ತೆಹ್ರಾನ್‌ ಮೇಲೆ ಅಮೆರಿಕ-ಇಸ್ರೇಲ್ ವಿನಾಶಕ ದಾಳಿ ; ಪಾಕ್‌ ನಂತ್ರ ಇರಾನಿನಲ್ಲೂ ಠುಸ್‌ ಆಯ್ತೆ ಚೀನಾದ ಹೈಟೆಕ್ ಕ್ಷಿಪಣಿ ನಿರೋಧಕ ವ್ಯವಸ್ಥೆ ?

ಅಮೆರಿಕ ಮತ್ತು ಇಸ್ರೇಲ್ ಸಂಘಟಿತವಾಗಿ ನಡೆಸಿದ ವಾಯುದಾಳಿಗಳಿಂದ ಇರಾನ್ ನಗರಗಳಲ್ಲಿ ಭಾರಿ ವಿನಾಶ ಸಂಭವಿಸಿದೆ. ಈ ಘಟನೆಯು ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ(air defence system)ಯು ಶತ್ರುವಿನ ಕ್ಷಿಪಣಿಗಳನ್ನು ತಡೆಯುವಲ್ಲಿ ವಿಫಲವಾಗಿರುವುದನ್ನು ಎತ್ತಿ ತೋರಿಸಿದೆ. ಇರಾನ್ ತನ್ನ ಶಸ್ತ್ರಾಸ್ತ್ರಗಳ ಬಲ  ಹೆಚ್ಚಿಸಲು ಇತ್ತೀಚೆಗಷ್ಟೇ ಚೀನಾದಿಂದ ಖರೀದಿಸಿದ್ದ HQ-9B ವಾಯು ರಕ್ಷಣಾ ವ್ಯವಸ್ಥೆಯು ಶತ್ರು ದೇಶಗಳ ಕ್ಷಿಪಣಿಗಳನ್ನು … Continued

ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

ಇಸ್ರೇಲ್ ರಕ್ಷಣಾ ಪಡೆಗಳು (IDF) ಇರಾನಿನ ಪಶ್ಚಿಮ, ಪೂರ್ವ ಮತ್ತು ಮಧ್ಯ ಭಾಗದಲ್ಲಿರುವ ಆರು ವಿಮಾನ ನಿಲ್ದಾಣಗಳ ಮೇಲೆ ಸಂಘಟಿತ ವಾಯುದಾಳಿ ನಡೆಸಿದ್ದು, 15 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದೆ. ದೂರದಿಂದಲೇ ಮಾನವಸಹಿತ ವಿಮಾನಗಳು, ರನ್‌ವೇಗಳು, ಭೂಗತ ಬಂಕರ್‌ಗಳು ಮತ್ತು F-14s, F-5s, AH-1 ಹೆಲಿಕಾಪ್ಟರ್‌ಗಳು ಮತ್ತು ಇಂಧನ ತುಂಬುವ ವಿಮಾನ ಸೇರಿದಂತೆ … Continued

ವೀಡಿಯೊ…| ಇರಾನಿನ ಎರಡು F-5 ಯುದ್ಧ ವಿಮಾನ, 8 ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣಾ ವಾಹನ ನಾಶಪಡಿಸಿದ ಇಸ್ರೇಲ್‌

ಇರಾನ್‌ನಾದ್ಯಂತ ಡಜನ್ಗಟ್ಟಲೆ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ರಾತ್ರಿಯಿಡೀ ನಡೆಸಿದ ವ್ಯಾಪಕ ಕಾರ್ಯಾಚರಣೆಯಲ್ಲಿ ಇರಾನಿನ ಎರಡು ಯುದ್ಧ ವಿಮಾನಗಳು ಮತ್ತು ಎಂಟು ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣಾ ವಾಹನಗಳನ್ನು ನಾಶಪಡಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ಭಾನುವಾರ ತಿಳಿಸಿವೆ. 20 ಇಸ್ರೇಲಿ ಯುದ್ಧ ವಿಮಾನಗಳು ನಡೆಸಿದ ಈ ದಾಳಿಗಳು ಡೆಜ್‌ಫುಲ್ ಮತ್ತು ಇಸ್ಫಹಾನ್ ವಿಮಾನ ನಿಲ್ದಾಣಗಳು ಸೇರಿದಂತೆ … Continued

ಇರಾನ್‌ ಪರಮೋಚ್ಚ ನಾಯಕ ಖಮೇನಿ ಎಲ್ಲಿ ಅಡಗಿದ್ದಾರೆಂದು ಅಮೆರಿಕಕ್ಕೆ ಗೊತ್ತಿದೆ : ಬೇಷರತ್ತಾಗಿ ಶರಣಾಗಿ ; ಇರಾನಿಗೆ ಟ್ರಂಪ್ ಕರೆ

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಇರಾನ್ ನಾಯಕತ್ವಕ್ಕೆ ಎಚ್ಚರಿಕೆ ನೀಡಿದ್ದು, ಅಮೆರಿಕಕ್ಕೆ ಇರಾನಿನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಎಲ್ಲಿ ಅಡಗಿದ್ದಾರೆ ಎಂಬುದು ನಮಗೆ ನಿಖರವಾಗಿ ತಿಳಿದಿದೆ ಮತ್ತು ಅವರನ್ನು ಅಲ್ಲಿಂದ “ಹೊರಗೆ ಬರುವಂತೆ ಮಾಡಬಹುದು”, ಆದರೆ ಅಮೆರಿಕ ಈಗ ಅದನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಟ್ರಂಪ್ ಇರಾನ್‌ನ … Continued

ರಕ್ಷಣಾ ವ್ಯವಸ್ಥೆ ಭೇದಿಸಿ ಇಸ್ರೇಲ್ ರಕ್ಷಣಾ ಕೇಂದ್ರ ಕಚೇರಿಗೆ ಅಪ್ಪಳಿಸಿದ ಇರಾನ್‌ ಕ್ಷಿಪಣಿ : ಅದು ಅಪ್ಪಳಿಸಿದ ಕ್ಷಣದ ದೃಶ್ಯ ವೀಡಿಯೊದಲ್ಲಿ ಸೆರೆ

ಮಧ್ಯಪ್ರಾಚ್ಯ ಉದ್ವಿಗ್ನತೆಯ ನಡುವೆ ಇಸ್ರೇಲ್ ಅನ್ನು ಕ್ಷಿಪಣಿಗಳ ದಾಳಿಯಿಂದ ರಕ್ಷಿಸುತ್ತಿದ್ದ ಐರನ್ ಡೋಮ್ ವಾಯು ರಕ್ಷಣೆಯ ವೈಫಲ್ಯದಲ್ಲಿ ಇರಾನ್ ಟೆಲ್ ಅವಿವ್‌ನಲ್ಲಿರುವ ಇಸ್ರೇಲ್ ರಕ್ಷಣಾ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿದೆ. 24 ಗಂಟೆಗಳ ಒಳಗೆ ಇರಾನ್ ಮೇಲೆ ಇಸ್ರೇಲ್ ನಡೆಸಿದ ಎರಡು ಅಲೆಗಳ ವಾಯುದಾಳಿಯ ನಂತರ ಇರಾನ್ ಪ್ರತಿದಾಳಿ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ … Continued

ಇರಾನಿನ ಪರಮಾಣು, ಕ್ಷಿಪಣಿ ನೆಲೆಗಳ ಮೇಲೆ ಇಸ್ರೇಲ್ ವಾಯು ದಾಳಿ; ದಾಳಿಯಲ್ಲಿ ಇರಾನಿನ ಇಬ್ಬರು ಉನ್ನತ ಮಿಲಿಟರಿ ಮುಖ್ಯಸ್ಥರ ಸಾವು

ಇಸ್ರೇಲ್ ಶುಕ್ರವಾರ ಮುಂಜಾನೆ ಇರಾನ್ ವಿರುದ್ಧ ಆಪರೇಷನ್ ಲಯನ್ ಎಂದು ಹೆಸರಿಸಲಾದ ದೊಡ್ಡ ಪ್ರಮಾಣದ ಮಿಲಿಟರಿ ದಾಳಿ ನಡೆಸಿತು. ಇದು ಇರಾನಿನ ನಿರ್ಣಾಯಕ ಪರಮಾಣು ಶಸ್ತ್ರಾಗಾರ ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇರಾನಿನ ನಗರಗಳಲ್ಲಿ ಬಹು ಸ್ಫೋಟಗಳು ವರದಿಯಾಗಿವೆ. ಇರಾನಿನ ಪರಮಾಣು ಶಸ್ತ್ರಾಗಾರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ನ 12ಕ್ಕೂ ಅಧಿಕ ಜೆಟ್ ಗಳು ಶುಕ್ರವಾರ … Continued