
ದಿಸ್ಪುರ್: ಇತ್ತೀಚೆಗೆ ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವಾಹನದ ಮೇಲೆ ಖಡ್ಗಮೃಗ (Rhinoceros) ದಾಳಿಗೆ ಮುಂದಾಗಿದ್ದು, ಅದು ಸಫಾರಿ ಜೀಪನ್ನೇ ಎತ್ತಿದೆ. ಈ ಘಟನೆಯಿಂದ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೊದಲ್ಲಿ ಖಡ್ಗಮೃಗವು ಜೀಪ್ ನಿಲ್ಲಿಸಿದ್ದ ರಸ್ತೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಅಲ್ಲದೆ, ನಂತರ ಖಡ್ಗಮೃಗವು ಜೀಪ್ ಅನ್ನು ಕೆಡವಲು ಕೂಡ ಪ್ರಯತ್ನಿಸಿದಂತೆ ಕಂಡುಬಂದಿದೆ. ಆದರೆ,ಈ ಘಟನೆಯಲ್ಲಿ ಪ್ರವಾಸಿಗರಿಗೆ ಯಾವುದೇ ಹಾನಿಯಾಗಲಿಲ್ಲ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ ಎರಡು ಸಫಾರಿ ಜೀಪಿನ ಬಳಿ ಬೃಹತ್ ಖಡ್ಗಮೃಗವೊಂದು ನಿಂತಿರುವುದು ಕಂಡುಬಂದಿದೆ. ಸ್ವಲ್ಪಹೊತ್ತು ಪ್ರವಾಸಿಗರನ್ನು ದಿಟ್ಟಿಸಿ ನೋಡಿದ ಖಡ್ಗಮೃಗ ನಂತರ ಮುಂದಿದ್ದ ಸಫಾರಿ ಜೀಪ್ ಅನ್ನು ಎತ್ತಿ ಅಲ್ಲಾಡಿಸಿದೆ. ನಂತರ ಚಾಲಕ ಜೀಪ್ ಅನ್ನು ಹಿಂದಕ್ಕೆ ತೆಗೆದುಕೊಂಡು ಅಲ್ಲಿಂದ ತಿರುಗಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಖಡ್ಗಮೃಗವು ಜೀಪ್ ಸುತ್ತುವರಿದು ಬಂದು ಮತ್ತೊಂದು ಪಕ್ಕದಲ್ಲಿದ್ದ ಪ್ರವಾಸಿಗರ ಬಳಿ ಹೋಗಿದೆ, ಜೀಪ್‌ನ ಸೀಟಿನ ಮೇಲೆ ತಲೆಹಾಕಿದೆ. ಪ್ರವಾಸಿಗರು ಹೆದರಿ ಸೀಟಿನ ಮತ್ತೊಂದು ಪಕ್ಕಕ್ಕೆ ಸರಿದು ನಿಂತುಕೊಂಡಿರುವುದು ಕಂಡುಬಂದಿದೆ. ಅಷ್ಟೇ ಹೊತ್ತಿಗೆ ವೀಡಿಯೊ ಮುಕ್ತಾಯವಾಗಿದೆ. ಘಟನೆಯ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಇಂತಹ ಘಟನೆ ಮರಳಿ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮತ್ತೊಂದು ವೀಡಿಯೊದಲ್ಲಿ ಖಡ್ಗಮೃಗವು ವಾಹನವನ್ನು ಹಲವು ಬಾರಿ ಉರುಳಿಸಲು ಪ್ರಯತ್ನಿಸುತ್ತಿರುವುದು ಕೂಡ ಕಂಡುಬರುತ್ತದೆ. ಆದಾಗ್ಯೂ, ಪ್ರವಾಸಿಗರು ಹಾನಿಯಿಂದ ಪಾರಾಗಿದ್ದಾರೆ.
ಕ್ಷಣಗಳ ನಂತರ, ಒಂದೆರಡು ಜನ ಪ್ರಾಣಿಯನ್ನು ಹೆದರಿಸಿ ಓಡಿಸುತ್ತಿರುವುದು ಕಂಡುಬಂದಿದೆ. ಅಷ್ಟು ಹೊತ್ತಿಗೆ ವೀಡಿಯೊ ಮುಕ್ತಾಯವಾಗಿದೆ. ಘಟನೆಯ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಇಂತಹ ಘಟನೆ ಮರಳಿ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಫಾರಿಯ ಸಮಯದಲ್ಲಿ ಖಡ್ಗಮೃಗವು ದಾಳಿ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಅಸ್ಸಾಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಘಟನೆಯಲ್ಲಿ ಸಫಾರಿ ಮಾಡುತ್ತಿದ್ದ ವೇಳೆ ಖಡ್ಗಮೃಗದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ತಾಯಿ-ಮಗಳ ಜೋಡಿ ಜೀಪ್‍ನಿಂದ ಕೆಳಗೆ ಬಿದ್ದಿದ್ದು, ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ