ಊಹಿಸಲೂ ಆಗದೇ ಇರುವುದರ ಬಗ್ಗೆ ಸಿದ್ಧರಾಗಿ : ಮಧ್ಯಪ್ರಾಚ್ಯ ಸಂಘರ್ಷ; ಜಾಗತಿಕ ಹಣದುಬ್ಬರದ ಬಗ್ಗೆ ಐಎಂಎಫ್ ಮುಖ್ಯಸ್ಥೆ ಎಚ್ಚರಿಕೆ

ಟೋಕಿಯೋ/ನವದೆಹಲಿ: ಮಧ್ಯಪ್ರಾಚ್ಯದಲ್ಲಿ (Middle East) ನಡೆಯುತ್ತಿರುವ ನಿರಂತರ ಸಂಘರ್ಷಗಳು ಜಾಗತಿಕ ಹಣದುಬ್ಬರದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಸೋಮವಾರ ಎಚ್ಚರಿಸಿದ್ದಾರೆ. ಒಂದು ವೇಳೆ ತೈಲ ಬೆಲೆಗಳು ದೀರ್ಘಕಾಲದವರೆಗೆ ಏರಿಕೆಯಲ್ಲೇ ಮುಂದುವರಿದರೆ ವಿಶ್ವದ ಆರ್ಥಿಕ ಚೇತರಿಕೆಗೆ ಹಿನ್ನಡೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.  ಜಪಾನ್‌ನ … Continued

ನಮಗೆ ನಾಚಿಕೆಯಾಗ್ತಿದೆ…: ಪ್ರಪಂಚದಾದ್ಯಂತ ‘ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ವಿದೇಶಗಳಲ್ಲಿ ಹಣಕ್ಕಾಗಿ ಕೈಚಾಚಲು ನಮಗೆ ನಾಚಿಕೆಯಾಗುತ್ತಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಇಸ್ಲಾಮಾಬಾದ್‌ನಲ್ಲಿ ನಡೆದ ಪ್ರಮುಖ ರಫ್ತುದಾರರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಹದಗೆಟ್ಟ ಆರ್ಥಿಕತೆಯನ್ನು ನಿಭಾಯಿಸಲು ತಾನು ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು … Continued

ಭಾರತದ ಆರ್ಥಿಕ ʼಬೆಳವಣಿಗೆ ಮುನ್ಸೂಚನೆʼ ಏರಿಕೆ ಮಾಡಿದ ಐಎಂಎಫ್‌

ನವದೆಹಲಿ: ಅಂತರಾಷ್ಟ್ರೀಯ ಹಣಕಾಸು ನಿಧಿ (IMF) 2026ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು ಶೇ. 7.3ಕ್ಕೆ ಏರಿಸಿದೆ. ಭಾರತದ ಬಲಿಷ್ಠ ಆರ್ಥಿಕ ವೇಗವನ್ನು ಗಮನದಲ್ಲಿಟ್ಟುಕೊಂಡು ಈ ಹಿಂದಿನ ಅಂದಾಜಿಗಿಂತ ಶೇ. 0.7 ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಐಎಂಎಫ್ ತಿಳಿಸಿದೆ. 2026ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (GDP) ಶೇ. 7.3 ರಷ್ಟು … Continued

ಟ್ರಂಪ್ ಸುಂಕಗಳ ಮಧ್ಯೆಯೂ 2038ರ ವೇಳೆಗೆ ಭಾರತವು ವಿಶ್ವದ 2ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಬಹುದು ಎಂದ ಇವೈ ವರದಿ

ನವದೆಹಲಿ : ಭಾರತವು ವಿಶ್ವದ ಐದು ದೊಡ್ಡ ಆರ್ಥಿಕತೆಗಳಲ್ಲಿ ಅತ್ಯಂತ ಕ್ರಿಯಾಶೀಲ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ, ಭಾರತದ ಆರ್ಥಿಕತೆಯು ಮುಂದಿನ ದಶಕದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸುವ ಹಾದಿಯಲ್ಲಿದೆ ಎಂದು ಇವೈ (EY) ಎಕಾನಮಿ ವಾಚ್ ವರದಿ ಬುಧವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿವೆ. ಖರೀದಿ-ಶಕ್ತಿ-ಸಮಾನತೆ (purchasing power parity (PPP)) ವಿಷಯದಲ್ಲಿ, ಭಾರತದ ಒಟ್ಟು … Continued

ಆಪರೇಶನ್‌ ಸಿಂಧೂರ ಪರಿಣಾಮ : ಪಾಕಿಸ್ತಾನಕ್ಕೆ 11 ಹೊಸ ಷರತ್ತು ವಿಧಿಸಿದ ಐಎಂಎಫ್‌

ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ತನ್ನ ಬೇಲ್‌ಔಟ್ ಕಾರ್ಯಕ್ರಮದ ಮುಂದಿನ ಕಂತನ್ನು ಬಿಡುಗಡೆ ಮಾಡಲು ಪಾಕಿಸ್ತಾನಕ್ಕೆ 11 ಹೊಸ ಷರತ್ತುಗಳನ್ನು ವಿಧಿಸಿದೆ ಮತ್ತು ಭಾರತದ ಜೊತೆಗೆ ಸಂಘರ್ಷವು ಯೋಜನೆಯ ಹಣಕಾಸು, ಬಾಹ್ಯ ಮತ್ತು ಸುಧಾರಣಾ ಉದ್ದೇಶಗಳಿಗೆ ಅಪಾಯ ಹೆಚ್ಚಿಸಬಹುದು ಎಂದು ಭಾನುವಾರ ಮಾಧ್ಯಮ ವರದಿಯೊಂದು ತಿಳಿಸಿದೆ. ಪಾಕಿಸ್ತಾನದ ಮೇಲೆ ವಿಧಿಸಲಾದ ಹೊಸ ಷರತ್ತುಗಳಲ್ಲಿ 17.6 … Continued

ಪಾಕಿಸ್ತಾನಕ್ಕೆ ಐಎಂಎಫ್‌ನ ಬೇಲ್‌ಔಟ್ ಪ್ಯಾಕೇಜ್ ಮೇಲಿನ ಮತದಾನದಿಂದ ದೂರ ಉಳಿದ ಭಾರತ ; ಪಾಕಿಸ್ತಾನದ ‘ಕಳಪೆ ದಾಖಲೆ’ಯ ಉಲ್ಲೇಖ

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನಕ್ಕೆ ಪ್ರಸ್ತಾಪಿಸಿದ 1.3 ಶತಕೋಟಿ ಡಾಲರ್ ಬೇಲ್‌ಔಟ್ ಪ್ಯಾಕೇಜ್‌ನ ಮೇಲಿನ ಮತದಾನದಿಂದ ಭಾರತ ಶುಕ್ರವಾರ ದೂರ ಉಳಿದಿದೆ. ಭಾರತವು ಇಪಾಕಿಸ್ತಾನದ ‘ಕಳಪೆ ದಾಖಲೆ’ಯನ್ನು ಉಲ್ಲೇಖಿಸಿ, ಪಾಕಿಸ್ತಾನದ ವಿಷಯದಲ್ಲಿ ಐಎಂಎಫ್‌ (IMF) ಕಾರ್ಯಕ್ರಮಗಳ ಪರಿಣಾಮಕಾರಿತ್ವದ ಬಗ್ಗೆ ಕಳವಳ ವ್ಯಕ್ತಪಡಿಸಿತು. ಪಾಕಿಸ್ತಾನದ ಕಡೆಯಿಂದ ಸರ್ಕಾರಿ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ ಸಾಲ ಹಣಕಾಸು … Continued

ಐಎಂಎಫ್‌ನಿಂದ ಭಾರತದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೆ.ವಿ. ಸುಬ್ರಮಣಿಯಮ್ ವಜಾ

ನವದೆಹಲಿ: ಏಪ್ರಿಲ್ 30ರ ಆದೇಶದ ಪ್ರಕಾರ, ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (IMF) ಕಾರ್ಯನಿರ್ವಾಹಕ ನಿರ್ದೇಶಕ (ಭಾರತ) ಡಾ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಸೇವೆಗಳನ್ನು ಸರ್ಕಾರ ಅಧಿಕೃತವಾಗಿ ವಜಾಗೊಳಿಸಿದೆ. ಸಿಬ್ಬಂದಿ ಸಚಿವಾಲಯ ಹೊರಡಿಸಿದ ಹೇಳಿಕೆಯ ಮೂಲಕ ಶುಕ್ರವಾರ ಈ ಘೋಷಣೆ ಮಾಡಲಾಗಿದೆ. “ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಭಾರತ) ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಸೇವೆಗಳನ್ನು … Continued

ಐಎಂಎಫ್ ಸಾಲದ ಷರತ್ತು : 1,50,000 ಸರ್ಕಾರಿ ಹುದ್ದೆಗಳು ರದ್ದು, 6 ಸಚಿವಾಲಯ ಮುಚ್ಚಲಿರುವ ಪಾಕಿಸ್ತಾನ…!

ಇಸ್ಲಾಮಾಬಾದ್‌ : ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಹಣದ ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನ ಭಾನುವಾರ (ಸೆಪ್ಟೆಂಬರ್ 29) ಸುಮಾರು 1,50,000 ಸರ್ಕಾರಿ ಹುದ್ದೆಗಳ ರದ್ದು , ಆರು ಸಚಿವಾಲಯಗಳನ್ನು ಮುಚ್ಚುವುದು ಮತ್ತು ಇತರ ಎರಡು ಸಚಿವಾಲಯಗಳನ್ನು ವಿಲೀನಗೊಳಿಸುವುದಾಗಿ ಪ್ರಕಟಿಸಿದೆ. USD 7 ಶತಕೋಟಿ ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯ ಸಾಲದ ಒಪ್ಪಂದದ ಅಡಿಯಲ್ಲಿ ಒಪ್ಪಿಕೊಂಡಿರುವ ಸುಧಾರಣೆಗಳ … Continued

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ನಿಂದ ವಿಶ್ವದಾದ್ಯಂತ 40%ರಷ್ಟು ಉದ್ಯೋಗಗಳು ಕಡಿತ : ಐಎಂಎಫ್‌

ಐಎಂಎಫ್‌ (IMF) ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಲಿನಾ ಜಾರ್ಜಿವಾ ಅವರು ಕೃತಕಬುದ್ಧಿಮತ್ತೆ (AI) ಪ್ರಪಂಚದಾದ್ಯಂತ ಸುಮಾರು 40%ರಷ್ಟು ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಿಗೆ ಹೋಲಿಸಿದರೆ ಸುಧಾರಿತ ಆರ್ಥಿಕತೆಗಳು ಎಐ(AI)ನಿಂದ ಹೆಚ್ಚಿನ ಅಪಾಯಗಳನ್ನು ಎದುರಿಸುತ್ತವೆ. ಜೊತೆಗೆ ಅದರ ಪ್ರಯೋಜನಗಳಿಂದ ಹೆಚ್ಚಿನ ಅವಕಾಶಗಳನ್ನೂ ಪಡೆಯುತ್ತವೆ ಎಂದು ಜಾರ್ಜೀವಾ … Continued