ಕೂಜಳ್ಳಿ: ನಾಳೆ ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಸಂಗೀತ ಕಾರ್ಯಕ್ರಮ

ಕುಮಟಾ: ಪಂಡಿತ ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಸಂಗೀತ ಕಾರ್ಯಕ್ರಮ ಕುಮಟಾ ತಾಲೂಕಿನ ಕೂಜಳ್ಳಿ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಡಿ. 25ರಂದು ಅಪರಾಹ್ನ 3. ಗಂಟೆಯಿಂದ 8ರ ವರೆಗೆ ಪಂ. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ನಡೆಯಲಿದೆ. ನಾದ ನಮನ ಕಾರ್ಯಕ್ರಮದಲ್ಲಿ ಶ್ರೀಪಾದ ಹೆಗಡೆ ಸೋಮನಮನೆ, ಶ್ರೀಧರ ಹೆಗಡೆ ಕಲ್ಭಾಗ, ಶ್ರೀಲತಾ ಗುರುರಾಜ … Continued

ಕೆನರಾ ಕ್ರೆಡಿಟ್ ಸೌಹಾರ್ದ ಸಂಘಕ್ಕೆ ೧.೨೯ ಲಕ್ಷ ರೂ. ಲಾಭ

ಕುಮಟಾ: ಕೆನರಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ವಾರ್ಷಿಕ ಸಭೆಯು ಬಗ್ಗೋಣದ ಲಯನ್ಸ್ ಭವನದಲ್ಲಿ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ಜಿ.ಜಿ.ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘವು ೨೦೨೦-೨೧ ರಲ್ಲಿ ೧೨೯೭೦೧ ರೂ.ಗಳಷ್ಟು ಲಾಭ ಮಾಡಿದೆ. ಲಾಕ್ ಡೌನ್ ಇತ್ಯಾದಿ ಸಮಸ್ಯೆಯ ಮಧ್ಯೆಯೂ ಸಂಘವು ಲಾಭಗಳಿಸಿದ್ದು ಸಂತಸದ ವಿಷಯವಾಗಿದೆ. ಜನರು ಆರ್ಥಿಕ ಅಭಿವೃದ್ಧಿ ಹೊಂದಬೇಕಾದರೆ ಹಣಕಾಸು … Continued

ಕುಮಟಾ ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯಕ್ಕೆ ಬಿ ಪ್ಲಸ್ ನ್ಯಾಕ್ ಮಾನ್ಯತೆ

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯಕ್ಕೆ ನವೆಂಬರ್ ೧೮ ಮತ್ತು ೧೯ ರಂದು ನ್ಯಾಕ್ ಸಮೀತಿ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದ್ದು, ಕಾಲೇಜು ಬಿ ಪ್ಲಸ್‌ ನ್ಯಾಕ್ ಶ್ರೇಣಿ ಉನ್ನತಿ ಪಡೆದುಕೊಂಡಿದೆ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗಿನ ಚರ್ಚೆ, ಆಡಳಿತ ಮಂಡಳಿಯೊಂದಿಗಿನ ಸಭೆ, ಪೂರ್ವ ವಿದ್ಯಾರ್ಥಿಗಳೊಂದಿಗಿನ ಸಂಭಾಷಣೆ ನಡೆಸಿ ನ್ಯಾಕ್ ಸಮಿತಿ ಮೆಚ್ಚುಗೆ … Continued

ಕುಮಟಾ: ನವೆಂಬರ್‌ 18-19ರಂದು ಡಾ.ಎ.ವಿ ಬಾಳಿಗಾ ವಾಣಿಜ್ಯ ಕಾಲೇಜಿಗೆ ನ್ಯಾಕ್ ಸಮಿತಿ

ಕುಮಟಾ; ರಾಜ್ಯದ ಪ್ರತಿಷ್ಠಿತ ಮಹಾವಿದ್ಯಾಲಯದಲ್ಲಿ ಒಂದಾಗಿರುವ ಕುಮಟಾದ ಕೆನರಾ ಕಾಲೇಜು ಸೊಸೈಟಿಯ ಡಾ.ಎ.ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪರಿವೀಕ್ಷಣೆಗಾಗಿ ನ್ಯಾಕ್ ಸಮಿತಿಯು ಆಗಮಿಸಲಿದೆ. ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯವು ನ್ಯಾಕ್ ಮೌಲ್ಯಮಾಪನ ಮತ್ತು ಮರು-ಮಾನ್ಯತೆ ಪ್ರಕ್ರಿಯೆಗೆ ಒಳಪಡುತ್ತಿದ್ದು ನವೆಂಬರ್‌ ೧೮ ಮತ್ತು ೧೯ ೨೦೨೧ರಂದು ನ್ಯಾಕ್ ಸಮಿತಿಯ ಸದಸ್ಯರು ಮಹಾವಿದ್ಯಾಲಯಕ್ಕೆ ತಮ್ಮ ನಿಯೋಜಿತ … Continued

ಉಪನ್ಯಾಸಕರ ಪಾಠವು ಪ್ರೇರಣೆಯಾದಾಗ ಮಾತ್ರ ವಿದ್ಯಾಥಿಗಳಲ್ಲಿ ಜ್ಞಾನದ ಮಟ್ಟ ಹೆಚ್ಚಿಸಲು ಸಾಧ್ಯ; ಪ್ರೊ..ನಿಟ್ಟೂರ್

ಕುಮಟಾ; ವಿಷಯಗಳ ಆಳ ಜ್ಞಾನದೊಂದಿಗೆ ಕಲಾತ್ಮಕ ಬೋಧನೆಯಿಂದ ಉಪನ್ಯಾಸಕರು ಪಾಠಮಾಡಬೇಕು .ಕಲಿಸುವಿಕೆಯು ಆಕರ್ಷಕವಾಗಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಇದ್ದಾಗ ಫಲಿತಾಂಶ ಗುಣಮಟ್ಟವು ಹೆಚ್ಚುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಪ್ರೊ..ಹನುಮಂತಪ್ಪ ನಿಟ್ಟೂರ್ ಹೇಳಿದರು. ಅವರು ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಮತ್ತು ಲೆಕ್ಕ ಶಾಸ್ತ್ರದ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, … Continued

ಕುಮಟಾ: ಉಪ್ಪಿನಪಟ್ಟಣದ ಕೆರೆ ಹೂಳಿನಲ್ಲಿ ಸಿಲುಕಿಕೊಂಡಿದ್ದ ಕಡವೆ ರಕ್ಷಣೆ, ವೀಕ್ಷಿಸಿ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಉಪ್ಪಿನಪಟ್ಟಣದ ಕೆರೆಯ ಕೆಸರಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಕಡವೆಯೊಂದನ್ನು ಅರಣ್ಯ ‌ಇಲಾಖೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಸುಮಾರು ನಾಲ್ಕು ವರ್ಷದ ಕಡವೆ ಇದಾಗಿದ್ದು ಕಾಡಿನಿಂದ ತೋಟಕ್ಕೆ ಬಂದು ನೀರಿನ ದಾಹ ತೀರಿಸಿಕೊಳ್ಳಲು ಕೆರೆಗೆ ಇಳಿದಿತ್ತು .ಆದರೆ ಕೆರೆಯಲ್ಲಿ ಹೂಳು ತುಂಬಿದ್ದರಿಂದ ಕೆಸರಲ್ಲಿ … Continued

ಕುಮಟಾದಲ್ಲಿ ದೂರವಾದ ಬಾಂಬ್‌ ಆತಂಕ ;ಜನತೆ ನಿಟ್ಟುಸಿರು

ಕಾರವಾರ : ಉತ್ತರ ಕನ್ನಡ ಜಿಲ್ಲೆ ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಹಿಂಬದಿ ಆವರಣದಲ್ಲಿ ಬಾಂಬ್ ಮಾದರಿ ವಸ್ತು ಪತ್ತೆಯಾದ ಬೆನ್ನಲ್ಲೇ ಮಂಗಳೂರಿನಿಂದ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದವರು ತಪಾಸಣೆ ನಡೆಸಿ ವಸ್ತುವನ್ನು ನಿಷ್ಕ್ರಿಯ ಗೊಳಿಸಿದ್ದಾರೆ‌. ಹಾಗೂ ಇದು ಬಾಂಬ್‌ ಅಲ್ಲ, ಅದೇ ಮಾದರಿಯಲ್ಲಿರುವ ವಸ್ತು ಎಂದು ತಿಳಿಸಿದ್ದಾರೆ. ನಗರದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜು ಹಿಂಬದಿ … Continued

ಕುಮಟಾ ಪಾಲಿಟೆಕ್ನಿಕ್‌ ಕಾಲೇಜ್‌ ಹಿಂಭಾಗದಲ್ಲಿ ಬಾಂಬ್‌ ಮಾದರಿ ವಸ್ತು ಪತ್ತೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದಲ್ಲಿ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ಕಾಲೇಜಿನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸಂಜೆಯ ವಾಯು ವಿಹಾರಕ್ಕೆ ಬಂದಿರುವ ಕೆಲವು ಜನರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು ನೋಡಲು ಬಾಂಬಿಗೆ ಇರುವ ಮಾದರಿಯಲ್ಲಿ … Continued

ಕುಮಟಾ :ಕುಡಿತದ ಅಮಲಿನಲ್ಲಿ ಕತ್ತಿಯಿಂದ ತಂದೆಯನ್ನೇ ಕಡಿದು ಸಾಯಿಸಿದ ಮಗ

ಕುಮಟಾ : ಕುಡಿದ ಅಮಲಿನಲ್ಲಿ ಮಗನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಸಂತೆಗುಳಿಯ ಕುಳ್ವೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. 31 ವರ್ಷದ ಶ್ರೀಕಾಂತ ರಾಮಚಂದ್ರ ಗೌಡನೇ ಕೊಲೆ ಮಾಡಿದ ಆರೋಪಿ, ಮೃತ ತಂದೆಯನ್ನು ರಾಮಚಂದ್ರ ಕುಪ್ಪು ಗೌಡ (55 ವರ್ಷ) ಎಂದು ಗುರುತಿಸಲಾಗಿದೆ. … Continued

ಗೋಕರ್ಣ: ಈಜಲು ಸಮುದ್ರಕ್ಕೆ ಇಳಿದ ಬೆಂಗಳೂರಿನ ಯುವಕ ನಾಪತ್ತೆ

ಕುಮಟಾ: ಸಮುದ್ರದಲ್ಲಿ ಈಜಲು ಹೋಗಿದ್ದ ಪ್ರವಾಸಿಗನೊಬ್ಬ ಸಮುದ್ರದಲ್ಲಿ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ನಾಪತ್ತೆಯಾದ ಯುವಕನನ್ನು ಬೆಂಗಳೂರು ಮೂಲದ ರವಿ ನಂದನ್ (23) ಎಂದು ಗುರುತಿಸಲಾಗಿದೆ. ಆತನ ಪತ್ತೆಗಾಗಿ ಹುಡುಕಾಟ ನಡೆದಿದೆ. ಭಾನುವಾರ ಬೆಂಗಳೂರಿನಿಂದ ಐದು ಜನ ಯುವಕರು ಪ್ರವಾಸಕ್ಕೆಂದು ಗೋಕರ್ಣಕ್ಕೆ … Continued