ಮೈ ಜುಂ ಎನ್ನುವ ವೀಡಿಯೊ..| ಬೈಕ್‌ ಸವಾರನನ್ನು ನುಂಗಿದ ರಸ್ತೆ ಮಧ್ಯೆ ಇದ್ದಕ್ಕಿದ್ದಂತೆ ಸೃಷ್ಟಿಯಾದ ದೊಡ್ಡ ಕುಳಿ, ಬೌನ್ಸ್‌ ಆಗಿ ಪಾರಾದ ಕಾರು…!

ಆಘಾತಕಾರಿ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಬೈಕು ಸಿಂಕ್‌ ಹೋಲ್‌ಗೆ ಕಣ್ಮರೆಯಾಗುವ ಭಯಾನಕ ದೃಶ್ಯ ಈ ವೀಡಿಯೊದಲ್ಲಿ ಸೆರೆಯಾಗಿದೆ. . ಈ ಭೀಕರ ಅಪಘಾತವು ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದೆ ಎಂದು ಹೇಳಲಾಗಿದ್ದು, ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾದ ದೊಡ್ಡ ಕುಳಿ ಮೋಟಾರ್ಸೈಕ್ಲಿಸ್ಟ್‌ ಅನ್ನು ನುಂಗಿದ ಘಟನೆ ನಡೆದು 18 ಗಂಟೆಗಳ ನಂತರ ತೀವ್ರವಾಗಿ ಗಾಯಗೊಂಡಿದ್ದ ಸವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ. … Continued

ವೀಡಿಯೊ…| ಸ್ಕೂಟರಿಗೆ ಡಿಕ್ಕಿ ಹೊಡೆದ ನಂತರ ಅದನ್ನು 11 ಕಿಮೀ ಎಳೆದೊಯ್ದ ಕಾರು ; ರಸ್ತೆಯಲ್ಲಿ ಕಿಡಿಯೋ ಕಿಡಿ…

ಲಕ್ನೋ: ವೇಗವಾಗಿ ಬಂದ ಎಸ್ ಯುವಿ ಡಿಕ್ಕಿ ಹೊಡೆದ ನಂತರ ಸ್ಕೂಟರ್ ಅನ್ನು ಎಳೆದುಕೊಂಡು ಹೋಗುತ್ತಿರುವ ಆಘಾತಕಾರಿ ವೀಡಿಯೊ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ವೀಡಿಯೊದಲ್ಲಿ ಕಾರು ಸ್ಕೂಟರ್‌ ಅನ್ನು ಎಳೆದೊಯ್ಯುತ್ತಿರುವಾಗ ಕಿಡಿಯನ್ನು ಹೊರಸೂಸುತ್ತಿರುವುದನ್ನು ಕಾಣಬಹುದು. ಘಟನೆ ಭಾನುವಾರ ನಡೆದಿದ್ದು, ಕಾರು ಚಲಾಯಿಸುತ್ತಿದ್ದ ವ್ಯಕ್ತಿಯನ್ನು ವಾರಾಣಸಿ ನಿವಾಸಿಯಾಗಿರುವ ಇಂಜಿನಿಯರ್ ಬ್ರಜೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಘಟನೆ … Continued

ವೀಡಿಯೊ | ಮಂಗಳೂರು : ಕಾರು ಗುದ್ದಿಸಿ ಯುವಕನ ಕೊಲ್ಲಲು ಯತ್ನ, ಆದರೆ ಡಿಕ್ಕಿಯಾಗಿ ಕಾಂಪೌಂಡಿನಲ್ಲಿ ತಲೆಕೆಳಗಾಗಿ ನೇತಾಡಿದ ಮಹಿಳೆ…!

ಮಂಗಳೂರು : ಬಿಎಸ್‌ಎನ್‌ಎಲ್‌ (BSNL) ನಿವೃತ್ತ ಉದ್ಯೋಗಿಯೊಬ್ಬರು ತಮ್ಮ ಕಾರನ್ನು ತಮ್ಮ ಪಕ್ಕದವ ಮನೆಯವರ ಮೋಟರ್‌ ಬೈಕ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿ ಕೊಲ್ಲು ಪ್ರಯತ್ನಕ್ಕೆ ಮುಂದಾಗಿದ್ದು, ಆದರೆ ಅದರ ಬದಲು ಸಮೀಪ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಮಹಿಳೆ ಕಾಂಪೌಂಡ್​ ಮೇಲೆ ನೇತಾಡಿದ್ದಾರೆ. ಈ ಎದೆ ಝಲ್ ಎನಿಸುವಂಥ ಭೀಕರ … Continued

ಹಿರಿಯೂರು ಬಳಿ ಅಪಘಾತ ; ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ

ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ಶುಕ್ರವಾರ (ಮಾರ್ಚ್‌ 14) ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ. ಜವನಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರಿನಿಂದ ಕೆಳಗಿಳಿದು ನಿಂತಿದ್ದ ರುದ್ರಪ್ಪ ಲಮಾಣಿ ಅವರಿಗೆ ಬೈಕ್​ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬೈಕ್​ ಡಿಕ್ಕಿ … Continued

ವೀಡಿಯೊ…| ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಮಹಿಳೆ ಸಾವು ; ಕಿಂಚಿತ್ತೂ ಪಶ್ಚಾತ್ತಾಪ ಪಡದೆ ʼಇನ್ನೊಂದು ರೌಂಡ್‌ʼ ಎಂದು ಅರಚಾಡಿದ ವಿದ್ಯಾರ್ಥಿ…!

ವಡೋದರಾ: ಗುಜರಾತಿನ ವಡೋದರಾದ ಕರೇಲಿಬಾಗ್ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕುಡಿದ ಅಮಲಿನಲ್ಲಿದ್ದ ಯುವಕ ಕಾರು ಗುದ್ದಿಸಿ ಮಹಿಳೆ ಜೀವ ತೆಗೆದಿದ್ದರೂ ಕೂಡ ಪಶ್ಚಾತಾಪವಿಲ್ಲದೆ ದರ್ಪದಿಂದ ವರ್ತಿಸಿರುವ ವೀಡಿಯೊ ವೈರಲ್ ಆಗಿದೆ. ಪಾನಮತ್ತ ಚಾಲಕ ತನ್ನ ಕಾರನ್ನು ಬಹು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. … Continued

ಚಿಕ್ಕಬಳ್ಳಾಪುರ | ಖಾಸಗಿ ಬಸ್ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು; ತಾಯಿ, ಮಗನ ಸಜೀವ ದಹನ

ಚಿಕ್ಕಬಳ್ಳಾಪುರ: ಖಾಸಗಿ ಬಸ್ ಡಿಕ್ಕಿ ಹೊಡೆದ ನಂತರ ಕಾರು ಹೊತ್ತಿ ಉರಿದು ಇಬ್ಬರು ಸಜೀವ ದಹನವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗೇಟ್ ಬಳಿ ನಡೆದಿದೆ ಎಂದು ವರದಿಯಾಗಿದೆ. ಕಾರಿನಲ್ಲಿದ್ದ ಆಂಧ್ರ ಮೂಲದ ತಾಯಿ ಕಲಾವತಿ (54) ಹಾಗೂ ಕಾರು ಚಾಲನೆ ಮಾಡುತ್ತಿದ್ದ ಧನಂಜಯ (34) ಎಂಬವರು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ … Continued

ಚಿತ್ರದುರ್ಗ | ಲಾರಿಗೆ ಗುದ್ದಿದ ಇನ್ನೋವಾ ಕಾರು ; ಐವರು ಸಾವು

ಚಿತ್ರದುರ್ಗ: ಭೀಕರ ಅಪಘಾತದಲ್ಲಿ ಲಾರಿಗೆ ಕಾರು ಡಿಕ್ಕಿಯಾಗಿ ಐವರು ಸಾವಿಗೀಡಾದ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಸಿಬಾರ ಗ್ರಾಮದ ಬಳಿ ಭಾನುವಾರ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ಬಿಎಂಟಿಸಿ ನಿವೃತ್ತ ನೌಕರ ಶಾಂತಮೂರ್ತಿ(60), ವಿದ್ಯಾರಣ್ಯಪುರದ ರುದ್ರಸ್ವಾಮಿ(52), ಬೆಂಗಳೂರು ಉತ್ತರದ ಈರಣ್ಣ ಬಡಾವಣೆಯ ಮಲ್ಲಿಕಾರ್ಜುನ(50) ಹಾಗೂ ಚಿದಂಬರ (50) ಎಂದು ಗುರುತಿಸಲಾಗಿದೆ. ಮತ್ತೊಬ್ಬರು ಗುರುತು ಪತ್ತೆಯಾಗಬೇಕಿದೆ. ಕಾರಿನಲ್ಲಿದ್ದ … Continued

ವೀಡಿಯೊ…| ರಾತ್ರಿ ವೇಳೆ ಜೆಸಿಬಿ ಚಲಾಯಿಸಿ 25 ವಾಹನಗಳಿಗೆ ಡಿಕ್ಕಿ ಹೊಡೆಸಿದ 17 ವರ್ಷದ ಬಾಲಕ…! ವೀಕ್ಷಿಸಿ

ಮಧುರೈ (ತಮಿಳುನಾಡು): ಸೋಮವಾರ ಮುಂಜಾನೆ ಮಧುರೈ ನಗರದ ಸೆಲ್ಲೂರ್ ಪ್ರದೇಶದಲ್ಲಿ 17 ವರ್ಷದ ಬಾಲಕನೊಬ್ಬ ಜೆಸಿಬಿ ಅಗೆಯುವ ಯಂತ್ರವನ್ನು ಚಲಾಯಿಸಿ ಮೂರು ಆಟೋ ರಿಕ್ಷಾಗಳು, ಹಲವಾರು ಮೋಟಾರ್‌ಸೈಕಲ್‌ಗಳು, ಕಾರು ಸೇರಿದಂತೆ ಸುಮಾರು 25 ವಾಹನಗಳು, ಸೈನ್‌ಬೋರ್ಡ್‌ಗಳು ಮತ್ತು ಕಟ್ಟಡದ ಒಂದು ಭಾಗವನ್ನು ಜಖಂಗೊಳಿಸಿರುವ ವಿಲಕ್ಷಣ ಘಟನೆ ನಡೆದಿದೆ. ಜೆಸಿಬಿ ಅಗೆಯುವ ಯಂತ್ರವನ್ನು ಚಲಾಯಿಸಲು ಆರಂಭಿಸಿದ ಬಾಲಕ … Continued

ಕೋಲಾರ | ಇನ್ನೋವಾ ಕಾರು-ಬೈಕ್‌ ಡಿಕ್ಕಿ; ಮಗು ಸೇರಿ ನಾಲ್ವರು ಸಾವು

ಕೋಲಾರ: ಇನ್ನೋವಾ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿ ನಾಲ್ವರು ಸಾವಿಗೀಡಾದ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕುಪ್ಪನಹಳ್ಳಿ ಬಳಿಯ ನೂತನ ಚೆನ್ನೈ – ಬೆಂಗಳೂರು ಕಾರಿಡಾರ್ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಅಪಗಾತದಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ. ಮಹೇಶ (45), ಉದ್ವಿತಾ (3), ರತ್ನಮ್ಮ … Continued

ಟಿಪ್ಪರ್ – ಕಾರಿನ ನಡುವೆ ಡಿಕ್ಕಿ: ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಐವರು ಸಾವು

ಚಾಮರಾಜನಗರ: ಟಿಪ್ಪರ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನಕ್ಕೆ ತೆರಳುತ್ತಿದ್ದ ಐವರು ಸಾವಿಗೀಡಾದ ಘಟನೆ ಕೊಳ್ಳೇಗಾಲ ತಾಲೂಕಿನ ಚಿಕ್ಕಿಂದುವಾಡಿ ರಸ್ತೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಮೈಸೂರಿನ ಶ್ರೀಲಕ್ಷ್ಮೀ, ಲಿಖಿತಾ, ಮಂಡ್ಯದ ಸುಹಾಸ್, ನಿತಿನ್ ಮತ್ತು ಶ್ರೇಯಸ್ ಮೃತಪಟ್ಟವರೆಂದು ತಿಳಿದುಬಂದಿದೆ. ಮೃತರೆಲ್ಲರೂ ಸ್ನೇಹಿತರಾಗಿದ್ದು, ಮಹಾಶಿವರಾತ್ರಿ ರಥೋತ್ಸವ … Continued