ಹೊನ್ನಾವರ: ಮತ್ತೊಂದು ಬೃಹತ್‌ ಮೀನಿನ ಕಳೆಬರ ಪತ್ತೆ.. ಇದು ಡಾಲ್ಫಿನ್‌ ಮೀನು…!

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಸಮುದ್ರ ದಂಡೆಯಲ್ಲಿ ಅಳವಿನಂಚಿನಲ್ಲಿರುವ ಮತ್ತೊಂದು ಮೀನಿನ ಕಳೆಬರ ಭಾನುವಾರ ಪತ್ತೆಯಾಗಿದೆ. ಈ ಬಾರಿ ತಿಮಿಂಗಿಲವಲ್ಲ, ಬದಲಿಗೆ ಅಳಿವಿನಂಚಿನಲ್ಲಿರುವ  ಡಾಲ್ಫಿನ್‌ನ ಮೃತ ದೇಹ ಭಾನುವಾರ ಪತ್ತೆಯಾಗಿದೆ.
ಡಾಲ್ಫಿನ್‌ ಮೀನು ಸುಮಾರು ಮೂರು ಮೀಟರ್ ಗಳಷ್ಟು ಉದ್ದವಿದ್ದು 75-80 ಕೆ.ಜಿ.ಯಷ್ಟು ತೂಕವಿರಬಹುದೆಂದು ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆ ಸೋಮವಾರ ನಡೆಯಲಿದ್ದು ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಹೊನ್ನಾವರದಲ್ಲಿ ಕಳೆದ 8-10 ದಿನಗಳಿಂದ ಈಚೆಗೆ ಮೂರು ಬೃಹತ್‌ ಮೀನುಗಳು ಪತ್ತೆಯಾಗಿವೆ. ಮೂರರಲ್ಲಿ ಎರಡು ಬಲೀನ್‌ ತಿಮಿಂಗಿಲಗಳಾದರೆ ಒಂದು ಡಾಲ್ಫಿನ್‌ ಮೀನಾಗಿದೆ. ಕಾರಣ ಮಾತ್ರ ನಿಗೂಢವಾಗಿದೆ. ಇದು ಹವಾಮಾನ ಬದಲಾವಣೆಯಿಂದ ಮೃತಪಡುತ್ತಿವೆಯೋ ಅಥವಾ ಸಂತಾನೋತ್ಪತ್ತಿಗೆ ಬಂದಾಗ ದಡದಿಂದ ಸಮುದ್ರಕ್ಕೆ ಹೋಗಲಾಗದೆ ಮೃತಪಡುತ್ತಿವೆಯೋ ಅಥವಾ ಬೋಟ್‌ಗಳಿಗೆ ಸಿಲುಕಿ ಮೃತಪಡುತ್ತಿವೆಯೋ ಎಂಬುದು ಗೊತ್ತಾಗಿಲ್ಲ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement