ಅರಬ್ಬಿ ಸಮುದ್ರದಲ್ಲಿ ಅಬ್ಬರಿಸಲಿದೆ ‘ತೇಜ್’ ಚಂಡಮಾರುತ : ಇದರಿಂದ ಭಾರತಕ್ಕೇನು ತೊಂದರೆ ?

ನವದೆಹಲಿ : ಅರಬ್ಬಿ ಸಮುದ್ರದಲ್ಲಿ ಈ ವರ್ಷದ 2ನೇ ಚಂಡ ಮಾರುತ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದ ನೈರುತ್ಯ ಹಾಗೂ ಆಗ್ನೇಯ ಭಾಗಗಳಲ್ಲಿ ಶುರುವಾಗಿರುವ ಈ ಚಂಡಮಾರುತಕ್ಕೆ ‘ತೇಜ್’ ಎಂದು ಹೆಸರಿಡಲಾಗಿದೆ. ಅರಬ್ಬಿ ಸಮುದ್ರದ ನೈರುತ್ಯ ಹಾಗೂ ಆಗ್ನೇಯ ಭಾಗಗಳಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಈ ಚಂಡಮಾರುತ ಸೃಷ್ಟಿಯಾಗಿದೆ. ಸದ್ಯ ಚಂಡಮಾರುತ ಒಮನ್ ದೇಶದ ದಕ್ಷಿಣ ತೀರ ಹಾಗೂ ಯೆಮನ್ ದೇಶಗಳತ್ತ ಸಾಗುತ್ತಿದ್ದು, ಕೆಲವೇ ದಿನಗಳಲ್ಲಿ ತೀವ್ರತೆ ಪಡೆದುಕೊಳ್ಳಲಿದೆ ಎಂದು ಹೇಳಲಾಗಿದೆ. ಆದರೆ ಅರಬ್ಬಿ ಸಮುದ್ರದ ಕೇಂದ್ರ ಭಾಗದಲ್ಲಿ ಉಂಟಾಗಿರುವ ಈ ಚಂಡಮಾರುತ ಯೆಮನ್ ಹಾಗೂ ಒಮನ್‌ನ ವಿರುದ್ಧ ದಿಕ್ಕಿನಲ್ಲಿ ಸಾಗಿದರೆ ಅದು ಭಾರತದತ್ತ ಧಾವಿಸುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಶನಿವಾರ ಬೆಳಗ್ಗೆ ವೇಳೆಗೆ ತೇಜ್ ಚಂಡಮಾರುತ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಇದೆ.  ಸದ್ಯದ ಮಟ್ಟಿಗೆ ಈ ಚಂಡ ಮಾರುತ ಯೆಮನ್ ಹಾಗೂ ಒಮನ್ ಕಡಲ ತೀರಗಳತ್ತ ಸಾಗುತ್ತಿದೆಯಾದರೂ ಯಾವುದೇ ಕ್ಷಣದಲ್ಲೂ ಚಂಡಮಾರುತದ ದಿಕ್ಕು ಬದಲಾಗುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಮುಂಬೈ : ಧೂಳಿನ ಬಿರುಗಾಳಿಗೆ 100 ಅಡಿ ಎತ್ತರದ ಬೃಹತ್‌ ಹೋರ್ಡಿಂಗ್ ಬಿದ್ದು 8 ಮಂದಿ ಸಾವು, 64 ಜನರಿಗೆ ಗಾಯ

ಇದು 2023ರಲ್ಲಿ ಅರಬ್ಬಿ ಸಮುದ್ರದಲ್ಲಿ ಸಂಭವಿಸುತ್ತಿರುವ ಎರಡನೇ ಚಂಡಮಾರುತವಾಗಿದೆ.  ಶನಿವಾರ ಸಂಜೆ ಹಾಗೂ ಭಾನುವಾರದ ವೇಳೆಗೆ ಈ ಚಂಡ ಮಾರುತ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಅಂದಾಜಿಸಿದೆ. ಒಮನ್‌ನ ದಕ್ಷಿಣ ಕಡಲ ತೀರದಿಂದ ಯೆಮನ್ ದೇಶಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ.

ಕೆಲವೊಮ್ಮೆ ಚಂಡ ಮಾರುತಗಳು ತಮ್ಮ ದಿಕ್ಕನ್ನು ಬದಲಿಸುವ ಸಾಧ್ಯತೆ ಇರುತ್ತದೆ.  ಸದ್ಯದ ಅಂದಾಜುಗಳ ಪ್ರಕಾರ ಭಾರತ ಉಪಖಂಡಕ್ಕೆ ಈ ಚಂಡಮಾರುತದ ಭೀತಿ ಇಲ್ಲವಾದರೂ ಚಂಡ ಮಾರುತದ ದಿಕ್ಕು ಮುಂದಿನ ದಿನಗಳಲ್ಲಿ ಯಾವ ಕಡೆಗೆ ಬದಲಾಗುತ್ತದೆ ಎಂದು ಅಂದಾಜು ಮಾಡುವುದು ಕಷ್ಟ. ಏಕೆಂದರೆ, ಕಳೆದ ಜೂನ್‌ನಲ್ಲೂ ಇದೇ ಸನ್ನಿವೇಶ ನಿರ್ಮಾಣವಾಗಿತ್ತು. ಅರಬ್ಬಿ ಸಮುದ್ರದಲ್ಲಿ ವಾಯು ಭಾರ ಕುಸಿತ ಉಂಟಾಗಿದ್ದ ಕಾರಣ ಬಿಪರ್‌ಜಾಯ್ ಚಂಡ ಮಾರುತ ಸೃಷ್ಟಿಯಾಗಿತ್ತು. ಈ ಚಂಡ ಮಾರುತ ಅರಬ್ಬಿ ಸಮುದ್ರದ ಉತ್ತರ ಹಾಗೂ ವಾಯುವ್ಯ ದಿಕ್ಕಿನತ್ತ ಸಾಗಲಿದೆ ಎಂದು ಹೇಳಲಾಗಿತ್ತು. ಆದರೆ ಚಂಡ ಮಾರುತದ ದಿಕ್ಕು ಬದಲಾವಣೆ ಮಾಡಿತ್ತು. ಗುಜರಾತ್ ರಾಜ್ಯದ ಮಾದ್ವಿ ಹಾಗೂ ಪಾಕಿಸ್ತಾನದ ಕರಾಚಿ ನಡುವೆ ಈ ಚಂಡಮಾರುತ ಅಪ್ಪಳಿಸಿತ್ತು. ಹೀಗಾಗಿ, ಪಾಕಿಸ್ತಾನದ ಕರಾಚಿ, ಭಾರತದ ಗುಜರಾತ್, ರಾಜಸ್ಥಾನ ರಾಜ್ಯಗಳಲ್ಲಿ ಭಾರೀ ಮಳೆ ಆಗಿತ್ತು.

ಪ್ರಮುಖ ಸುದ್ದಿ :-   ಬಿಜೆಪಿ ಹಿರಿಯ ನಾಯಕ- ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲಕುಮಾರ ಮೋದಿ ನಿಧನ

ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಯಾದ ಸ್ಕೈ ಮ್ಯಾಟ್ ಸಹ, ತನ್ನ ಹಲವು ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿ ತೇಜ್ ಚಂಡ ಮಾರುತವು ಯೆಮನ್ ಹಾಗೂ ಒಮನ್ ದೇಶಗಳ ಕರಾವಳಿಗೇ ಅಪ್ಪಳಿಸಲಿದೆ ಎಂದು ಅಂದಾಜಿಸಿದೆ.ಆದರೆ ಜಾಗತಿಕ ಹವಾಮಾನ ಮುನ್ಸೂಚನಾ ವ್ಯವಸ್ಥೆಗಳು ಬೇರೆ ರೀತಿ ಅಂದಾಜು ಮಾಡಿವೆ.  ತೇಜ್ ಚಂಡ ಮಾರುತ ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿ ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಒಮನ್ ಹಾಗೂ ಯೆಮನ್ ದೇಶಗಳ ವಿರುದ್ಧ ದಿಕ್ಕಿನಲ್ಲಿರುವ ಪಾಕಿಸ್ತಾನದ ಕರಾಚಿ ಹಾಗೂ ಗುಜರಾತ್ ಬಂದರಿನತ್ತ ತಿರುವು ಪಡೆಯುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement