ಅಮೆರಿಕದಿಂದ ಭೂದಾಳಿಯ ಭೀತಿ : 10 ಲಕ್ಷಕ್ಕೂ ಹೆಚ್ಚು ಸೈನಿಕರನ್ನು ಸಜ್ಜುಗೊಳಿಸಿದ ಇರಾನ್….!

ತೆಹ್ರಾನ್: ಅಮೆರಿಕವು ತನ್ನ ದೇಶದ ಮೇಲೆ ಭೂಸೇನೆಯ ಮೂಲಕ ದಾಳಿ ಮಾಡಬಹುದೆಂಬ ಭೀತಿಯ ನಡುವೆ, ಇರಾನ್ ತನ್ನ ರಕ್ಷಣಾ ಪಡೆಯನ್ನು ಬೃಹತ್ ಮಟ್ಟದಲ್ಲಿ ಸಜ್ಜುಗೊಳಿಸಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಸೈನಿಕರು ಮತ್ತು ಹೋರಾಟಗಾರರು ಅಮೆರಿಕದ ಸಂಭಾವ್ಯ ಆಕ್ರಮಣವನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು ಇರಾನ್ ಹೇಳಿದೆ. ಅಮೆರಿಕವು ಭೂದಾಳಿ ನಡೆಸಲು ಮುಂದಾಗಬಹುದು ಎಂಬುದು ಇರಾನ್ ಜನರಲ್ಲಿ … Continued

ಯುದ್ಧ ಕೊನೆಗೊಳಿಸುವ ಅಮೆರಿಕದ ಪ್ರಸ್ತಾವನೆ ತಿರಸ್ಕರಿಸಿದ ಇರಾನ್ ; ಐದು ಕಠಿಣ ಷರತ್ತುಗಳನ್ನು ಮುಂದಿಟ್ಟ ತೆಹ್ರಾನ್‌ : ವರದಿ

ಅಮೆರಿಕವು ಯುದ್ಧವನ್ನು ಕೊನೆಗೊಳಿಸಲು ಮುಂದಿಟ್ಟಿರುವ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ. ಯುದ್ಧವನ್ನು ತನ್ನದೇ ಆದ ನಿಯಮಗಳು ಮತ್ತು ಷರತ್ತುಗಳ ಮೇಲೆ ಕೊನೆಗೊಳಿಸುವುದಾಗಿ ಇರಾನ್ ಹೇಳಿದೆ. ಅಮೆರಿಕದ ಈ ಪ್ರಸ್ತಾವನೆಯು “ಅತಿಯಾದ ಬೇಡಿಕೆಗಳಿಂದ ಕೂಡಿದೆ” ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ‘ಪ್ರೆಸ್ ಟಿವಿ’ಗೆ ತಿಳಿಸಿದ್ದಾರೆ. “ಇರಾನ್ ಯಾವಾಗ ನಿರ್ಧರಿಸುತ್ತದೆಯೋ ಮತ್ತು ಅದರ ಷರತ್ತುಗಳು ಯಾವಾಗ ಈಡೇರುತ್ತವೆಯೋ ಆಗ ಮಾತ್ರ … Continued

ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳಿಗೆ ಇರಾನಿನಿಂದ 18 ಕೋಟಿ ರೂಪಾಯಿಗೂ ಹೆಚ್ಚು ಸುಂಕ…!

ತೆಹ್ರಾನ್‌ : ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಸಂಘರ್ಷದ ನಡುವೆ, ಜಾಗತಿಕ ಹಡಗು ಸಂಚಾರದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ (Strait of Hormuz) ಮೇಲೆ ತನ್ನ ನಿಯಂತ್ರಣವನ್ನು ಸಾಧಿಸಲು ಇರಾನ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕೆಲವು ಹಡಗುಗಳು ಜಲಸಂಧಿಯನ್ನು ದಾಟಲು 2 ಮಿಲಿಯನ್ ಡಾಲರ್ (ಸುಮಾರು 18.8 ಕೋಟಿ ರೂಪಾಯಿ) ಶುಲ್ಕವನ್ನು ಪಾವತಿಸುವಂತೆ ಇರಾನ್ … Continued

ಹಾರ್ಮುಜ್ ಜಲಸಂಧಿ ಉಳಿದವರಿಗೆ ತೆರೆದಿದೆ, ಶತ್ರುಗಳಿಗೆ ಮಾತ್ರ ಬಂದ್ ; ಅಮೆರಿಕ ಎಚ್ಚರಿಕೆಯ ನಂತರ ಇರಾನ್‌

ತೆಹ್ರಾನ್: ಇರಾನ್‌ ಸಂಘರ್ಷದಿಂದ ಕಚ್ಚಾ ತೈಲದ ಬಗ್ಗೆ ಜಾಗತಿಕವಾಗಿ ಅನಿಶ್ಚಿತತೆ ಉಂಟಾಗಿರುವ ಬೆನ್ನಲ್ಲೇ, ಇರಾನ್ ಭಾನುವಾರ ಮಹತ್ವದ ಹೇಳಿಕೆ ನೀಡಿದೆ. ಹಾರ್ಮುಜ್ ಜಲಸಂಧಿಯು (Strait of Hormuz) ತೆರೆದಿದೆ, ಆದರೆ ಅದು ಇರಾನ್ ಶತ್ರುಗಳಿಗೆ ಮಾತ್ರ ಮುಚ್ಚಲ್ಪಟ್ಟಿದೆ ಎಂದು ಇರಾನ್ ತಿಳಿಸಿದೆ. ವಿದೇಶಿ ಹಡಗುಗಳು ‘ಸುರಕ್ಷತೆ ಮತ್ತು ಭದ್ರತೆ’ಗಾಗಿ ಇರಾನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದರೆ, ಈ … Continued

ಹೊಟೇಲ್‌, ರೆಸ್ಟೋರೆಂಟ್​​ಗಳಿಗೆ ಗುಡ್ ನ್ಯೂಸ್: ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಹೆಚ್ಚಳ ಮಾಡಿದ ಕೇಂದ್ರ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ದೇಶದ ಇಂಧನ ಭದ್ರತೆ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಪೂರೈಕೆಯಲ್ಲಿ ರಾಜ್ಯಗಳಿಗೆ ಹೆಚ್ಚುವರಿ ಶೇ. 20ರಷ್ಟು ಸಿಲಿಂಡರ್‌ಗಳನ್ನು ನೀಡಲು ಸರ್ಕಾರ ಅನುಮೋದನೆ ನೀಡಿದೆ. ಇದರಿಂದಾಗಿ ಒಟ್ಟಾರೆ ಹಂಚಿಕೆಯು ಶೇ. 50ಕ್ಕೆ ಏರಿಕೆಯಾಗಲಿದೆ. … Continued

ಉನ್ನತ ನಾಯಕರ ಸಾವು, ಸಾರ್ವಜನಿಕವಾಗಿ ಕಾಣಿಸದ ಸುಪ್ರೀಂ ಲೀಡರ್ : ಹಾಗಾದ್ರೆ ಈಗ ಇರಾನ್ ಮುನ್ನಡೆಸುತ್ತಿರೋದು ಯಾರು?

ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧ ಆರಂಭವಾಗಿ ಮೂರು ವಾರಗಳು ಕಳೆದಿವೆ. ಆದರೆ ಈಗ ಇರಾನ್ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಕೇವಲ ಯುದ್ಧರಂಗದ ಕ್ಷಿಪಣಿಗಳಲ್ಲ, ಬದಲಾಗಿ ದೇಶದ ‘ಅಧಿಕಾರ ಕೇಂದ್ರ’ ಯಾರ ಬಳಿಯಿದೆ ಎಂಬುದು. ಇರಾನಿನ ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಮತ್ತು ಅವರ ನಂತರದ ಪ್ರಭಾವಿ ನಾಯಕ ಅಲಿ ಲಾರಿಜಾನಿ ಅವರ … Continued

ʼತೈಲ ಯುದ್ಧʼವಾಗಿ ಮಾರ್ಪಟ್ಟ ಇರಾನ್‌ ಯುದ್ಧ ; ಕತಾರಿನ ಅತಿದೊಡ್ಡ ಅನಿಲ ಕೇಂದ್ರದ ಮೇಲೆ ಇರಾನ್ ದಾಳಿ ; ಭಾರತದ ಮೇಲೆ ಪರಿಣಾಮ ಏನು..?

ನವದೆಹಲಿ: ಸುಮಾರು ಮೂರು ವಾರಗಳ ಹಿಂದೆ ಇರಾನ್ ಮೇಲೆ ಇಸ್ರೇಲ್‌ನ ಮೊದಲ ಕ್ಷಿಪಣಿ ಬಿದ್ದಾಗಲೇ ಜಗತ್ತಿಗೆ ಆ ಕಹಿ ಸತ್ಯ ತಿಳಿದಿತ್ತು. ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವು ಕಳೆದ 24 ಗಂಟೆಗಳಲ್ಲಿ ಅತ್ಯಂತ ಅಪಾಯಕಾರಿ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ಈಗ ಅದು ಪೂರ್ಣ ಪ್ರಮಾಣದ “ತೈಲ ಯುದ್ಧ”ವಾಗಿ (Oil War) ಬದಲಾಗಿದೆ. ಬುಧವಾರ, ಇರಾನ್ ಮತ್ತು … Continued

ಮಗಳ ಮನೆಗೆ ನೀಡಿದ ಭೇಟಿ ನೀಡಿದ್ದೇ ಮುಳುವಾಯ್ತು : ಇರಾನಿನ ನಂ.2 ನಾಯಕ ಇಸ್ರೇಲ್‌ ಕಣ್ಣಿಗೆ ಬಿದ್ದಿದ್ದು ಹೇಗೆ?

ಇಸ್ರೇಲ್‌ನ ಮೊಸಾದ್ (Mossad) ಮತ್ತು ಗುಪ್ತಚರ ಪಡೆಗಳು ಇರಾನ್‌ನ ಅತ್ಯಂತ ಸುರಕ್ಷಿತ ಹಾಗೂ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ ಅಲಿ ಲಾರಿಜಾನಿಯನ್ನು ಭದ್ರತಾಗೋಡೆಗಳ ಮಧ್ಯೆ  ಪತ್ತೆಹಚ್ಚಿರುವುದು ಇಸ್ರೇಲಿನ ಗುಪ್ತಚರ ಸಂಸ್ಥೆಗಳ ಸಾಮರ್ಥ್ಯವನ್ನು ಅನಾವರಣ ಮಾಡುವಂತಿದೆ. ಅಭೇದ್ಯ ಭದ್ರತಾ ಗೋಡೆಗಳ ನಡುವೆ ಅಡಗಿದ್ದ ಇರಾನಿನ “ನಂಬರ್ 2”  ವ್ಯಕ್ತಿಯನ್ನು ಪತ್ತೆ ಹಚ್ಚಿದ ನಂತರ ಇಸ್ರೇಲ್‌ ನಡೆಸಿದ ವಾಯು … Continued

ಇಸ್ರೇಲ್ ದಾಳಿಯಲ್ಲಿ ತಂದೆ, ಹಿರಿಯ ಅಧಿಕಾರಿಗಳು ಸಾವಿಗೀಡಾದರು ; ಆದ್ರೆ ಮೊಜ್ತಾಬಾ ಖಮೇನಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಹೇಗೆ ?

ಇರಾನ್‌ ರಾಜಧಾನಿ ತೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ಸಂದರ್ಭದಲ್ಲಿ ಈಗಿನ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಕೂದಲೆಳೆ ಅಂತರದಲ್ಲಿ ಬದುಕುಳಿದಿರುವುದು ಜಾಗತಿಕ ಗಮನ ಸೆಳೆದಿದೆ. ಹೊರಬರುತ್ತಿರುವ ವಿವರಗಳ ಪ್ರಕಾರ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಬಲಿಪಡೆದ ಅದೇ ದಾಳಿಯಿಂದ ಮೊಜ್ತಾಬಾ ಕೆಲವೇ ಸೆಕೆಂಡುಗಳ ವ್ಯತ್ಯಾಸದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. … Continued

ವಾಯು ದಾಳಿಯಲ್ಲಿ ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ, ಕಮಾಂಡರ್ ಗುಲಾಮ್ರೆಜಾ ಸೊಲೈಮಾನಿ ಸಾವು : ಇಸ್ರೇಲ್ ಹೇಳಿಕೆ

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಮಂಗಳವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಮತ್ತು ಉನ್ನತ ಕಮಾಂಡರ್ ಘೋಲಮ್ರೆಜಾ ಸೊಲೈಮನಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಆದರೆ, ಇರಾನ್ ಈ ವರದಿಯನ್ನು ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ.  ಇರಾನ್ ರಾಜಧಾನಿ ತೆಹ್ರಾನ್ ಸೇರಿದಂತೆ … Continued