ಶೋಭಾ ಕರಂದ್ಲಾಜೆ ಕಾರಿಗೆ ಬೈಕ್ ಡಿಕ್ಕಿ : ಸವಾರ ಸಾವು

ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಕಾರಿಗೆ ಬೈಕ್ ಡಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟ ಘಟನೆ ಇಂದು, ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ಕೆ.ಆರ್. ಪುರದ ಗಣೇಶ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಮೃತನನ್ನು ಪ್ರಕಾಶ (35) ಎಂದು ಗುರುತಿಸಲಾಗಿದೆ. ನಿಂತಿದ್ದ ಕಾರಿನ ಡೋರ್ ಒಪನ್ ಮಾಡುತ್ತಿದ್ದಾಗ ಬೈಕ್ … Continued

ಚುನಾವಣಾ ಆಯೋಗದ ಸೂಚನೆ : ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು : ತಮಿಳುನಾಡಿನಿಂದ ಬಂದು ಬೆಂಗಳೂರಲ್ಲಿ ಬಾಂಬ್ ಇಡುತ್ತಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ. ಬೆಂಗಳೂರಿನಲ್ಲಿ ಪ್ರತಿಭಟನೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿ ಚುನಾವಣ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದ ಆರೋಪದ ಮೇಲೆ ಶೋಭಾ ವಿರುದ್ಧ ಡಿಎಂಕೆ ಪಕ್ಷವು ಚುನಾವಣಾ ಆಯೋಗಕ್ಕೆ ಕ್ರಮ ಕೈಗೊಳ್ಳುವಂತೆ … Continued

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್ ದಾಖಲು

ಚೆನ್ನೈ/ ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತಮಿಳುನಾಡಿನ ಜನರು ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೀಡಿದ ಹೇಳಿಕೆ ವಿರುದ್ಧ ಡಿಎಂಕೆ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಅಲ್ಲದೆ, ತಮಿಳುನಾಡಿನ ಮಧುರೈ ನಗರ ಸೈಬರ್ ಕ್ರೈಂ ಪೊಲೀಸರೂ ಕೂಡಾ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿದ್ಧಾರೆ. ತಮಿಳುನಾಡಿನ ಆಡಳಿತಾರೂಢ ಡಿಎಂಕೆ … Continued

ಕರ್ನಾಟಕದಲ್ಲಿ ಅತಿವೃಷ್ಟಿ, ಕೇಂದ್ರದಿಂದ 629 ಕೋಟಿ ರೂ. ಪರಿಹಾರ ಅನುಮೋದನೆ: ಸಚಿವೆ ಕರಂದ್ಲಾಜೆ

ಉಡುಪಿ: ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 2020ರಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ಸಂಬಂಧಪಟ್ಟು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 629.03 ಕೋಟಿ ರೂಪಾಯಿ ಅನುಮೋದನೆ ನೀಡಿದೆ ಎಂದು ಕೇಂದ್ರದ ಕೃಷಿ- ರಾಜ್ಯ ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಹಾರಾಷ್ಟ್ರಕ್ಕೆ 701 ಕೋಟಿ ರೂ.ಗಳ ನೆರವಿನ ಅನುಮೋದನೆಯನ್ನು ಎಸ್‌ಡಿಆರ್‌ಎಫ್ … Continued

ಕುವೈತ್‌ನಲ್ಲಿ ಸಿಲುಕಿದ್ದ ತಾಯಿ-ಮಗುವಿನ ಮಂಗಳೂರು ಪ್ರಯಾಣಕ್ಕೆ 10 ನಿಮಿಷದೊಳಗೆ ವ್ಯವಸ್ಥೆ ಮಾಡಿಸಿದ ಸಚಿವೆ ಶೋಭಾ

ಮಂಗಳೂರು: ಸಮಯಕ್ಕೆ ಸರಿಯಾಗಿ ವಿದೇಶಾಂಗ ಸಚಿವಾಲಯ(ಎಂಇಎ) ನೆರವಾಗಿದ್ದರಿಂದ ಮಹಿಳೆ ಮತ್ತು ಆಕೆಯ ಆರು ತಿಂಗಳ ಮಗು ಕುವೈತ್‌ನಿಂದ ಮಂಗಳೂರಿಗೆ ಬರಲು ವಿಮಾನ ಏರುವಂತಾಗಿದೆ. ಶನಿವಾರ ಸಂಜೆ ಕೋವಿಡ್ ಮಾರ್ಗಸೂಚಿಯಲ್ಲಿನ ಕೆಲ ಗೊಂದಲಗಳಿಂದಾಗಿ ತಾಯಿ ಮತ್ತು ಮಗು ಸ್ವದೇಶಕ್ಕೆ ವಾಪಸ್ಸಾಗಲು ಅಡ್ಡಿಯಾಗಿತ್ತು. ಕುವೈತ್ ನಲ್ಲಿ ಪತಿ ಜತೆಗಿದ್ದ ಕುಂಟಿಕಾನ ನಿವಾಸಿ ಅದಿತಿ ಸುದೇಶ್ ನಾಯಕ್ ತಮ್ಮ ಬೆನ್ನಮೂಳೆಯ … Continued

ಮಹಿಳಾ ಸಬಲೀಕರಣ, ಸಮಗ್ರ ಭಾರತದ ಅಭಿವೃದ್ಧಿ ನನ್ನ ಗುರಿ

posted in: ರಾಜ್ಯ | 0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಕಾಯ್ದಿರಿಸುವ ಮೂಲಕ ರಾಜಕೀಯದಲ್ಲಿನ ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸುತ್ತಿದ್ದಾರೆ. ರಾಜಕೀಯದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಇದು ಮಹಿಳೆಯರ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ … Continued