತ್ಮಕ ಪರಿಸರದಲ್ಲಿ ತುಂಬ ಮಹತ್ವದ್ದಾಗಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ನಾವು ಟಿಸಿಎಸ್‌ನ ಪಾಲುದಾರನಾಗಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ’ ಎಂದರು.
ಟಿಸಿಎಸ್ ಟೆಕ್‌ಬೈಟ್ಸ್ :
ಟಿಸಿಎಸ್ ಟೆಕ್ ಬೈಟ್ಸ್- ಇದೊಂದು ಕ್ಯಾಂಪಸ್ ಸಂಪರ್ಕ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳ ಜ್ಞಾನ ಮತ್ತು ತಿಳಿವಳಿಕೆಯ ವ್ಯಾಪ್ತಿ ಹಿಗ್ಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಟಿಸಿಎಸ್ ಟೆಕ್‌ಬೈಟ್ಸ್‌ನ ಪ್ರಾದೇಶಿಕ ವಲಯದ ಅಂತಿಮ ಸ್ಪರ್ಧೆಗಳನ್ನು ಕರ್ನಾಟಕದ ೬ ಪ್ರಮುಖ ನಗರಗಳಾದ ಕಲಬುರಗಿ, ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಮಂಗಳೂರು ಮತ್ತು ತುಮಕೂರಿನಲ್ಲಿ ನಡೆಸಲಾಗುತ್ತಿದೆ. ಈ ಕ್ವಿಜ್ ಕಾರ್ಯಕ್ರಮವನ್ನು ಖ್ಯಾತ ಕ್ವಿಜ್ ಮಾಸ್ಟರ್ ಲಾಯ್ಡ್ ಸಲ್ಡಾನ್ಹಾ ಅವರು ನಡೆಸಿಕೊಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement