ಕುಮಟಾ: ನವೆಂಬರ್‌ 18-19ರಂದು ಡಾ.ಎ.ವಿ ಬಾಳಿಗಾ ವಾಣಿಜ್ಯ ಕಾಲೇಜಿಗೆ ನ್ಯಾಕ್ ಸಮಿತಿ

ಕುಮಟಾ; ರಾಜ್ಯದ ಪ್ರತಿಷ್ಠಿತ ಮಹಾವಿದ್ಯಾಲಯದಲ್ಲಿ ಒಂದಾಗಿರುವ ಕುಮಟಾದ ಕೆನರಾ ಕಾಲೇಜು ಸೊಸೈಟಿಯ ಡಾ.ಎ.ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪರಿವೀಕ್ಷಣೆಗಾಗಿ ನ್ಯಾಕ್ ಸಮಿತಿಯು ಆಗಮಿಸಲಿದೆ.
ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯವು ನ್ಯಾಕ್ ಮೌಲ್ಯಮಾಪನ ಮತ್ತು ಮರು-ಮಾನ್ಯತೆ ಪ್ರಕ್ರಿಯೆಗೆ ಒಳಪಡುತ್ತಿದ್ದು ನವೆಂಬರ್‌ ೧೮ ಮತ್ತು ೧೯ ೨೦೨೧ರಂದು ನ್ಯಾಕ್ ಸಮಿತಿಯ ಸದಸ್ಯರು ಮಹಾವಿದ್ಯಾಲಯಕ್ಕೆ ತಮ್ಮ ನಿಯೋಜಿತ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಕ್ ಸಮಿತಿಯ ಚೇರ್ಮನ್‌ ಹಾಗೂ ಕೋಲ್ಕತ್ತಾ ಸೀಕೊಮ್ ಸ್ಕಿಲ್ ಯುನಿವರ್ಸಿಟಿ ನಿವೃತ್ತ ಉಪಕುಲಪತಿ ಡಾ. ರಘುನಾಥ ದತ್ತ, ಮೆಂಬರ್ ಕೋಆರ್ಡಿನೇಟರ್ ಆಗಿರುವ ವಾರಾಣಸಿ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ ವಾಣಿಜ್ಯ ವಿಭಾಗದ ಪ್ರೊಫೆಸರ್ ಡಾ. ಕೆ. ಕೆ. ಅಗ್ರವಾಲ ಹಾಗೂ ಸದಸ್ಯರಾದ ಅಮರಾವತಿ ಶ್ರೀಮತಿ ಕೇಶರಬಾಯಿ ಲಹೋತಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿಜಯಕುಮಾರ ಭಾಂಗಡಿ ಆಗಮಿಸಲಿದ್ದಾರೆ.
ಅವರು ಕಾಲೇಜಿನ ಸಿಬ್ಬಂದಿ, ಆಡಳಿತ ಮಂಡಳಿಯವರು, ವಿದ್ಯಾರ್ಥಿಗಳು, ಪಾಲಕರು ಹಾಗೂ ಪೂರ್ವವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಪ್ರಗತಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಪ್ರಾಚಾರ್ಯ ಡಾ. ಎಸ್. ವಿ. ಶೇಣ್ವಿ ತಿಳಿಸಿದ್ದಾರೆ.
ಕೆನರಾ ಕಾಲೇಜು ಸೊಸೈಟಿ ಕಾರ್ಯಾಧ್ಯಕ್ಷರು ಡಿ. ಎಂ. ಕಾಮತ, ಕಾರ್ಯದರ್ಶಿ ಸುಧಾಕರ ನಾಯಕ, ಪ್ರೊ. ಎನ್. ಜಿ. ಹೆಗಡೆ, ನ್ಯಾಕ್ ಸಂಯೋಜಕ ಪ್ರೊ..ಎಸ್. ಡಿ. ಬುಳ್ಳಾ, ಆಯ್‌ಕ್ಯೂಎಸಿ ಸಂಯೋಜಕ ಪ್ರೊ. ಸಂತೋಷ ಶಾನಭಾಗ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement