ದಾಳಿಗೆ ಪ್ರತಿದಾಳಿ ; ಬಹ್ರೇನ್, ಕುವೈತ್, ಯುಎಇಯಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಪ್ರತಿ ದಾಳಿ ನಡೆಸಿದ ಇರಾನ್‌

ಅಮೆರಿಕದ ಸಹಾಯದೊಂದಿಗೆ ಇಸ್ರೇಲ್ (ಟೆಲ್ ಅವಿವ್), ಇರಾನಿನ ತೆಹ್ರಾನ್ ಮೇಲೆ ಶನಿವಾರ ಬೆಳಿಗ್ಗೆ  ಮುನ್ನೆಚ್ಚರಿಕಾ ದಾಳಿ (preemptive attack) ನಡೆಸಿದ ನಂತರಈ ದಾಳಿಗೆ ಪ್ರತಿಯಾಗಿ ಇರಾನ್ ಇಸ್ರೇಲ್ ಕಡೆಗೆ “ಕ್ಷಿಪಣಿಗಳ ಸುರಿಮಳೆ” ಗರೆದಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಅಮೆರಿಕದ ನೇತೃತ್ವದ ದಾಳಿಗಳಿಗೆ “ಪ್ರತ್ಯುತ್ತರವಾಗಿ ಇರಾನ್‌,  ಯುಎಇ, ಬಹ್ರೇನ್, ಕತಾರ್ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕ ನೆಲೆಗಳ … Continued

ವೀಡಿಯೊ | ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ: ತೆಹ್ರಾನ್‌ನಲ್ಲಿ ಸರಣಿ ಸ್ಫೋಟ, ಇರಾನ್‌ನಲ್ಲಿ ಯುದ್ಧದ ಭೀತಿ

ತೆಹ್ರಾನ್/ಟೆಲ್ ಅವಿವ್: ಶನಿವಾರ ಮುಂಜಾನೆ ಇರಾನ್ ರಾಜಧಾನಿ ತೆಹ್ರಾನ್‌ನಲ್ಲಿ ಭೀಕರ ಸ್ಫೋಟದ ಸದ್ದು ಕೇಳಿಬಂದಿದೆ. ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ‘ಮುನ್ನೆಚ್ಚರಿಕೆ ದಾಳಿ’ (Preemptive attack) ನಡೆಸಿದ್ದು, ಇದು ಮಧ್ಯಪ್ರಾಚ್ಯವನ್ನು ಮತ್ತೊಮ್ಮೆ ಮಿಲಿಟರಿ ಸಂಘರ್ಷಕ್ಕೆ ತಳ್ಳಿದೆ. ಇದರಿಂದಾಗಿ ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಆಶಯಗಳು ಮತ್ತಷ್ಟು ಕ್ಷೀಣಿಸಿವೆ. ಖಮೇನಿ ಕಚೇರಿ ಬಳಿ ದಾಳಿ: ವರದಿಗಳ ಪ್ರಕಾರ, … Continued

ವೀಡಿಯೊ..| ಇಸ್ರೇಲ್ ಪ್ರಧಾನಿ ಕಿಡ್ನ್ಯಾಪ್ ಮಾಡಿ ಎಂದು ಅಮೆರಿಕಕ್ಕೆ ಸೂಚಿಸಿದ ಪಾಕ್ ಸಚಿವ ; ಗಾಬರಿಬಿದ್ದು ಬ್ರೇಕ್‌ ತೆಗೆದುಕೊಂಡ ಟಿವಿ ನಿರೂಪಕ…!

ಇಸ್ಲಾಮಾಬಾದ್: ಗಾಜಾ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸುವ ಭರದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು “ಅಪಹರಿಸುವಂತೆ” ಕರೆ ನೀಡುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಜಿಯೋ ನ್ಯೂಸ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖವಾಜಾ ಆಸಿಫ್, “ನೆತನ್ಯಾಹು ಮಾನವಕುಲದ ಅತಿದೊಡ್ಡ ಅಪರಾಧಿ. ಅಮೆರಿಕ … Continued

ಗಾಜಾಕ್ಕೆ ಪಾಕ್ ಸೈನ್ಯ ; ಅಮೆರಿಕ ಅಧ್ಯಕ್ಷ ಟ್ರಂಪ್ ಒತ್ತಡಕ್ಕೆ ಇಕ್ಕಟ್ಟಿನಲ್ಲಿ ಸಿಲುಕಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ

ಇಸ್ಲಾಮಾಬಾದ್/ವಾಷಿಂಗ್ಟನ್ : ಪಾಕಿಸ್ತಾನದ ಅತ್ಯಂತ ಪ್ರಭಾವಿ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಪ್ಯಾಲೆಸ್ತೈನ್‌ನ ಯುದ್ಧ ಪೀಡಿತ ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪಿಸಲು ಪಾಕಿಸ್ತಾನಿ ಸೈನ್ಯವನ್ನು ಕಳುಹಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹೇರುತ್ತಿರುವುದು ಮುನೀರ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ … Continued

ವೀಡಿಯೊ | 7 ಕಿಮೀ ಉದ್ದ, 25 ಮೀಟರ್ ಆಳ, 80 ಕೊಠಡಿಗಳಿರುವ ಸುರಂಗ : ಗಾಝಾದಲ್ಲಿ ಹಮಾಸ್‌ ನ ಬೃಹತ್ ಸುರಂಗ ಪತ್ತೆಹಚ್ಚಿದ ಇಸ್ರೇಲ್

ಇಸ್ರೇಲ್ ರಕ್ಷಣಾ ಪಡೆಗಳು (IDF) ಗಾಝಾ ಪಟ್ಟಿಯಲ್ಲಿ ಹಮಾಸ್‌ನ ಬೃಹತ್ ಸುರಂಗ ಜಾಲವನ್ನು ಪತ್ತೆಹಚ್ಚಿದ್ದು, ಅಲ್ಲಿ ಲೆಫ್ಟಿನೆಂಟ್ ಹಾದರ್ ಗೋಲ್ಡಿನ್ ಅವರ ದೇಹವನ್ನು ಹಲವು ವರ್ಷಗಳ ಕಾಲ ರಹಸ್ಯವಾಗಿ ಇರಿಸಲಾಗಿತ್ತು. ಐಡಿಎಫ್‌ (IDF) ಅಧಿಕಾರಿಯಾಗಿದ್ದ ಗೋಲ್ಡಿನ್ ಅವರು 2014 ರ ಇಸ್ರೇಲ್-ಹಮಾಸ್ ಯುದ್ಧದ ವೇಳೆ ದಾಳಿಯಲ್ಲಿ ಮೃತಪಟ್ಟಿದ್ದರು. ರಹಸ್ಯ ಕಾರ್ಯಾಚರಣೆಗಳ ಬಳಿಕ ಈ ತಿಂಗಳ ಆರಂಭದಲ್ಲಿ … Continued

ವೀಡಿಯೊ…| ಇಸ್ರೇಲ್ ಸಂಸತ್ತಿನಲ್ಲಿ ಟ್ರಂಪ್ ಭಾಷಣಕ್ಕೆ ತೀವ್ರ ಅಡ್ಡಿ; ಸಂಸದರನ್ನು ಹೊರಗೆ ಎಳೆದೊಯ್ದ ಭದ್ರತಾ ಸಿಬ್ಬಂದಿ

ಜೆರುಸಲೇಂ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಸಂಸತ್ತನ್ನು (ನೆಸೆಟ್) ಉದ್ದೇಶಿಸಿ ಮಾತನಾಡುತ್ತಿದ್ದಾಗ ಪ್ರತಿಭಟನಕಾರರು ಅಲ್ಪಕಾಲ ಅಡ್ಡಿಪಡಿಸಿದರು. ಭಾಷಣಕ್ಕೆ ಅಡ್ಡಿಪಡಿಸಿದ ನಂತರ ಸಂಸತ್‌ ಸದಸ್ಯರಿಬ್ಬರನ್ನು ತಕ್ಷಣವೇ ಹೊರಹಾಕಲಾಯಿತು. ಹದಶ್-ತಾಲ್ ಜಂಟಿ ಪಕ್ಷದ ಸದಸ್ಯರಾದ ಓಫರ್ ಕಾಸಿಫ್ ಮತ್ತು ಐಮೆನ್ ಓಡೆಹ್ ಅವರನ್ನು ಭದ್ರತಾ ಸಿಬ್ಬಂದಿ ಹೊರಗೆ ಕರೆದೊಯ್ದರು. ಅವರಲ್ಲಿ ಒಬ್ಬರು ‘ಜನಸಂಹಾರ’ (Genocide) ಎಂದು … Continued

ವೀಡಿಯೊ | ‘ಭಯೋತ್ಪಾದನೆಯ ಸರ್ಕಾರಿ ಪ್ರಾಯೋಜಕ..’: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬೆವರಿಳಿಸಿದ ಯುಎನ್ ವಾಚ್‌ನ ಕಾರ್ಯನಿರ್ವಾಹಕ ನಿರ್ದೇಶಕ !

ವಿಶ್ವಸಂಸ್ಥೆ : ಇತ್ತೀಚೆಗೆ ಕತಾರ್ ಮೇಲೆ ಇಸ್ರೇಲ್ ನಡೆಸಿದ ದಾಳಿಗಳ ಬಗ್ಗೆ ಚರ್ಚಿಸಲು ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವಕೀಲರು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರವನ್ನು ಟೀಕಿಸಿದ ನಂತರ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವು ಮುಜುಗರಕ್ಕೊಳಗಾದ ಪ್ರಸಂಗ ನಡೆಯಿತು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ, ಮಾನವ ಹಕ್ಕುಗಳ ವಕೀಲ ಮತ್ತು ಯುಎನ್ ವಾಚ್‌ನ ಕಾರ್ಯನಿರ್ವಾಹಕ … Continued

ವೀಡಿಯೊ…| “ನ್ಯೂಕ್ ಇಂಡಿಯಾ”, “ಕಿಲ್‌ ಡೊನಾಲ್ಡ್‌ ಟ್ರಂಪ್”: ಮಿನ್ನಿಯಾಪೋಲಿಸ್ ಶೂಟರ್‌ ಬಂದೂಕಿನಲ್ಲಿ ಭಯಾನಕ ಸಂದೇಶಗಳು…!

ಅಮೆರಿಕದ ಮಿನ್ನಿಯಾಪೋಲಿಸ್ ನಗರದಲ್ಲಿ ಚರ್ಚ್ ಸೇವೆಯಲ್ಲಿ ಭಾಗವಹಿಸಿದ್ದ ಶಾಲಾ ಮಕ್ಕಳ ಮೇಲೆ ಬುಧವಾರ ಗುಂಡು ಹಾರಿಸಿ ಇಬ್ಬರು ವಿದ್ಯಾರ್ಥಿಗಳನ್ನು ಕೊಂದ ಶೂಟರ್, ತನ್ನ ಬಂದೂಕುಗಳ ಮೇಲೆ ” ಕಿಲ್‌ ಡೊನಾಲ್ಡ್ ಟ್ರಂಪ್ (kill Donald Trump) ” ಮತ್ತು “ನ್ಯೂಕ್ ಇಂಡಿಯಾ (“nuke India)” ಎಂದು ಬರೆದಿರುವುದನ್ನು ಈಗ ಅಳಿಸಲಾಗಿರುವ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊ ತೋರಿಸಿದೆ. … Continued

ಗಾಜಾ ಮೇಲೆ ಇಸ್ರೇಲ್‌ ದಾಳಿಯಲ್ಲಿ 5 ಅಲ್ ಜಜೀರಾ ಪತ್ರಕರ್ತರು ಸಾವು, ಓರ್ವ ಪತ್ರಕರ್ತ “ಹಮಾಸ್ ಭಯೋತ್ಪಾದಕ” ಎಂದ ಇಸ್ರೇಲ್

ಗಾಜಾ: ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯ ಬಳಿ ಇಸ್ರೇಲಿ ನಡೆಸಿದ ದಾಳಿಯಲ್ಲಿ ಕನಿಷ್ಠ ಐದು ಅಲ್ ಜಜೀರಾ ಪತ್ರಕರ್ತರು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಅಲ್ ಜಜೀರಾ ವರದಿಗಾರರಾದ ಅನಾಸ್ ಅಲ್-ಶರೀಫ್ ಮತ್ತು ಮೊಹಮ್ಮದ್ ಕ್ರೈಖೆ, ಹಾಗೆಯೇ ಕ್ಯಾಮೆರಾಮೆನ್ ಇಬ್ರಾಹಿಂ ಜಹೀರ್, ಮೊವಾಮೆನ್ ಅಲಿವಾ ಮತ್ತು ಮೊಹಮ್ಮದ್ ನೌಫಲ್ ಸೇರಿದ್ದಾರೆ ಎಂದು ಅಲ್ ಜಜೀರಾ ತಿಳಿಸಿದೆ. ಅಲ್-ಶಿಫಾ ಆಸ್ಪತ್ರೆಯ … Continued

ವೀಡಿಯೊ ; ತನ್ನ ಸಮಾಧಿ ತಾನೇ ಅಗೆಯುತ್ತಿರುವ ಇಸ್ರೇಲಿ ಒತ್ತೆಯಾಳುವಿನ ಭಯಾನಕ ವೀಡಿಯೊ ಬಿಡುಗಡೆ ಮಾಡಿದ ಹಮಾಸ್ ಗುಂಪು

ಟೆಲ್ ಅವಿವ್: ಇಸ್ರೇಲಿ ಒತ್ತೆಯಾಳು ಎವ್ಯಾಟರ್ ಡೇವಿಡ್ ಗಾಜಾದಲ್ಲಿ ತನ್ನ ಸಮಾಧಿಯನ್ನು ತಾನೇ ಅಗೆಯುತ್ತಿರುವ ಭಯಾನಕ ವೀಡಿಯೊವನ್ನು ಹಮಾಸ್ ಬಿಡುಗಡೆ ಮಾಡಿದೆ. ಶನಿವಾರ ಪ್ಯಾಲೆಸ್ಟೀನಿಯನ್ ಉಗ್ರಗಾಮಿ ಗುಂಪು ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಹಸಿವಿನಿಂದ ದೈಹಿಕವಾಗಿ ದುರ್ಬಲವಾಗಿರುವ ಡೇವಿಡ್ ಭೂಗತ ಸುರಂಗದಲ್ಲಿ ತನ್ನ ಸಮಾಧಿಯನ್ನು ತಾನೇ ಅಗೆಯಲು ಸಲಿಕೆಯನ್ನು ಬಳಸುತ್ತಿರುವುದನ್ನು ಕಾಣಬಹುದು. ಅಕ್ಟೋಬರ್ 7 ರಂದು ದಕ್ಷಿಣ … Continued