ಇರಾನ್-ಅಮೆರಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ; ತೋರಿಕೆಗೆ ಪಾಕಿಸ್ತಾನ, ಚೀನಾ ಅಸಲಿ ಕಿಂಗ್ ಮೇಕರ್? ಆದ್ರೂ ಅಮೆರಿಕ ಚೀನಾ ಹೆಸರು ಕೈಬಿಟ್ಟಿದ್ದೇಕೆ ?

ವಾಷಿಂಗ್ಟನ್/ಬೀಜಿಂಗ್: ಅಮೆರಿಕ ಮತ್ತು ಇರಾನ್ ನಡುವೆ ಉಂಟಾಗಿದ್ದ ಯುದ್ಧದ ಭೀತಿ ಸದ್ಯಕ್ಕೆ ತಿಳಿಯಾಗಿದೆ. ಇಡೀ ಜಗತ್ತು ಮತ್ತೊಂದು ಮಹಾಯುದ್ಧಕ್ಕೆ ಸಾಕ್ಷಿಯಾಗಲಿದೆ ಎನ್ನುವಷ್ಟರಲ್ಲಿ, ಕೊನೆಯ ಕ್ಷಣದಲ್ಲಿ ಏರ್ಪಟ್ಟ ಕದನ ವಿರಾಮ ಒಪ್ಪಂದವು ಜಾಗತಿಕ ನಿಟ್ಟುಸಿರಿಗೆ ಕಾರಣವಾಗಿದೆ. ಆದರೆ, ಈ ಸಂಧಾನದ ಹಿಂದೆ ಪ್ರಬಲ ಶಕ್ತಿಯಾಗಿ ನಿಂತಿದ್ದು ಯಾರು ಎಂಬ ಚರ್ಚೆ ಈಗ ಜಾಗತಿಕ ಮಟ್ಟದಲ್ಲಿ ಶುರುವಾಗಿದೆ. “ಒಪ್ಪಂದವಾಗದಿದ್ದರೆ … Continued

ಇರಾನಿನಿಂದ ಹಾರ್ಮುಜ್ ಜಲಸಂಧಿ ಬಂದ್ : ಪುನರಾರಂಭಕ್ಕೆ ಕೋರಿದ್ದ ವಿಶ್ವಸಂಸ್ಥೆ ನಿರ್ಣಯಕ್ಕೆ ರಷ್ಯಾ, ಚೀನಾ ‘ವೀಟೋ’ ತಡೆ

ವಿಶ್ವಸಂಸ್ಥೆ : ಇರಾನ್‌ನಿಂದ ದಿಗ್ಬಂಧನಕ್ಕೊಳಗಾಗಿರುವ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಪುನರಾರಂಭಿಸುವ ಉದ್ದೇಶ ಹೊಂದಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ರಷ್ಯಾ ಮತ್ತು ಚೀನಾ ಮಂಗಳವಾರ ವೀಟೋ (ನಿಷೇಧಾಧಿಕಾರ ಚಲಾಯಿಸಿವೆ) ಮಾಡಿವೆ. 15 ರಾಷ್ಟ್ರಗಳ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಬಹ್ರೇನ್ ಪ್ರಸ್ತಾಪಿಸಿದ ನಿರ್ಣಯದ ಮೇಲೆ ಮತದಾನ ನಡೆಸಿತು. … Continued

ಕುಟುಂಬವನ್ನೇ ಕಳೆದುಕೊಂಡ ದುಃಖ : ಶಾಂತಿ ಅರಸಿ 30 ವರ್ಷಗಳಿಂದ ಸೈಕಲ್ ತುಳಿಯುತ್ತಿರುವ 90ರ ವೃದ್ಧ…!

ಬೀಜಿಂಗ್: ಜೀವನದಲ್ಲಿ ಎದುರಾದ ಭೀಕರ ದುರಂತವೊಂದು ಮನುಷ್ಯನನ್ನು ಎತ್ತ ಸಾಗುವಂತೆ ಮಾಡಬಹುದು ಎಂಬುದಕ್ಕೆ ಚೀನಾದ ಈ 90 ವರ್ಷದ ವೃದ್ಧನ ಕಥೆಯೇ ಸಾಕ್ಷಿ. ತನ್ನ ಇಡೀ ಕುಟುಂಬವನ್ನು ಕಳೆದುಕೊಂಡ ನೋವಿನಿಂದ ಹೊರಬರಲು ಈ ವೃದ್ಧ ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಚೀನಾದಾದ್ಯಂತ ಸೈಕಲ್‌ನಲ್ಲಿ ಸಂಚರಿಸುತ್ತಾ ಸಮಾಧಾನ ಹುಡುಕುತ್ತಿದ್ದಾರೆ. ಚೀನಾದ ಹೆನಾನ್ ಪ್ರಾಂತ್ಯದ ಕೈಫೆಂಗ್ ಮೂಲದ ಜಾಂಗ್ … Continued

ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ಹಡಗು ಈಗ ಭಾರತದತ್ತ: ಅರ್ಧ ದಾರಿಯಲ್ಲೇ ಯು-ಟರ್ನ್ !

ನವದೆಹಲಿ: ಚೀನಾಗೆ ತೆರಳುತ್ತಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಹಡಗುಗಳು ಈಗ ಅರ್ಧ ದಾರಿಯಲ್ಲೇ ಮಾರ್ಗ ಬದಲಿಸಿ ಭಾರತದತ್ತ ಧಾವಿಸುತ್ತಿವೆ. ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿರುವ ಜಾಗತಿಕ ತೈಲ ಬಿಕ್ಕಟ್ಟಿನ ನಡುವೆ, ಭಾರತವು ರಷ್ಯಾದಿಂದ ತನ್ನ ತೈಲ ಆಮದನ್ನು ದುಪ್ಪಟ್ಟುಗೊಳಿಸಿರುವುದು ಇದಕ್ಕೆ ಕಾರಣವಾಗಿದೆ. ಮಾರ್ಗ ಬದಲಿಸಿದ ‘ಅಕ್ವಾ ಟೈಟಾನ್’ (Aqua Titan) ಎಂಬ ಹಡಗು ಬಾಲ್ಟಿಕ್ … Continued

ತೆಹ್ರಾನ್‌ ಮೇಲೆ ಅಮೆರಿಕ-ಇಸ್ರೇಲ್ ವಿನಾಶಕ ದಾಳಿ ; ಪಾಕ್‌ ನಂತ್ರ ಇರಾನಿನಲ್ಲೂ ಠುಸ್‌ ಆಯ್ತೆ ಚೀನಾದ ಹೈಟೆಕ್ ಕ್ಷಿಪಣಿ ನಿರೋಧಕ ವ್ಯವಸ್ಥೆ ?

ಅಮೆರಿಕ ಮತ್ತು ಇಸ್ರೇಲ್ ಸಂಘಟಿತವಾಗಿ ನಡೆಸಿದ ವಾಯುದಾಳಿಗಳಿಂದ ಇರಾನ್ ನಗರಗಳಲ್ಲಿ ಭಾರಿ ವಿನಾಶ ಸಂಭವಿಸಿದೆ. ಈ ಘಟನೆಯು ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ(air defence system)ಯು ಶತ್ರುವಿನ ಕ್ಷಿಪಣಿಗಳನ್ನು ತಡೆಯುವಲ್ಲಿ ವಿಫಲವಾಗಿರುವುದನ್ನು ಎತ್ತಿ ತೋರಿಸಿದೆ. ಇರಾನ್ ತನ್ನ ಶಸ್ತ್ರಾಸ್ತ್ರಗಳ ಬಲ  ಹೆಚ್ಚಿಸಲು ಇತ್ತೀಚೆಗಷ್ಟೇ ಚೀನಾದಿಂದ ಖರೀದಿಸಿದ್ದ HQ-9B ವಾಯು ರಕ್ಷಣಾ ವ್ಯವಸ್ಥೆಯು ಶತ್ರು ದೇಶಗಳ ಕ್ಷಿಪಣಿಗಳನ್ನು … Continued

ವೀಡಿಯೊ | ಮನುಷ್ಯರನ್ನೂ ಮೀರಿಸುವಂತೆ ರೋಬೋಟ್‌ಗಳ ಕುಂಗ್ ಫೂ ಪ್ರದರ್ಶನ ! ಚೀನಾ ಎಐ ಶಕ್ತಿಗೆ ಬೆರಗಾದ ಜಗತ್ತು ; ವೀಕ್ಷಿಸಿ

ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಪಾರುಪತ್ಯ ಮೆರೆಯುತ್ತಿರುವ ಚೀನಾ, ಈ ಬಾರಿಯ ‘ಸ್ಪ್ರಿಂಗ್ ಫೆಸ್ಟಿವಲ್ ಗಾಲಾ’ (Spring Festival Gala) ಕಾರ್ಯಕ್ರಮದಲ್ಲಿ ತನ್ನ ಅತ್ಯಾಧುನಿಕ ಹ್ಯೂಮನಾಯ್ಡ್ (ಮಾನವ ರೂಪದ) ರೋಬೋಟ್‌ಗಳ ಶಕ್ತಿಯನ್ನು ಪ್ರದರ್ಶಿಸಿದೆ. ಅಲ್ಲಿ ನೆರೆದಿದ್ದವರು ಮತ್ತು ಟಿವಿ ಮುಂದೆ ಕುಳಿತಿದ್ದ ಕೋಟ್ಯಂತರ ಜನರು ಒಂದು ಕ್ಷಣ ದಂಗಾದರು! ಕೇವಲ ನಡೆದಾಡುವುದಕ್ಕೆ ಕಷ್ಟಪಡುತ್ತಿದ್ದ ರೋಬೋಟ್‌ಗಳ … Continued

ವೀಡಿಯೊ…| ಮೋದಿ ಐತಿಹಾಸಿಕ ಸಾಧನೆ: ಅಸ್ಸಾಂನ ವಿಮಾನದ ತುರ್ತು ಭೂಸ್ಪರ್ಶ ಫೆಸಿಲಿಟಿಯಲ್ಲಿ ಲ್ಯಾಂಡ್‌ ಆದ ಪ್ರಧಾನಿ

ಮೊರಾನ್ (ಅಸ್ಸಾಂ): ಅಸ್ಸಾಂ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈಶಾನ್ಯ ಭಾರತದ ಮೊದಲ ತುರ್ತು ಭೂಸ್ಪರ್ಶ ಸೌಲಭ್ಯಕ್ಕೆ (emergency landing facility) ‘C-130J’ ವಿಮಾನದ ಮೂಲಕ ಬಂದಿಳಿಯುವ ಮೂಲಕ ತಮ್ಮ ಒಂದು ದಿನದ ಪ್ರವಾಸವನ್ನು ಆರಂಭಿಸಿದರು. ಚಬುವಾ ವಾಯುನೆಲೆಯಿಂದ ಹೊರಟ ಪ್ರಧಾನಿಯವರು, ರಾಷ್ಟ್ರೀಯ ಹೆದ್ದಾರಿ-37ರ ಮೊರಾನ್ ಬೈಪಾಸ್‌ನಲ್ಲಿ … Continued

ವೀಡಿಯೊಗಳು | ಚೀನಾದ ‘Seedance 2’ ಎಐ ವೀಡಿಯೊ ನೋಡಿದ್ರೆ ಬೆಚ್ಚಿ ಬೀಳ್ತಿರಾ ; ಶೂಟಿಂಗ್ ಇಲ್ಲದೆ ತಯಾರಾಗುತ್ತೆ ಸಿನಿಮಾ : ಹಾಲಿವುಡ್‌ಗೆ ನಡುಕ…!

ಬೀಜಿಂಗ್/ಕ್ಯಾಲಿಫೋರ್ನಿಯಾ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ಪೈಪೋಟಿ ಈಗ ಹೊಸ ಹಂತಕ್ಕೆ ತಲುಪಿದೆ. ಟಿಕ್‌ಟಾಕ್‌ನ ಮಾತೃ ಸಂಸ್ಥೆ ‘ಬೈಟ್‌ಡ್ಯಾನ್ಸ್’ (ByteDance) ಬಿಡುಗಡೆ ಮಾಡಿರುವ ನೂತನ ಎಐ ವಿಡಿಯೋ ಮಾಡೆಲ್ ‘Seedance 2.0’, ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ. ಇದರ ಅದ್ಭುತ ಕಾರ್ಯಕ್ಷಮತೆಯನ್ನು ಕಂಡ ಸಾಮಾಜಿಕ ಜಾಲತಾಣ ಬಳಕೆದಾರರು “ಇನ್ನು ಮುಂದೆ … Continued

ಗಲ್ವಾನ್ ಸಂಘರ್ಷದ ಬೆನ್ನಲ್ಲೇ ರಹಸ್ಯ ಪರಮಾಣು ಪರೀಕ್ಷೆ ನಡೆಸಿದ್ದ ಚೀನಾ : ಅಮೆರಿಕ ಅಧಿಕಾರಿ ಸ್ಫೋಟಕ ಮಾಹಿತಿ

ನವದೆಹಲಿ : ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಭೀಕರ ಸಂಘರ್ಷದ ಕೇವಲ ಒಂದು ವಾರದ ನಂತರ, ಅಂದರೆ ಜೂನ್ 22, 2020 ರಂದು ಚೀನಾ ರಹಸ್ಯವಾಗಿ ಪರಮಾಣು ಸ್ಫೋಟಕ ಪರೀಕ್ಷೆಯನ್ನು ನಡೆಸಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಮೆರಿಕದ ಸ್ಟೇಟ್ ಅಂಡರ್ ಸೆಕ್ರೆಟರಿ ಥಾಮಸ್ ಜಿ. ಡಿನಾನೊ … Continued

ಎಂಜಿನಿಯರಿಂಗ್ ಅದ್ಭುತ : 600 ಮೀ. ಆಳದ ಪ್ರಪಾತದ ಅಂಚಿನಲ್ಲಿ ನಿರ್ಮಿಸಿದ ‘ಕತ್ತಿಯ ಅಲಗಿನಂತಹ’ ರಸ್ತೆ | ವೀಡಿಯೊ ವೀಕ್ಷಿಸಿ

ರಾತ್ರೋರಾತ್ರಿ ಆಸ್ಪತ್ರೆಗಳನ್ನು ನಿರ್ಮಿಸುವುದರಿಂದ ಹಿಡಿದು, ಕಡಿದಾದ ಪರ್ವತ ಶ್ರೇಣಿಗಳ ಮೇಲೆ ರಸ್ತೆಗಳನ್ನು ನಿರ್ಮಿಸುವವರೆಗೆ ಚೀನಾ ತನ್ನ ಎಂಜಿನಿಯರಿಂಗ್ ಸಾಧನೆಗಳಿಂದ ಜಗತ್ತನ್ನು ಸದಾ ಬೆರಗುಗೊಳಿಸುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ, ಚೀನಾದ ಚಾಂಗ್‌ಕಿಂಗ್ ಪ್ರಾಂತ್ಯದ ಶಿಝು ಎಂಬಲ್ಲಿರುವ ‘ದಾವೋಬೈಲಿಯಾಂಗ್’ (Daobeiliang) ಸ್ಕೈ ರೋಡ್. ಚೀನೀ ಎಂಜಿನಿಯರ್‌ಗಳ ಕೌಶಲ ಮತ್ತು ನಿಖರತೆಗೆ ಈ ರಸ್ತೆ ಒಂದು ಜೀವಂತ ಸಾಕ್ಷಿಯಾಗಿದೆ. ‘ದಾವೋಬೈಲಿಯಾಂಗ್’ … Continued