ʼಆಪರೇಷನ್ ಸಿಂಧೂರ’ ವೇಳೆ ಸಹಾಯ ಮಾಡಲು ಪಾಕ್ ವಾಯುನೆಲೆಗಳಲ್ಲಿದ್ದ ಚೀನಾ ತಜ್ಞರ ತಂಡ : ಮೊದಲ ಬಾರಿಗೆ ಒಪ್ಪಿಕೊಂಡ ಚೀನಾ !

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ವರ್ಷ ನಡೆದ ಸೇನಾ ಸಂಘರ್ಷದ ವೇಳೆ ತಾನು ಪಾಕಿಸ್ತಾನಕ್ಕೆ ನೇರವಾಗಿ ‘ಆನ್-ಸೈಟ್’ ತಾಂತ್ರಿಕ ನೆರವು ನೀಡಿದ್ದಾಗಿ ಚೀನಾ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಭಾರತವು ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ನಡೆಸಿದ್ದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಚೀನಾದ ತಜ್ಞರ ತಂಡವು ಪಾಕಿಸ್ತಾನ ಸೇನೆಗೆ ಬೆಂಬಲವಾಗಿ … Continued

ಭಾರತ-ಪಾಕಿಸ್ತಾನ ಯುದ್ಧದಲ್ಲಿ ನಾನು ಮಧ್ಯ ಪ್ರವೇಶಿಸದಿದ್ರೆ ಪಾಕ್ ಪ್ರಧಾನಿ ಸಾಯುತ್ತಿದ್ದರು ಎಂದು ಟ್ರಂಪ್ ಹೇಳಿದರೆ..? ವೀಡಿಯೊ ವೈರಲ್‌

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯ ‘ಸ್ಟೇಟ್ ಆಫ್ ದಿ ಯೂನಿಯನ್’ ಭಾಷಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಕುರಿತು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ನನ್ನ ಮಧ್ಯಸ್ಥಿಕೆ ಇಲ್ಲದಿದ್ದರೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಸಾಯುತ್ತಿದ್ದರು ಎಂದು 3.5 ಕೋಟಿ ಜನರು ಹೇಳುತ್ತಿದ್ದಾರೆ” ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಅಮೆರಿಕದ … Continued

ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡದ್ದಕ್ಕೆ ಭಾರತದ ಸರಕುಗಳ ಮೇಲೆ 50% ಸುಂಕ: ಜೆಫರೀಸ್

ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಕಂಪನಿ ಜೆಫರೀಸ್ ವರದಿಯ ಪ್ರಕಾರ, ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡದ ಕಾರಣ ಅಮೆರಿಕ ಭಾರತದ ಮೇಲೆ ಶೇ. 50 ರಷ್ಟು ಹೆಚ್ಚಿನ ಸುಂಕಗಳನ್ನು ವಿಧಿಸಿದೆ. ಟ್ರಂಪ್ ಅವರ “ವೈಯಕ್ತಿಕ ದ್ವೇಷ”ದ “ಪರಿಣಾಮ”ವಾಗಿದೆ. ಮತ್ತು ದಕ್ಷಿಣ ಏಷ್ಯಾದ ಎರಡು … Continued

ಭಾರತ ನಮ್ಮ ಸುದ್ದಿಗೆ ಬಂದ್ರೆ ಪರಮಾಣು ಬಾಂಬ್‌ ಹಾಕ್ತೇವೆ ; ಅರ್ಧ ಜಗತ್ತನ್ನೇ ನಾಶ ಮಾಡ್ತೇವೆ ; ಅಮೆರಿಕದಲ್ಲಿ ನಿಂತು ಭಾರತಕ್ಕೆ ಬೆದರಿಕೆ ಹಾಕಿದ ಪಾಕ್‌ ಸೇನಾ ಮುಖ್ಯಸ್ಥ…!

ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಮತ್ತೊಮ್ಮೆ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಈ ಬಾರಿ ಅಮೆರಿಕ ನೆಲದಿಂದ ಬಾರತಕ್ಕೆ ಬೆದರಿಕೆ ಹಾಕಿದ್ದಾರೆ. ಭವಿಷ್ಯದಲ್ಲಿ ಭಾರತದ ಜೊತೆ ಯುದ್ಧ ನಡೆದು ಪಾಕಿಸ್ತಾನಕ್ಕೆ ಅಸ್ತಿತ್ವದ ಬೆದರಿಕೆ ಎದುರಾದರೆ ಆಗ ಪಾಕಿಸ್ತಾನವು ಈ ಪ್ರದೇಶವನ್ನು ಪರಮಾಣು ಯುದ್ಧದಲ್ಲಿ ಮುಳುಗಿಸುತ್ತದೆ ಮತ್ತು “ಜಗತ್ತಿನ ಅರ್ಧದಷ್ಟನ್ನು” ನಾಶಪಡಿಸುತ್ತದೆ ಎಂದು ಬೆದರಿಕೆ ಹಾಕಿದ್ದಾರೆ … Continued

ಭಾರತ-ಪಾಕ್ ಕದನ ವಿರಾಮಕ್ಕೆ ಯಾವುದೇ ದೇಶ ಮಧ್ಯಸ್ಥಿಕೆ ವಹಿಸಿಲ್ಲ: ಸಂಸತ್ತಿಗೆ ತಿಳಿಸಿದ ಸರ್ಕಾರ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಕದನ ವಿರಾಮಕ್ಕೆ ಅಮೆರಿಕದ ಮಧ್ಯಪ್ರವೇಶ ಕಾರಣ ಎಂಬ ಹೇಳಿಕೆಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಲೋಕಸಭೆಯಲ್ಲಿನ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ, ವಿದೇಶಾಂಗ ಸಚಿವಾಲಯವು ಮೇ 10ರಂದು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವಿನ ನೇರ ಸಂಪರ್ಕದ ಫಲಿತಾಂಶವಾಗಿದೆ ಎಂದು ಹೇಳಿದೆ. ಲೋಕಸಭೆಯಲ್ಲಿ ಲಿಖಿತ ಉತ್ತರ … Continued

“ಪಾಕಿಸ್ತಾನ ನಮಗೆ ಹಾನಿ ಮಾಡಿದ ಒಂದೇ ಒಂದು ಫೋಟೋ ತೋರಿಸಿ”: ಅಪರೇಶನ್‌ ಸಿಂದೂರ ವೇಳೆ ವಿದೇಶಿ ಮಧ್ಯಮಗಳ ವರದಿಗಳ ಬಗ್ಗೆ ಅಜಿತ್ ದೋವಲ್

ಚೆನ್ನೈ: ಆಪರೇಷನ್ ಸಿಂಧೂರ ಬಗ್ಗೆ ವರದಿ ಮಾಡಿದ ರೀತಿಗೆ ವಿದೇಶಿ ಮಾಧ್ಯಮಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ದಾಳಿಯಿಂದ ಭಾರತದ ಸೇನಾ ಮೂಲಸೌಕರ್ಯಕ್ಕೆ ಆಗಿರುವ ಹಾನಿಗೆ ಒಂದೇ ಒಂದು ಪುರಾವೆ ನೀಡುವಂತೆ ಅವರು ವಿದೇಶಿ ಮಾಧ್ಯಮಗಳಿಗೆ ಸವಾಲು ಹಾಕಿದರು. ಐಐಟಿ ಮದ್ರಾಸ್‌ನ 62 ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅಜಿತ್ … Continued

ವೀಡಿಯೊ…| ತನ್ನ ವಾಯುನೆಲೆಗಳ ಮೇಲೆ ಭಾರತ ದಾಳಿ ನಡೆಸಿದ್ದನ್ನು ಕೊನೆಗೂ ಬಹಿರಂಗವಾಗಿ ಒಪ್ಪಿಕೊಂಡ ಪಾಕಿಸ್ತಾನ…!

ನವದೆಹಲಿ: ಆಪರೇಶನ್‌ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಭಾರತವು ತನ್ನ ಪ್ರಮುಖ ವಾಯುನೆಲೆಗಳ ಮೇಲಿನ ದಾಳಿ ನಡೆಸಿದೆ ಎಂದು ಪಾಕಿಸ್ತಾನವು ಮತ್ತೊಮ್ಮೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಭಾರತವು ಅಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ದೇಶದ ಗಮನಾರ್ಹ ವಾಯು ನೆಲೆಗಳು ಹಾನಿಗೊಳಗಾಗಿವೆ ಎಂದು ಪಾಕಿಸ್ತಾನ ದೃಢಪಡಿಸಿದೆ. ಪಾಕಿಸ್ತಾನದ ಉಪ ಪ್ರಧಾನಿ … Continued

ʼಆಪರೇಷನ್ ಸಿಂಧೂರʼ | ದೊಡ್ಡಮಟ್ಟದ ಹಾನಿಯಾಗಿದ್ದನ್ನು ಒಪ್ಪಿಕೊಂಡ ಪಾಕಿಸ್ತಾನ ; ಭಾರತ ಹೇಳಿದ್ದಕ್ಕಿಂತ ಇನ್ನೂ 8 ಕಡೆ ಹಾನಿ ಎಂದ ಪಾಕ್‌ ದಾಖಲೆ…!

ನವದೆಹಲಿ: ಮೇ 6 ಮತ್ತು 7 ರ ಮಧ್ಯರಾತ್ರಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ತಾನು ಈ ಹಿಂದೆ ಒಪ್ಪಿಕೊಂಡಿದ್ದಕ್ಕಿಂತ ಹೆಚ್ಚಿನ ಹಾನಿಯಾಗಿದೆ ಎಂದು ಪಾಕಿಸ್ತಾನ ಈಗ ಒಪ್ಪಿಕೊಂಡಿದೆ. ತನ್ನ ಆಂತರಿಕ ಮಿಲಿಟರಿ ಕಾರ್ಯಾಚರಣೆ ‘ಬನ್ಯನ್ ಉನ್ ಮರ್ಸೂಸ್’ ಕುರಿತಾದ ಪಾಕಿಸ್ತಾನದ ಗೌಪ್ಯ ದಾಖಲೆಯ ಪ್ರಕಾರ, ಭಾರತೀಯ ದಾಳಿಯಲ್ಲಿ ಕನಿಷ್ಠ ಎಂಟು ಸ್ಥಳಗಳು ಹಾನಿಗೊಳಗಾಗಿವೆ. … Continued

ಪಹಲ್ಗಾಮ್ ದಾಳಿ : ಪ್ರವಾಸಿಗರು ಹೋರಾಡಬೇಕಿತ್ತು, ಮಹಿಳೆಯರು ‘ವೀರತ್ವʼ ತೋರಬೇಕಿತ್ತು ; ನಾಲಿಗೆ ಹರಿಬಿಟ್ಟ ಬಿಜೆಪಿ ಸಂಸದ

ಚಂಡೀಗಢ : ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಪ್ರವಾಸಿಗರು ಭಯೋತ್ಪಾದಕರ ವಿರುದ್ಧ ಹೋರಾಡಬೇಕಿತ್ತು ಎಂದು ರಾಜ್ಯಸಭಾ ಸಂಸದ ರಾಮಚಂದರ ಜಂಗ್ರಾ ಶನಿವಾರ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ದಾಳಿಯಲ್ಲಿ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರಲ್ಲಿ “ಸ್ಫೂರ್ತಿಯ ಕೊರತೆ ಇತ್ತು” ಮತ್ತು ಅವರು ‘ವೀರಾಂಗನೆ'(ಯೋಧ ಮಹಿಳೆಯರು)ಯರಂತೆ ವರ್ತಿಸಬೇಕಾಗಿತ್ತು ಎಂದು ಅವರು … Continued

ಆಪರೇಷನ್ ಸಿಂಧೂರ | ಅಮೃತಸರದ ಗೋಲ್ಡನ್​ ಟೆಂಪಲ್ ಮೇಲೆ ದಾಳಿಗೆ ಯತ್ನಿಸಿದ್ದ ಪಾಕಿಸ್ತಾನ; ದಾಳಿ ವಿಫಲಗೊಳಿಸಿದ ಭಾರತೀಯ ಸೇನೆ

ಅಮೃತಸರ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಭಾರತ ನಡೆಸಿದ ದಾಳಿಗೆ ಪ್ರತೀಕಾರವಾಗಿ ಮೇ 7-8ರ ಮಧ್ಯರಾತ್ರಿ ಪಾಕಿಸ್ತಾನ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ಅಮೃತಸರದ ಸ್ವರ್ಣ ಮಂದಿರದ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು ಎಂದು 15 ನೇ ಪದಾತಿ ದಳದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಮೇಜರ್ ಜನರಲ್ … Continued