ಕೂಜಳ್ಳಿ: ನಾಳೆ ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಸಂಗೀತ ಕಾರ್ಯಕ್ರಮ

ಕುಮಟಾ: ಪಂಡಿತ ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಸಂಗೀತ ಕಾರ್ಯಕ್ರಮ ಕುಮಟಾ ತಾಲೂಕಿನ ಕೂಜಳ್ಳಿ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಡಿ. 25ರಂದು ಅಪರಾಹ್ನ 3. ಗಂಟೆಯಿಂದ 8ರ ವರೆಗೆ ಪಂ. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ನಡೆಯಲಿದೆ.
ನಾದ ನಮನ ಕಾರ್ಯಕ್ರಮದಲ್ಲಿ ಶ್ರೀಪಾದ ಹೆಗಡೆ ಸೋಮನಮನೆ, ಶ್ರೀಧರ ಹೆಗಡೆ ಕಲ್ಭಾಗ, ಶ್ರೀಲತಾ ಗುರುರಾಜ ಆಡುಕಳ ಅವರಿಂದ ಗಾಯನ, ಈಶ್ವರ ಶಾಸ್ತ್ರಿ ಬೋಳ್ತಟ್ಟೆ ಅವರಿಂದ ಕೊಳಲು ವಾದನ ನಡೆಯಲಿದೆ.
ತಬಲಾದಲ್ಲಿ ಎನ್.ಜಿ. ಅನಂತಮೂರ್ತಿ ಗುಣವಂತೆ, ಶಂತನು ಶುಕ್ಲ ಮುಂಬೈ, ಗುರುರಾಜ ಹೆಗಡೆ ಆಡುಕಳ, ಅಕ್ಷಯ ಭಟ್ಟ ಹಂಸಳ್ಳಿ ಸಹಕರಿಸುವರು. ಸಂವಾದಿನಿಯಲ್ಲಿ ಗೌರೀಶ ಯಾಜಿ ಕೂಜಳ್ಳಿ, ಅಜೇಯ ಹೆಗಡೆ ಶಿರಸಿ ಸಾಥ್ ನೀಡುವರು.
ನುಡಿ ನಮನ ಕಾರ್ಯಕ್ರಮದಲ್ಲಿ ಎಮ್ ಟಿ ಎನ್ ಎಲ್ ನಿವೃತ್ತ ಜಿಡಿಎಂ ರಮೇಶ ಎಸ್. ಹೆಗಡೆ, ಕೂಜಳ್ಳಿ ಸ್ವರ ಸಂಗಮದ ಅಧ್ಯಕ್ಷ ಸುಬ್ರಾಯ ಜಿ. ಭಟ್ಟ, ಚಾರ್ಟರ್ಡ್ ಎಕೌಂಟಂಟ್ ವಿನಾಯಕ ಹೆಗಡೆ ಪಾಲ್ಗೊಳ್ಳುವರು. ಪಂ. ಷಡಕ್ಷರಿ ಗವಾಯಿ ಅಕಾಡೆಮಿ ಅಧ್ಯಕ್ಷ ವಸಂತರಾವ್ ಅಧ್ಯಕ್ಷತೆ ವಹಿಸುವರು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement