ತೆಹ್ರಾನ್‌ ಮೇಲೆ ಅಮೆರಿಕ-ಇಸ್ರೇಲ್ ವಿನಾಶಕ ದಾಳಿ ; ಪಾಕ್‌ ನಂತ್ರ ಇರಾನಿನಲ್ಲೂ ಠುಸ್‌ ಆಯ್ತೆ ಚೀನಾದ ಹೈಟೆಕ್ ಕ್ಷಿಪಣಿ ನಿರೋಧಕ ವ್ಯವಸ್ಥೆ ?

ಅಮೆರಿಕ ಮತ್ತು ಇಸ್ರೇಲ್ ಸಂಘಟಿತವಾಗಿ ನಡೆಸಿದ ವಾಯುದಾಳಿಗಳಿಂದ ಇರಾನ್ ನಗರಗಳಲ್ಲಿ ಭಾರಿ ವಿನಾಶ ಸಂಭವಿಸಿದೆ. ಈ ಘಟನೆಯು ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ(air defence system)ಯು ಶತ್ರುವಿನ ಕ್ಷಿಪಣಿಗಳನ್ನು ತಡೆಯುವಲ್ಲಿ ವಿಫಲವಾಗಿರುವುದನ್ನು ಎತ್ತಿ ತೋರಿಸಿದೆ. ಇರಾನ್ ತನ್ನ ಶಸ್ತ್ರಾಸ್ತ್ರಗಳ ಬಲ  ಹೆಚ್ಚಿಸಲು ಇತ್ತೀಚೆಗಷ್ಟೇ ಚೀನಾದಿಂದ ಖರೀದಿಸಿದ್ದ HQ-9B ವಾಯು ರಕ್ಷಣಾ ವ್ಯವಸ್ಥೆಯು ಶತ್ರು ದೇಶಗಳ ಕ್ಷಿಪಣಿಗಳನ್ನು … Continued

ವೀಡಿಯೊ | ಮನುಷ್ಯರನ್ನೂ ಮೀರಿಸುವಂತೆ ರೋಬೋಟ್‌ಗಳ ಕುಂಗ್ ಫೂ ಪ್ರದರ್ಶನ ! ಚೀನಾ ಎಐ ಶಕ್ತಿಗೆ ಬೆರಗಾದ ಜಗತ್ತು ; ವೀಕ್ಷಿಸಿ

ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಪಾರುಪತ್ಯ ಮೆರೆಯುತ್ತಿರುವ ಚೀನಾ, ಈ ಬಾರಿಯ ‘ಸ್ಪ್ರಿಂಗ್ ಫೆಸ್ಟಿವಲ್ ಗಾಲಾ’ (Spring Festival Gala) ಕಾರ್ಯಕ್ರಮದಲ್ಲಿ ತನ್ನ ಅತ್ಯಾಧುನಿಕ ಹ್ಯೂಮನಾಯ್ಡ್ (ಮಾನವ ರೂಪದ) ರೋಬೋಟ್‌ಗಳ ಶಕ್ತಿಯನ್ನು ಪ್ರದರ್ಶಿಸಿದೆ. ಅಲ್ಲಿ ನೆರೆದಿದ್ದವರು ಮತ್ತು ಟಿವಿ ಮುಂದೆ ಕುಳಿತಿದ್ದ ಕೋಟ್ಯಂತರ ಜನರು ಒಂದು ಕ್ಷಣ ದಂಗಾದರು! ಕೇವಲ ನಡೆದಾಡುವುದಕ್ಕೆ ಕಷ್ಟಪಡುತ್ತಿದ್ದ ರೋಬೋಟ್‌ಗಳ … Continued

ವೀಡಿಯೊ…| ಮೋದಿ ಐತಿಹಾಸಿಕ ಸಾಧನೆ: ಅಸ್ಸಾಂನ ವಿಮಾನದ ತುರ್ತು ಭೂಸ್ಪರ್ಶ ಫೆಸಿಲಿಟಿಯಲ್ಲಿ ಲ್ಯಾಂಡ್‌ ಆದ ಪ್ರಧಾನಿ

ಮೊರಾನ್ (ಅಸ್ಸಾಂ): ಅಸ್ಸಾಂ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈಶಾನ್ಯ ಭಾರತದ ಮೊದಲ ತುರ್ತು ಭೂಸ್ಪರ್ಶ ಸೌಲಭ್ಯಕ್ಕೆ (emergency landing facility) ‘C-130J’ ವಿಮಾನದ ಮೂಲಕ ಬಂದಿಳಿಯುವ ಮೂಲಕ ತಮ್ಮ ಒಂದು ದಿನದ ಪ್ರವಾಸವನ್ನು ಆರಂಭಿಸಿದರು. ಚಬುವಾ ವಾಯುನೆಲೆಯಿಂದ ಹೊರಟ ಪ್ರಧಾನಿಯವರು, ರಾಷ್ಟ್ರೀಯ ಹೆದ್ದಾರಿ-37ರ ಮೊರಾನ್ ಬೈಪಾಸ್‌ನಲ್ಲಿ … Continued

ವೀಡಿಯೊಗಳು | ಚೀನಾದ ‘Seedance 2’ ಎಐ ವೀಡಿಯೊ ನೋಡಿದ್ರೆ ಬೆಚ್ಚಿ ಬೀಳ್ತಿರಾ ; ಶೂಟಿಂಗ್ ಇಲ್ಲದೆ ತಯಾರಾಗುತ್ತೆ ಸಿನಿಮಾ : ಹಾಲಿವುಡ್‌ಗೆ ನಡುಕ…!

ಬೀಜಿಂಗ್/ಕ್ಯಾಲಿಫೋರ್ನಿಯಾ: ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ಪೈಪೋಟಿ ಈಗ ಹೊಸ ಹಂತಕ್ಕೆ ತಲುಪಿದೆ. ಟಿಕ್‌ಟಾಕ್‌ನ ಮಾತೃ ಸಂಸ್ಥೆ ‘ಬೈಟ್‌ಡ್ಯಾನ್ಸ್’ (ByteDance) ಬಿಡುಗಡೆ ಮಾಡಿರುವ ನೂತನ ಎಐ ವಿಡಿಯೋ ಮಾಡೆಲ್ ‘Seedance 2.0’, ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ. ಇದರ ಅದ್ಭುತ ಕಾರ್ಯಕ್ಷಮತೆಯನ್ನು ಕಂಡ ಸಾಮಾಜಿಕ ಜಾಲತಾಣ ಬಳಕೆದಾರರು “ಇನ್ನು ಮುಂದೆ … Continued

ಗಲ್ವಾನ್ ಸಂಘರ್ಷದ ಬೆನ್ನಲ್ಲೇ ರಹಸ್ಯ ಪರಮಾಣು ಪರೀಕ್ಷೆ ನಡೆಸಿದ್ದ ಚೀನಾ : ಅಮೆರಿಕ ಅಧಿಕಾರಿ ಸ್ಫೋಟಕ ಮಾಹಿತಿ

ನವದೆಹಲಿ : ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಭೀಕರ ಸಂಘರ್ಷದ ಕೇವಲ ಒಂದು ವಾರದ ನಂತರ, ಅಂದರೆ ಜೂನ್ 22, 2020 ರಂದು ಚೀನಾ ರಹಸ್ಯವಾಗಿ ಪರಮಾಣು ಸ್ಫೋಟಕ ಪರೀಕ್ಷೆಯನ್ನು ನಡೆಸಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಮೆರಿಕದ ಸ್ಟೇಟ್ ಅಂಡರ್ ಸೆಕ್ರೆಟರಿ ಥಾಮಸ್ ಜಿ. ಡಿನಾನೊ … Continued

ಎಂಜಿನಿಯರಿಂಗ್ ಅದ್ಭುತ : 600 ಮೀ. ಆಳದ ಪ್ರಪಾತದ ಅಂಚಿನಲ್ಲಿ ನಿರ್ಮಿಸಿದ ‘ಕತ್ತಿಯ ಅಲಗಿನಂತಹ’ ರಸ್ತೆ | ವೀಡಿಯೊ ವೀಕ್ಷಿಸಿ

ರಾತ್ರೋರಾತ್ರಿ ಆಸ್ಪತ್ರೆಗಳನ್ನು ನಿರ್ಮಿಸುವುದರಿಂದ ಹಿಡಿದು, ಕಡಿದಾದ ಪರ್ವತ ಶ್ರೇಣಿಗಳ ಮೇಲೆ ರಸ್ತೆಗಳನ್ನು ನಿರ್ಮಿಸುವವರೆಗೆ ಚೀನಾ ತನ್ನ ಎಂಜಿನಿಯರಿಂಗ್ ಸಾಧನೆಗಳಿಂದ ಜಗತ್ತನ್ನು ಸದಾ ಬೆರಗುಗೊಳಿಸುತ್ತದೆ. ಇದಕ್ಕೆ ಜ್ವಲಂತ ಉದಾಹರಣೆ, ಚೀನಾದ ಚಾಂಗ್‌ಕಿಂಗ್ ಪ್ರಾಂತ್ಯದ ಶಿಝು ಎಂಬಲ್ಲಿರುವ ‘ದಾವೋಬೈಲಿಯಾಂಗ್’ (Daobeiliang) ಸ್ಕೈ ರೋಡ್. ಚೀನೀ ಎಂಜಿನಿಯರ್‌ಗಳ ಕೌಶಲ ಮತ್ತು ನಿಖರತೆಗೆ ಈ ರಸ್ತೆ ಒಂದು ಜೀವಂತ ಸಾಕ್ಷಿಯಾಗಿದೆ. ‘ದಾವೋಬೈಲಿಯಾಂಗ್’ … Continued

ಬಲೂಚಿಸ್ತಾನದಲ್ಲಿ ಚೀನಾ ಸೇನೆ ನಿಯೋಜನೆ ಆತಂಕ : ವಿದೇಶಾಂಗ ಸಚಿವ ಜೈಶಂಕರಗೆ ಪತ್ರ ಬರೆದ ಬಲೂಚ್ ನಾಯಕ

ನವದೆಹಲಿ/ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ ಚೀನಾ ತನ್ನ ಸೇನಾ ಪಡೆಗಳನ್ನು ನಿಯೋಜಿಸುವ ಸಾಧ್ಯತೆಯಿದೆ ಎಂದು ಬಲೂಚ್ ನಾಯಕ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಮಿರ್ ಯಾರ್ ಬಲೂಚ್ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಅವರಿಗೆ ಅವರು ಬಹಿರಂಗ ಪತ್ರ ಬರೆದಿದ್ದಾರೆ. ಚೀನಾ ಮತ್ತು … Continued

ವೈದ್ಯಕೀಯ ಚಮತ್ಕಾರ…ಕತ್ತರಿಸಲ್ಪಟ್ಟ ಕಿವಿಯನ್ನು ಕಾಲಿನಲ್ಲಿ ಜೀವಂತವಾಗಿಟ್ಟು 6 ತಿಂಗಳ ನಂತ್ರ ಯಶಸ್ವಿಯಾಗಿ ಜೋಡಿಸಿದ ವೈದ್ಯರು..!

ಬೀಜಿಂಗ್/ಜಿನಾನ್: ವೈದ್ಯಕೀಯ ಲೋಕವೇ ಬೆರಗಾಗುವಂತಹ ವಿದ್ಯಮಾನವೊಂದರಲ್ಲಿ, ಚೀನಾದ ವೈದ್ಯರು ಅಪಘಾತದಲ್ಲಿ ಕತ್ತರಿಸಲ್ಪಟ್ಟ ಮಹಿಳೆಯ ಕಿವಿಯನ್ನು ಐದು ತಿಂಗಳ ಕಾಲ ಆಕೆಯ ಕಾಲಿನಲ್ಲೇ ಜೀವಂತವಾಗಿರಿಸಿ, ನಂತರ ಅದನ್ನು ತಲೆಯಲ್ಲಿ ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆ ಎಂದು ವರದಿಯಾಗಿದ್ದು, ಮೈಕ್ರೋಸರ್ಜರಿ ಕ್ಷೇತ್ರದಲ್ಲಿ ಇದು ಜಗತ್ತಿನಲ್ಲೇ ಮೊಟ್ಟಮೊದಲ ಇಂತಹ ಯಶಸ್ವಿ ಪ್ರಯೋಗ ಎಂದು ಪರಿಗಣಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ‘ಸನ್’ ಎಂಬ ಹೆಸರಿನ … Continued

ವೀಡಿಯೊ..| ಕೇವಲ 2 ಸೆಕೆಂಡುಗಳಲ್ಲಿ 700 ಕಿಮೀ ಸ್ಪೀಡ್‌ ತಲುಪಿದ ವಿಶ್ವದ ಅತ್ಯಂತ ವೇಗದ ರೈಲು..! ಚೀನಾದಿಂದ ದಾಖಲೆ

ಶಾಂಘೈ: ಸಾರಿಗೆ ಕ್ಷೇತ್ರದಲ್ಲಿ ಚೀನಾ ಮತ್ತೊಂದು ಮಹತ್ತರ ಮೈಲಿಗಲ್ಲು ಸ್ಥಾಪಿಸಿದೆ. ಚೀನಾದ ಸಂಶೋಧಕರು ವಿಶ್ವದ ಅತ್ಯಂತ ವೇಗದ ಮ್ಯಾಗ್ಲೆವ್ (Maglev) ರೈಲನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಇದು ಕೇವಲ 2 ಸೆಕೆಂಡುಗಳಲ್ಲಿ ಗಂಟೆಗೆ 700 ಕಿ.ಮೀ ವೇಗವನ್ನು ತಲುಪುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದೆ ಎಂದು ವರದಿಯಾಗಿದೆ. ಈ ರೈಲು ಎಷ್ಟು ವೇಗವಾಗಿ ಚಲಿಸುತ್ತದೆ ಎಂದರೆ … Continued

ಪ್ರತಿ ಗಂಟೆಗೆ ಅತಿ ಹೆಚ್ಚು ಸಾವುಗಳು ಸಂಭವಿಸುತ್ತಿರುವ ದೇಶ ಯಾವುದು ? ಟಾಪ್‌-10 ದೇಶಗಳ ಪಟ್ಟಿ ; ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತೆ..?

ವಿಶ್ವದ ಜನಸಂಖ್ಯೆಯು ಈಗಾಗಲೇ 800 ಕೋಟಿ ದಾಟಿದೆ. 146 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದ್ದರೆ, 140 ಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಎರಡನೇ ಸ್ಥಾನದಲ್ಲಿದೆ. ಆದರೆ, ಇತ್ತೀಚಿನ ಗ್ಲೋಬಲ್ ಇಂಡೆಕ್ಸ್ (Global Index) ವರದಿಯು ಜನಸಂಖ್ಯೆಯ ಬದಲಾಗಿ ಅತ್ಯಂತ ಕಳವಳಕಾರಿ ವಿಷಯವೊಂದನ್ನು ಎತ್ತಿ ತೋರಿಸಿದೆ. ಅದುವೇ … Continued