ಪಾಕಿಸ್ತಾನದಲ್ಲಿ ಆರ್ಥಿಕ ದಿವಾಳಿತನ : ಈಗ ಅಲ್ಲಿ ಎಮ್ಮೆ-ಆಕಳ ಸಗಣಿಗೂ ಕೊಡಬೇಕು ‘ತೆರಿಗೆ’…!

ಲಾಹೋರ್: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಪಂಜಾಬ್ ಪ್ರಾಂತ್ಯದ ಸರ್ಕಾರವು ಆದಾಯ ಹೆಚ್ಚಿಸಿಕೊಳ್ಳಲು ವಿಚಿತ್ರ ಹಾಗೂ ವಿವಾದಾತ್ಮಕ ನಿರ್ಧಾರ ಕೈಗೊಂಡಿದೆ. ಮರ್ಯಮ್ ನವಾಜ್ ನೇತೃತ್ವದ ಆಡಳಿತವು ಪಂಜಾಬ್‌ ರಾಜ್ಯದ ಪ್ರತಿಯೊಂದು ಎಮ್ಮೆ ಹಾಗೂ ಆಕಳ ಮೇಲೆ ದಿನಕ್ಕೆ 30 ರೂಪಾಯಿ ‘ಗೊಬ್ಬರ ತೆರಿಗೆ’ (Gobar Tax) ವಿಧಿಸಲು ನಿರ್ಧರಿಸಿದೆ. ಸರ್ಕಾರದ ಈ ಕ್ರಮವು ಸಾರ್ವಜನಿಕ … Continued

ನಮಗೆ ನಾಚಿಕೆಯಾಗ್ತಿದೆ…: ಪ್ರಪಂಚದಾದ್ಯಂತ ‘ಹಣಕ್ಕಾಗಿ ಭಿಕ್ಷೆ ಬೇಡುತ್ತಿದ್ದೇವೆ ಎಂದು ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ವಿದೇಶಗಳಲ್ಲಿ ಹಣಕ್ಕಾಗಿ ಕೈಚಾಚಲು ನಮಗೆ ನಾಚಿಕೆಯಾಗುತ್ತಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಇಸ್ಲಾಮಾಬಾದ್‌ನಲ್ಲಿ ನಡೆದ ಪ್ರಮುಖ ರಫ್ತುದಾರರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಹದಗೆಟ್ಟ ಆರ್ಥಿಕತೆಯನ್ನು ನಿಭಾಯಿಸಲು ತಾನು ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು … Continued

2026ರಲ್ಲಿ ಭಾರೀ ಆರ್ಥಿಕ ವಿಪತ್ತು…ಮಹಾಯುದ್ಧದ ಭೀತಿ ? ಆತಂಕಕ್ಕೆ ಕಾರಣವಾಯ್ತು ಬಾಬಾ ವಂಗಾ ಭವಿಷ್ಯವಾಣಿ…

2025ರ ವರ್ಷವು ಜಗತ್ತಿನ ಮೂಲೆ ಮೂಲೆಯಲ್ಲೂ ಯುದ್ಧಗಳು, ಸಂಘರ್ಷಗಳು ಮತ್ತು ನೈಸರ್ಗಿಕ ವಿಕೋಪಗಳಿಂದ ತುಂಬಿದೆ. ಇಸ್ರೇಲ್-ಹಮಾಸ್ ಯುದ್ಧದ ಮುಂದುವರಿಕೆ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ, ಮತ್ತು ಎಂದಿಗೂ ಮುಗಿಯದ ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ ಇಡೀ ವರ್ಷ ಕೆಟ್ಟ ಸುದ್ದಿಗಳೇ ಹೆಚ್ಚಾಗಿವೆ. ಇದಲ್ಲದೆ, ಪ್ರಪಂಚದ ಹಲವು ಸ್ಥಳಗಳಲ್ಲಿ ಭೀಕರ ಪ್ರವಾಹ, ಭೂಕಂಪಗಳು ಮತ್ತು ತೀವ್ರ ಉಷ್ಣತೆಯ ಅಲೆಗಳಿಂದ … Continued